ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಪ್ರಸ್ತುತ ಜೈಲರ್ 2 ಸಿನಿಮಾದ ಸಕ್ಸಸ್ನಲ್ಲಿದ್ದಾರೆ. ಅಂದ್ಹಾಗೆ ಅವರಿಗೆ ವಯಸ್ಸು 75. ಇನ್ನೂ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹೀಗಿರುವಾಗ ರಜಿನಿಕಾಂತ್ ಅವರ ಫಿಟ್ನೆಸ್ನ ಗುಟ್ಟು ಏನು ಅನ್ನೋ ವಿವರ ಈ ಸ್ಟೋರಿಯಲ್ಲಿ ನೀಡಲಾಗಿದೆ.
ರಜಿನಿಕಾಂತ್ ಅಂದ್ರೆ ಸ್ಫೂರ್ತಿಯ ಚಿಲುಮೆ. ತಮ್ಮ 75ನೇ ವರ್ಷದಲ್ಲೂ ರಜಿನಿಕಾಂತ್ ಫುಲ್ ಆಕ್ಟೀವ್. ದಿನವೀಡಿ ಶೂಟಿಂಗ್ ಅದು ಇದು ಅಂತಾ ಓಡಾಡುತ್ತಲೇ ಇರುತ್ತಾರೆ. ಹಾಗಿದ್ದರೆ 75 ವರ್ಷದ ರಜಿನಿಕಾಂತ್ಗೆ ಸುಸ್ತು ಆಗೋದಿಲ್ವಾ? ಅವರು ಹೇಗೆ ತಮ್ಮ ಫಿಟ್ನೆಸ್ ಮೆಂಟೇನ್ ಮಾಡ್ತಾರೆ? ಈ ಬಗ್ಗೆ ಜೈಲರ್ ಸಿನಿಮಾದಲ್ಲಿ ರಜನಿಕಾಂತ್ ಅವರ ಸಹ ನಟಿ ಮಿರ್ನಾ ಮೆನನ್ ತಿಳಿಸಿದ್ದಾರೆ.
26
ದಿನ ಆರಂಭ ಹೇಗಿರುತ್ತದೆ?
ರಜನಿಕಾಂತ್ ಸೆಟ್ಗೆ ಬರುವ ಮೊದಲು ವ್ಯಾಯಾಮ ಮಾಡಿಯೇ ಬುರುತ್ತಾರೆ
ಜಿಮ್ ಸೌಲಭ್ಯಗಳಿಲ್ಲದ ಸ್ಥಳಗಳಲ್ಲೂ ನಿಯಮಿತವಾಗಿ ವ್ಯಾಯಾಮ ಮಾಡುತ್ತಾರೆ
ತಮ್ಮ ಕೋಣೆಯಲ್ಲಿ ವ್ಯಾಯಾಮಹದ ಸಲಕರಣೆಗಳನ್ನು ಇಟ್ಟುಕೊಂಡಿದ್ದಾರೆ
ತಮ್ಮ ಆರೋಗ್ಯದ ಗುಟ್ಟು ಕಾಪಾಡಿಕೊಳ್ಳಲು ಆಗಾಗ ವ್ಯಾಯಾಮ ಮಾಡುತ್ತಾರೆ
36
ಸ್ವಿಮ್ಮಿಂಗ್
ತಮ್ಮ ದಿನಚರಿಯಲ್ಲಿ ಸ್ವಿಮ್ಮಿಂಗ್ ಲಿಸ್ಟ್ನಲ್ಲಿದೆ ಎಂದು ಹೇಳಲಾಗಿದೆ
ಸ್ವಿಮ್ಮಿಂಗ್ ಹೃದಯದ ಆರೋಗ್ಯವನ್ನು ಚೆನ್ನಾಗಿ ಇಡಲಿದೆ
ಸ್ವಿಮ್ಮಿಂಗ್ ಅನ್ನು ರಜಿನಿಕಾಂತ್ ನಿಯಮಿತವಾಗಿ ಮಾಡುತ್ತಾರೆ
ಟ್ರೆಡ್ಮಿಲ್ ಮೇಲೆ ರಜಿಕಾಂತ್ ನಿತ್ಯವೂ ವಾಕಿಂಗ್ ಮಾಡುತ್ತಾರೆ. ಇದು ಹೃದಯ ಮತ್ತು ಶಾಶ್ವಕೋಶದ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ
56
ಸರಳ ಆಹಾರ ಪದ್ದತಿ
ರಜನಿಕಾಂತ್ ಕಟ್ಟುನಿಟ್ಟಿನ ಮತ್ತು ಸರಳವಾದ ಆಹಾರ ಪದ್ದತಿ ರೂಢಿಸಿಕೊಂಡಿದ್ದಾರೆ
ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರ ಅವೈಡ್ ಮಾಡುತ್ತಾರೆ
ಬಿಳಿ ಆಹಾವನ್ನೂ ತಪ್ಪಿಸುತ್ತಾರೆ (ಬಿಳಿ ಅನ್ನ, ಸಕ್ಕರೆ ಇತರೆ)
ಹೆಚ್ಚುವರಿ ಉಪ್ಪು ಮತ್ತು ಕೊಬ್ಬಿನಾಂಶದ ಆಹಾರ ಸೇವನೆ ಮಾಡಲ್ಲ
ಮಾಹಿತಿಗಳ ಪ್ರಕರಾ ತಮ್ಮ ದಿನಚರಿಗಳನ್ನ ನಿತ್ಯವೂ ಪಾಲಿಸಿಕೊಂಡು ಬರುತ್ತಾರೆ. ಕೆಲಸದ ಒತ್ತಡಗಳ ನಡುವೆ ಅದು ಸಾಧ್ಯವಾಗದಿದ್ದಾಗೂ ಕನ್ಸಿಸ್ಟೆನ್ಸಿ ಕಾಪಾಡಿಕೊಂಡು ಬರುತ್ತಾರೆ.
66
ರಜಿನಿಕಾಂತ್ ಆಹಾರ
ಮಿರ್ನಾ ಮೆನನ್ ನೀಡಿರುವ ಮಾಹಿತಿ ಪ್ರಕಾರ.. ಬೆಳಗ್ಗೆ ಏಳುತ್ತಿದ್ದಂತೆಯೇ ವ್ಯಾಯಾಮ ಮಾಡುತ್ತಾರೆ. ಅವರ ಈ ಅಭ್ಯಾಸ ನನಗೆ ತುಂಬಾ ಇಷ್ಟವಾಯಿತು. ಈಜು ಮತ್ತು ಟ್ರೆಡ್ಮಿಲ್ ರನ್ನಿಂಗ್ ಮಾಡುತ್ತಾರೆ. ನಾವು ಶೂಟಿಂಗ್ ಮಾಡುತ್ತಿದ್ದ ಅನೇಕ ಸ್ಥಳಗಳಲ್ಲಿ ಜಿಮ್ ಸೌಲಭ್ಯಗಳು ಇರಲಿಲ್ಲ. ಆದರೆ ಅವರು ತಮ್ಮ ವ್ಯಾಯಾಮ ಉಪಕರಣಗಳು ತಮ್ಮ ಕೋಣೆಯಲ್ಲಿರುವಂತೆ ನೋಡಿಕೊಂಡರು ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.