ಬೆಂಗಳೂರು(ಆ. 10) ಖಾಸಗಿ ವಾಹಿನಿ ಸೋನಿಯ ಸೂಪರ್ ಹಿಟ್ ಸಿಂಗಿಂಗ್ ಶೋ ಇಂಡಿಯನ್ ಐಡಲ್ ಫಿನಾಲೆ ಸುತ್ತಿಗೆ ಕನ್ನಡಿಗ ನಿಹಾಲ್ ತಾವ್ರೋ ಪ್ರವೇಶ ಪಡೆದಿದ್ದಾರೆ. ಮೂಡುಬಿದಿರೆಯ ಹುಡುಗ ನಿಹಾಲ್ ಸಿಂಗಿಂಗ್ ಶೋ ಇಂಡಿಯನ್ ಐಡಲ್ ಫಿನಾಲೆ ಸುತ್ತಿಗೆ ಕನ್ನಡಿಗ ನಿಹಾಲ್ ತಾವ್ರೋ ಪ್ರವೇಶ ಪಡೆದಿದ್ದಾರೆ. ಮೂಡುಬಿದಿರೆಯ ಗಾಯಕ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಸಂಪಾದಿಸಿದ್ದಾರೆ. ಒಟ್ಟು ಆರು ಮಂದಿ ಪ್ರಶಸ್ತಿಗೆ ಗಾಯನದ ಸೆಣೆಸಾಟ ನಡೆಸಲಿದ್ದಾರೆ. ಸ್ಯಾಂಡಲ್ ವುಡ್ ನ ಕೆಲವು ಸಿನಿಮಾಗಳ ಗೀತೆಗೂ ಧ್ವನಿ ನೀಡಿರುವ ನಿಹಾಲ್ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ. ಶಾಲಾ ದಿನಗಳಿಂದಲೇ ವಿಶೇಷ ಪ್ರತಿಭೆಯನ್ನು ಮೈಗೂಡಿಸಿಕೊಂಡಿದ್ದ ನಿಹಾಲ್ ಜೀ ವಾಹಿನಿಯ ಸರಿಗಮಪದದಲ್ಲಿ ಪಾಲ್ಗೊಂಡು ನಾದಬ್ರಹ್ಮ ಹಂಸಲೇಖ, ವಿಜಯ್ ಪ್ರಕಾಶ್, ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್ ಮೆಚ್ಚುಗೆಗೆ ಪಾತ್ರರಾದವರು. ಕಳೆದ ನವೇಂಬರ್ ನಲ್ಲಿ ಆರಂಭವಾದ ಶೋ ಇದೀಗ ಅಂತಿಮ ಘಟಕ್ಕೆ ಬಂದಿದೆ. ಆಗಸ್ಟ್ 15 ರಂದು ವಿಜೇತರ ಆಯ್ಕೆಯಾಗಲಿದೆ. ಕರ್ನಾಟಕದವರಾಗಿದ್ರೂ ಹಿಂದಿ ಗೀತೆಗಳನ್ನು ಲೀಲಾಜಾಲವಾಗಿ ಪ್ರಸ್ತುತಪಡಿಸುವ ನಿಹಾಲ್ ಈಗಾಗಲೇ ಅಪಾರ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ. ಗಾಐಕಿ ನೇಹಾ ಕಕ್ಕರ್, ಹಿಮೇಶ್ ರೇಶಮಿಯ, ವಿಶಾಲ್ ಈ ಪ್ರಖ್ಯಾತ ಶೋದ ತೀರ್ಪುಗಾರರು. ಗ್ರ್ಯಾಂಡ್ ಫಿನಾಲೆ ಎಪಿಸೋಡ್ ಸ್ವಾತಂತ್ರ್ಯ ದಿನದ ದಿನ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 12 ಗಂಟೆ ವರೆಗೆ ಪ್ರಸಾರವಾಗಲಿದೆ. Dakshina Kannada Mudbidri Singer Nihal tauro in indian idol final race episode on independence day ಕನ್ನಡದ ಗಾಯಕ ಪ್ರಖ್ಯಾತ ರಿಯಾಲಿಟಿ ಶೋ ಇಂಡಿಯನ್ ಐಡಲ್ ಫಿನಾಲೆಯಲ್ಲಿ