ಜಗ್ಗೇಶ್ ‘ತೋತಾಪುರಿ’ ಫಸ್ಟ್ ಲುಕ್!

Published : Mar 12, 2019, 12:03 PM ISTUpdated : Mar 13, 2019, 07:26 PM IST

ಜಗ್ಗೇಶ್ ಮತ್ತೊಮ್ಮೆ ನಗಿಸಲು ಬರುತ್ತಿದ್ದಾರೆ ಎಂಬುದಕ್ಕೆ ‘ತೋತಾಪುರಿ’ ಚಿತ್ರದ ಈ ಫಸ್ಟ್ ಲುಕ್ ಸಾಕ್ಷಿ.ಮಾ.17 ಶನಿವಾರ ಜಗ್ಗೇಶ್ ಅವರ ಹುಟ್ಟು ಹಬ್ಬದ ಸಂಭ್ರಮ. ಹೀಗಾಗಿ ಅವರ ಜನ್ಮದಿನಕ್ಕೆ ‘ತೋತಾ ಪುರಿ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಹೊರಟಿದೆ. ಚಿತ್ರದ ಫಸ್ಟ್ ಲುಕ್ ಜತೆ ‘ತೋತಾಪುರಿ’ಯಲ್ಲಿನ ವಿಶೇಷತೆಗಳನ್ನು ನಿರ್ದೇಶಕ ವಿಜಯ್ ಪ್ರಸಾದ್ ಹೇಳಿಕೊಂಡಿದ್ದಾರೆ. 

PREV
18

28
ಜಗ್ಗೇಶ್ ಅವರ ಪಾಲಿಗೆ ಇದು ಮತ್ತೊಂದು ಹೈ ಬಜೆಟ್ ಸಿನಿಮಾ. ನಿರ್ಮಾಪಕ ಕೆಎ ಸುರೇಶ್ ಅವರು ಯಾವು ದಕ್ಕೂ ಕಡಿಮೆ ಮಾಡಿಲ್ಲ. ಮೇಕಿಂಗ್ ಅದ್ದೂರಿಯಾಗಿ ಬಂದಿದೆ. ಸ್ಟಾರ್ ನಟರ ಸಿನಿಮಾಗಳಿಗೆ ವೆಚ್ಚ ಮಾಡುವ ಬಜೆಟ್ ಈ ಚಿತ್ರಕ್ಕೆ ಹಾಕಲಾಗಿದೆ.

38
ಈಗಾಗಲೇ ನೂರು ದಿನ ಚಿತ್ರೀಕರಣ ಮಾಡಲಾಗಿದೆ. ಜಗ್ಗೇಶ್ ನಟನೆಯ ಅಥವಾ ನನ್ನ ನಿರ್ದೇಶನದ ಸಿನಿಮಾಗಳು ಇಷ್ಟು ದಿನ ಚಿತ್ರೀಕರಣಗೊಂಡಿಲ್ಲ. ಮೈಸೂರು, ಚನ್ನಪಟ್ಟಣ, ಕೂರ್ಗ್ ಮುಂತಾದ ಕಡೆ ಇನ್ನೂ ಚಿತ್ರೀಕರಣ ನಡೆಯುತ್ತಿದೆ.

48
ಇದೊಂದು ವಿಶೇಷವಾದ ಕಾಂಬಿನೇಷನ್ ಸಿನಿಮಾ. ಅಂದರೆ ಮತ್ತೆ ‘ನೀರ್‌ದೋಸೆ’ ಚಿತ್ರತಂಡ ಇಲ್ಲಿದೆ. ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್ ಹೀಗೆ ಹಲವರು ಇದ್ದಾರೆ. ಜತೆಗೆ ಹೊಸದಾಗಿ ಅದಿತಿ ಪ್ರಭುದೇವ, ಧನಂಜಯ್ ಸೇರಿಕೊಂಡಿದ್ದಾರೆ.

58
ನಾಯಕಿ ಮುಸ್ಲಿಂ ಪಾತ್ರ, ಸುಮನ್ ರಂಗನಾಥ್ ಕ್ರಿಶ್ಚಿಯನ್ ಪಾತ್ರ. ದತ್ತಣ್ಣ ಅವರದ್ದು ಜಗ್ಗೇಶ್ ಅವರ ಮಾವನ ಪಾತ್ರ. ಹೀಗೆ ಪಾತ್ರಗಳ ಸಂಯೋಜನೆಯಲ್ಲೇ ವಿಶೇಷತೆ ಇದೆ.

68
ಧನಂಜಯ್ ಹಾಗೂ ಜಗ್ಗೇಶ್ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಇಬ್ಬರ ಪಾತ್ರಗಳು ಇದುವರೆಗೂ ಬಹಿರಂಗಗೊಂಡಿಲ್ಲ. ಇದು ಚಿತ್ರದ ಬಹು ದೊಡ್ಡ ಕುತೂಹಲಕಾರಿ ಅಂಶ.

78
‘ನೀರ್‌ದೋಸೆ’ ಕಾಂಬಿನೇಷನ್ ಇದೆ. ಆದರೆ, ಆ ಚಿತ್ರಕ್ಕೂ ಮೀರಿದ ಕತೆ ಹಾಗೂ ಮನರಂಜನೆ ಈ ಚಿತ್ರದಲ್ಲಿದೆ. ಈ ಕಾರಣಕ್ಕೆ ‘ನೀರ್‌ದೋಸೆ’ಗಿಂತ ‘ತೋತಾಪುರಿ’ ಮತ್ತೊಂದು ಮೈಲುಗಲ್ಲಿನ ಸಿನಿಮಾ ಆಗಲಿದೆ.

88
ಇಲ್ಲಿಯವರೆಗೂ ‘ತೋತಾಪುರಿ’ ಚಿತ್ರದಲ್ಲಿನ ಪಾತ್ರದಾರಿಗಳ ಗೆಟಪ್‌ಗಳನ್ನು ಅನಾವರಣ ಮಾಡಿಲ್ಲ. ಅಲ್ಲದೆ ಒಂದು ವಿಶೇಷವಾದ ದಿನದಂದೇ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವ ಯೋಚನೆ ಇತ್ತು. ಹೀಗಾಗಿ ಜಗ್ಗೇಶ್ ಅವರ ಹುಟ್ಟುಹಬ್ಬದಂದೇ ಈ ಚಿತ್ರದ ಫಸ್ಟ್ ಬಿಡುಗಡೆ ಮಾಡಲಾಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories