ಮೃಣಾಲ್ ಠಾಕೂರ್ ಮೇಲೆ ಮುನಿಸಿಕೊಂಡ್ರು ಅಭಿಮಾನಿಗಳು; ಫ್ಯಾನ್ಸ್ ಬೇಸರಕ್ಕೆ ಕಾರಣವಾಯ್ತು ಆ ಪೋಸ್ಟ್!

First Published | Jun 9, 2024, 6:49 PM IST

ನಟಿ ಮೃಣಾಲ್ ಠಾಕೂರ್ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಯೋರ್ವ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. 

ನಟಿ ಮೃಣಾಲ್ ಠಾಕೂರ್ ಹಿಂದಿ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗಾಗಿ ಎಲ್ಲಾ ಭಾಷೆಯ ಜನರಿಗೂ ಮೃಣಾಲ್ ಠಾಕೂರ್ ಚಿರಪರಿಚಿತರು. ಇದೀಗ ಅಭಿಮಾನಿಯೊಬ್ಬ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ಪ್ರಬುದ್ಧ ನಟನೆಯ ಮೂಲಕ ಹೆಸರುವಾಸಿಯಾಗಿರೋ ಮೃಣಾಲ್ ಠಾಕೂರ್ ಎಲ್ಲಾ ವರ್ಗದ ಅಭಿಮಾನಿಗಳನ್ನು ಹೊಂದಿದ್ದಾರೆ. ಹಾಗಾಗಿಯೇ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿಯಾಗಿದ್ದಾರೆ.

Tap to resize

ಇಂದು ಇನ್‌ಸ್ಟಾಗ್ರಾಂನಲ್ಲಿ ಎಂಟು ಫೋಟೋಗಳನ್ನು ಮೃಣಾಲ್ ಠಾಕೂರ್ ಶೇರ್ ಮಾಡಿಕೊಂಡಿದ್ದಾರೆ. ಫೋಟೋಗಳು ಪೋಸ್ಟ್ ಆಗುತ್ತಿದ್ದಂತೆ ಕಮೆಂಟ್‌ಗಳ ಸುರಿಮಳೆ ಸುರಿಯುತ್ತಿದೆ. ಮತ್ತೊಂದೆಡೆ ಲೈಕ್ಸ್ ಮೂಲಕ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

Mrunal Thakur

ಅಭಿಮಾನಿಯೊಬ್ಬರು ದಯವಿಟ್ಟು ನೀವು ಇಂತಹ ಬಟ್ಟೆಗಳನ್ನು ಹಾಕಿಕೊಳ್ಳಬೇಡಿ. ನೀವು ನನ್ನ ಪ್ರೀತಿಯ ನಟಿ ಎಂದು ಬರೆದುಕೊಳ್ಳುವ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಈ ಕಮೆಂಟ್‌ಗೆ ಪ್ರತಿಕ್ರಿಯಿಸಿರೋ ನೆಟ್ಟಿಗರು ನಮ್ಮ ಆಸೆಯೂ ಇದೇ ಆಗಿದೆ ಎಂದಿದ್ದಾರೆ.

ನೀವು ತುಂಬಾ ಒಳ್ಳೆಯ ನಟಿ. ಆದ್ರೆ ಇಂತಹ ಫೋಟೋಗಳು ನಿಮಗೆ ಚೆನ್ನಾಗಿ ಕಾಣಿಸಲ್ಲ. ಮೈ ಮುಚ್ಚುವ ಬಟ್ಟೆಗಳಲ್ಲಿ ನೀವು ಹೆಚ್ಚು ಸುಂದರವಾಗಿ ಕಾಣುತ್ತೀರಿ. ನೀವು ನನ್ನ ಸೆಲಿಬ್ರಿಟಿ ಕ್ರಶ್. ನಿಮ್ಮಿಂದ ಇಂತಹ ಪೋಟೋಗಳನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ನಮಗೆ ಸೀತಾರಾಮಂ ಚಿತ್ರದ ಸೀತೆ ಬೇಕು ಎಂದು ಹೇಳುವ ಮೂಲಕ ಅಸಮಧಾನ ಹೊರ ಹಾಕಿದ್ದಾರೆ.

ಸೀತಾರಾಮಂ ಸಿನಿಮಾ ನೋಡಿದ ಬಳಿಕ ನಿಮ್ಮ ಹೆಸರು ಕೇಳಿದ್ರೆ ಇದೇ ಚಿತ್ರದ ಲುಕ್ ಕಣ್ಮುಂದೆ ಬರುತ್ತದೆ. ಇಂತಹ ಫೋಟೋಗಳು ನಿಮಗೆ ಉಚಿತ ಅಲ್ಲ ಎಂದು ಬಹುತೇಕರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಹಾಟ್, ಸೆಕ್ಸಿ ಎಂಬಿತ್ಯಾದಿ ಕಮೆಂಟ್‌ಗಳು ಬಂದಿವೆ.

2022ರಲ್ಲಿ ತೆರಕಂಡ ಸೀತಾರಾಮಂ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ದಲ್ಕರ್ ಸಲ್ಮಾನ್, ಮೃಣಾಲ್ ಠಾಕೂರ್ ಹಾಗೂ ಕನ್ನಡತಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಚಿತ್ರ 90 ಕೋಟಿಗೂ ಅಧಿಕ ಹಣವನ್ನು ಗಳಿಸಿತ್ತು.

Latest Videos

click me!