Puneeth Rajkumar: ಪರಮಾತ್ಮನಿಲ್ಲದ ಒಂದು ವರುಷ: ಅಭಿಮಾನಿಗಳಿಂದ ಅಪ್ಪು ಪುಣ್ಯಸ್ಮರಣೆ

Published : Oct 29, 2022, 09:38 PM IST

ಪುನೀತ್‌ ರಾಜ್‌ಕುಮಾರ್‌ ಅಗಲಿ ಇಂದಿಗೆ ಒಂದು ವರ್ಷ. ಈ ಹಿನ್ನೆಲೆಯಲ್ಲಿ ಅಪ್ಪು ಸಮಾಧಿ ಸ್ಥಳಕ್ಕೆ ಅಭಿಮಾನಿಗಳು ಆಗಮಿಸಿ, ಅಪ್ಪು ಸ್ಮರಿಸಿ ಭಾವುಕರಾಗಿದ್ದಾರೆ.

PREV
111
Puneeth Rajkumar: ಪರಮಾತ್ಮನಿಲ್ಲದ ಒಂದು ವರುಷ: ಅಭಿಮಾನಿಗಳಿಂದ ಅಪ್ಪು ಪುಣ್ಯಸ್ಮರಣೆ
ಫೋಟೋ: ರವಿ, ಕನ್ನಡಪ್ರಭ

ಅಪ್ಪು ಮೊದಲ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೊ ಬಳಿ ಇಂದು ದಿನವಿಡೀ ಗೀತ ನಮನ ಕಾರ್ಯಕ್ರಮವಿದ್ದು, ಕನ್ನಡ ಚಿತ್ರರಂಗದ ಕಲಾವಿದರು, ಅಪ್ಪು ಅಭಿಮಾನಿಗಳು ಇದರಲ್ಲಿ ಭಾಗಿಯಾಗಿದ್ದಾರೆ. 

211
ಫೋಟೋ: ರವಿ, ಕನ್ನಡಪ್ರಭ

ಸಾಧುಕೋಕಿಲ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಿದ್ದು, ಅವರ ಪುಣ್ಯಸ್ಮರಣೆ ಅಂಗವಾಗಿ ರಾಜ್ಯದ ವಿವಿಧ ಕಡೆ ಅನ್ನದಾನ, ರಕ್ತದಾನ ಏರ್ಪಡಿಸಲಾಗಿತ್ತು.

311
ಫೋಟೋ: ರವಿ, ಕನ್ನಡಪ್ರಭ

ಪುನೀತ್ ಗತಿಸಿ ಒಂದು ವರ್ಷವಾದರೂ ಕರುನಾಡಿನ ಜನತೆಗೆ ದುಃಖ, ಕಣ್ಣೀರು ಮಾತ್ರ ಕಡಿಮೆಯಾಗಿಲ್ಲ. ಕಳೆದ ಒಂದು ವರ್ಷದಿಂದ ಕಣ್ಣೀರಿನಲ್ಲಿಯೇ ಸಾಗುತ್ತಿದ್ದಾರೆ. ನಟನೆಗಿಂತ ಹೆಚ್ಚಾಗಿ ಸಾಮಾಜಿಕ ಕೆಲಸ ಕಾರ್ಯಗಳಿಂದ ಪುನೀತ್ ಜನತೆಗೆ ಹತ್ತಿರವಾದರು. 

411
ಫೋಟೋ: ರವಿ, ಕನ್ನಡಪ್ರಭ

ಪುನೀತ್​ ರಾಜ್​ಕುಮಾರ್​ ಅವರ ಮೊದಲ ವರ್ಷದ ಪುಣ್ಯ ಸ್ಮರಣೆಯ ಹೊಸ್ತಿಲಿನಲ್ಲೇ ‘ಗಂಧದ ಗುಡಿ’ ರಿಲೀಸ್​ ಆಯಿತು. ಇದು ಅವರ ಕನಸಿನ ಪ್ರಾಜೆಕ್ಟ್​. ಹಾಗಾಗಿ ಬಹುತೇಕ ಎಲ್ಲ ಸೆಲೆಬ್ರಿಟಿಗಳು ಇದನ್ನು ನೋಡಿ ಮೆಚ್ಚಿಕೊಂಡಿದ್ದಾರೆ. 

511
ಫೋಟೋ: ರವಿ, ಕನ್ನಡಪ್ರಭ

ಅಭಿಮಾನಿಗಳು ಭಾರೀ ಸಂಭ್ರಮದಿಂದ ಗಂಧದ ಗುಡಿ ಚಿತ್ರವನ್ನು ಸ್ವಾಗತಿಸಿದ್ದು, ಚಿತ್ರ​ಮಂದಿರಗಳಲ್ಲಿ ಪಟಾಕಿ ಸಿಡಿಸಿ, ಪ್ರೇಕ್ಷಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಸಿನಿಮಾ ವೀಕ್ಷಿಸುತ್ತಿದ್ದ ಬಹುತೇಕ ಅಭಿಮಾನಿಗಳು ಅಪ್ಪು ಕಂಡು ಕಣ್ಣೀರಿಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. 

611
ಫೋಟೋ: ರವಿ, ಕನ್ನಡಪ್ರಭ

ಗಂಧದ ಗುಡಿ ಚಿತ್ರ ವೀಕ್ಷಣೆ ಮಾಡಿದ ಅಭಿಮಾನಿಗಳು ಚಿತ್ರಮಂದಿರದಿಂದ ಹೊರ ಬಂದ ನಂತರ ‘ಪುನೀತ್‌ ಅಮರ್‌ ರಹೇ, ಅಪ್ಪುಗೆ ಜೈಕಾರ’ ಎಂದು ಘೋಷಣೆ ಹಾಕಿದ್ದಾರೆ.

711
ಫೋಟೋ: ರವಿ, ಕನ್ನಡಪ್ರಭ

ಮಕ್ಕಳೊಂದಿಗೆ ಸಿನಿಮಾ ನೋಡಲು ಬಂದವರು ಪುನೀತ್‌ ಅವರ ಪೋಸ್ಟರ್‌ಗಳಿಗೆ ಕೈಮುಗಿದು ಚಿತ್ರಮಂದಿರಗಳಿಗೆ ಪ್ರವೇಶಿಸಿದರು. ಕೆಲವು ಚಿತ್ರಮಂದಿರಗಳ ಮುಂದೆ ಅಭಿಮಾನಿಗಳಿಂದ ಪ್ರೇಕ್ಷಕರಿಗೆ ಗಿಡಗಳನ್ನು ವಿತರಿಸುವ ಮೂಲಕ ‘ಗಂಧದಗುಡಿ’ ಚಿತ್ರವನ್ನು ಖುಷಿಯಿಂದ ಬರಮಾಡಿಕೊಳ್ಳುವ ಜತೆಗೆ ಪುನೀತ್‌ ಅವರ ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಮಾಡಲಾಯಿತು. 

811
ಫೋಟೋ: ರವಿ, ಕನ್ನಡಪ್ರಭ

ಬಹುತೇಕ ಎಲ್ಲ ಚಿತ್ರಮಂದಿರಗಳ ಮುಂದೆಯೂ ಡಾ.ರಾಜ್‌ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರನ್ನೊಳಗೊಂಡ ಕಟೌಟ್‌ಗಳು ರಾರಾಜಿಸಿದವು. ಬೆಂಗಳೂರು ನಗರದಲ್ಲಿ ಮೊದಲ ದಿನವೇ 300 ಶೋ ಸೇರಿ ರಾಜ್ಯಾದ್ಯಂತ 1800 ಶೋಗಳನ್ನು ಕಾಣುವ ಮೂಲಕ ‘ಗಂಧದಗುಡಿ’ ಹೊಸ ದಾಖಲೆ ಬರೆದಿದೆ. 

911
ಫೋಟೋ: ರವಿ, ಕನ್ನಡಪ್ರಭ

ಬಹುತೇಕ ಎಲ್ಲ ಚಿತ್ರಮಂದಿರಗಳ ಮುಂದೆಯೂ ಡಾ.ರಾಜ್‌ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರನ್ನೊಳಗೊಂಡ ಕಟೌಟ್‌ಗಳು ರಾರಾಜಿಸಿದವು. ಬೆಂಗಳೂರು ನಗರದಲ್ಲಿ ಮೊದಲ ದಿನವೇ 300 ಶೋ ಸೇರಿ ರಾಜ್ಯಾದ್ಯಂತ 1800 ಶೋಗಳನ್ನು ಕಾಣುವ ಮೂಲಕ ‘ಗಂಧದಗುಡಿ’ ಹೊಸ ದಾಖಲೆ ಬರೆದಿದೆ. 

1011
ಫೋಟೋ: ರವಿ, ಕನ್ನಡಪ್ರಭ

ಪುನೀತ್ ಸಾಕಷ್ಟು ಸಾಮಾಜಿಕ ಕೆಲಸಗಳ ಮೂಲಕ ಗುರುತಿಸಿಕೊಂಡಿದ್ದರು. ಈಗ ಪುನೀತ್ ಅವರನ್ನು ಇದೇ ರೀತಿಯ ಕೆಲಸಗಳ ಮೂಲಕ ಫ್ಯಾನ್ಸ್ ನೆನಪಿಸಿಕೊಳ್ಳಲಿದ್ದಾರೆ. ರಾಜ್ಯದ ವಿವಿಧ ಕಡೆಗಳಲ್ಲಿ ರಕ್ತದಾನ, ಅನ್ನದಾನ ಶಿಬಿರ ಏರ್ಪಡಿಸಲಾಗಿತ್ತು.

1111
ಫೋಟೋ: ರವಿ, ಕನ್ನಡಪ್ರಭ

ಪುನೀತ್ ರಾಜ್​ಕುಮಾರ್ ಅವರನ್ನು ಕಳೆದುಕೊಂಡಿರುವ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಅಭಿಮಾನಿಗಳು ಕೂಡ ದುಃಖದಲ್ಲಿದ್ದಾರೆ. ಅವರು ಅಗಲಿ ಒಂದು ವರ್ಷ ಕಳೆದರೂ ನೋವು ಪೂರ್ತಿಯಾಗಿ ಕಡಿಮೆ ಆಗಿಲ್ಲ.

Read more Photos on
click me!

Recommended Stories