ಇದಪ್ಪಾ ವಿಕ್ಟರಿ ಅಂದ್ರೆ.. 5 ಕೋಟಿ ಬಜೆಟ್‌ನ ಚಿತ್ರ ಚೀನಾದಲ್ಲಿ 1759 ಕೋಟಿ ಗಳಿಸಿದೆ!

Published : Aug 31, 2025, 12:42 PM IST

ಪ್ರಧಾನಿ ಮೋದಿ ಚೀನಾ ಭೇಟಿ ಸಂದರ್ಭದಲ್ಲಿ, 5 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಒಂದು ಭಾರತೀಯ ಚಿತ್ರದ ಬಗ್ಗೆ ತಿಳಿದುಕೊಳ್ಳೋಣ. ಈ ಚಿತ್ರವನ್ನು ಚೀನಾ ಸೀನ್ ಟು ಸೀನ್ ನಕಲು ಮಾಡಿ ಸುಮಾರು 1759 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸಿದೆ.

PREV
14
ಚೀನಾದಲ್ಲಿ ರಿಮೇಕ್ ಆದ ಮೊದಲ ಭಾರತೀಯ ಚಿತ್ರ?

2013ರಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರ 'ದೃಶ್ಯಂ' ಬಗ್ಗೆ ಮಾತನಾಡ್ತಿದ್ದೀವಿ. ಜೀತು ಜೋಸೆಫ್ ನಿರ್ದೇಶನದ ಈ ಚಿತ್ರದಲ್ಲಿ ಮೋಹನ್‌ಲಾಲ್, ಮೀನಾ ನಟಿಸಿದ್ದಾರೆ.

24
ಮಲಯಾಳಂ 'ದೃಶ್ಯಂ' ಬಜೆಟ್ ಮತ್ತು ಗಳಿಕೆ ಎಷ್ಟು?

'ದೃಶ್ಯಂ' ಚಿತ್ರದ ಬಜೆಟ್ ಸುಮಾರು 3.5 ಕೋಟಿಯಿಂದ 5 ಕೋಟಿ. ಚಿತ್ರ ವಿಶ್ವಾದ್ಯಂತ 62 ಕೋಟಿಗೂ ಹೆಚ್ಚು ಗಳಿಸಿತು.

34
ಚೀನಾದಲ್ಲಿ 'ದೃಶ್ಯಂ' ರಿಮೇಕ್ ಯಾವಾಗ ಬಿಡುಗಡೆಯಾಯಿತು?

2019 ರಲ್ಲಿ 'ದೃಶ್ಯಂ' ನ ಚೀನೀ ರಿಮೇಕ್ 'ಶೀಪ್ ವಿಥೌಟ್ ಎ ಶೆಫರ್ಡ್' ಬಿಡುಗಡೆಯಾಯಿತು. ಚೆನ್ ಸಿಚೆಂಗ್ ನಿರ್ದೇಶಿಸಿದ ಈ ಚಿತ್ರದಲ್ಲಿ ಕ್ಸಿಯಾವೊ ಯಾಂಗ್, ಟಾನ್ ಝುವೊ, ಜೋನ್ ಚೆನ್ ನಟಿಸಿದ್ದಾರೆ.

44
'ದೃಶ್ಯಂ' ಚೀನೀ ರಿಮೇಕ್ ಎಷ್ಟು ಗಳಿಸಿತು?

'ಶೀಪ್ ವಿಥೌಟ್ ಎ ಶೆಫರ್ಡ್' 2019 ರಲ್ಲಿ ಒಟ್ಟು 199 ಮಿಲಿಯನ್ ಡಾಲರ್ ಗಳಿಸಿತು. ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 1758.7 ಕೋಟಿ.

Read more Photos on
click me!

Recommended Stories