ಬಾಲಿವುಡ್ ನಟ ಸಂಜಯ್ ದತ್ ಪುತ್ರಿ ತ್ರಿಶಾಲಾ ದತ್ ಪರ್ಸನಲ್ ಲೈಫ್ ಆಗಾಗ ಸುದ್ದಿಯಾಗುತ್ತಿರುತ್ತದೆ. ಪ್ರಸ್ತುತ ತ್ರಿಶಾಲಾ ಹವಾಯಿಯಲ್ಲಿ ಏಕಾಂಗಿಯಾಗಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ.ಸೋಶಿಯಲ್ ಮಿಡೀಯಾದಲ್ಲಿ ಆಕ್ಟೀವ್ ಇರುವ ದತ್ ಪುತ್ರಿ ಹಾಲಿಡೇಯ ಕೆಲವು ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ತ್ರಿಶಾಲಾರ ಬಿಕಿನಿ ಫೋಟೋಗಳು ಸಖತ್ ವೈರಲ್ ಆಗಿದೆ.
ಸಂಜಯ್ ದತ್ ಪುತ್ರಿ ತ್ರಿಶಾಲಾ ದತ್ ಪ್ರಸ್ತುತ ಹವಾಯಿಯಲ್ಲಿ ಏಕಾಂಗಿಯಾಗಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ.
211
ಆ ಸಮಯದ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ ತ್ರಿಶಾಲಾ.
311
ಫೋಟೋವೊಂದರಲ್ಲಿ, ಅವರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಕುಳಿತು ಚಿಲ್ ಮಾಡುತ್ತಿರುವುದು ಕಂಡುಬಂದಿದೆ. ಹಳದಿ ಬಣ್ಣದ ಬಿಕಿನಿಯಲ್ಲಿ ತ್ರಿಶಾಲಾ ಮಿಂಚುತ್ತಿದ್ದಾರೆ.
411
ಇನ್ನೊಂದು ಫೋಟೋದಲ್ಲಿ ಕಪ್ಪು ಬಿಕಿನಿಯಲ್ಲಿ ಸಮುದ್ರ ತೀರದ ಕಲ್ಲುಗಳ ಮೇಲೆ ಕುಳಿತಿರುವುದನ್ನು ಕಾಣಬಹುದು.
511
ಮಗಳ ಫೋಟೋ ನೋಡಿ ಸಂಜಯ್ ದತ್ ಸಾಕಷ್ಟು ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.
611
ಸಂಜಯ್ ದತ್ ಮತ್ತು ಮೊದಲ ಪತ್ನಿ ರಿಚಾ ಶರ್ಮಾರ ಪುತ್ರಿ ತ್ರಿಶಾಲಾ ದತ್ ಬಾಲ್ಯದಿಂದಲೂ ತಂದೆಯೊಂದಿಗೆ ವಾಸಿಸುತ್ತಿರಲಿಲ್ಲ.
711
ತನ್ನ ಚಿಕ್ಕಮ್ಮ ಮತ್ತು ತಾಯಿಯ ಅಜ್ಜಿಯರೊಂದಿಗೆ ಅಮೆರಿಕದಲ್ಲಿ ವಾಸಿಸುತ್ತಿರುವ 33 ವರ್ಷದ ತ್ರಿಶಾಲಾ ವೃತ್ತಿಯಲ್ಲಿ ಸೈಕೋಥೆರಪಿಸ್ಟ್.
811
ಆಕೆ ಹಲವು ವರ್ಷಗಳಿಂದ ಭಾರತಕ್ಕೆ ಬಂದಿಲ್ಲ. ಆದರೆ ತಂದೆ ಸಂಜಯ್ ಅವರನ್ನು ಆಗಾಗ್ಗೆ ಭೇಟಿ ಮಾಡುತ್ತಿರುತ್ತಾರೆ.
911
ಆರಂಭಿಕ ಹಂತದಲ್ಲಿ ಸಂಜಯ್ ಮತ್ತು ತ್ರಿಶಾಲಾ ನಡುವಿನ ಸಂಬಂಧವು ಉತ್ತಮವಾಗಿರಲಿಲ್ಲ ಆದರೆ ನಂತರ ಇಬ್ಬರ ನಡುವಿನ ಅಂತರ ಕಡಿಮೆಯಾಗಿದ್ದು ಈಗ ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ.
1011
ಮೊದಲ ಬಾರಿಗೆ ಚಿತ್ರದ ಮುಹೂರ್ತದಲ್ಲಿ ರಿಚಾ ಶರ್ಮರನ್ನು ಭೇಟಿಯಾದ ಸಂಜಯ್ ದತ್ ಮೊದಲ ಭೇಟಿಯಲ್ಲೇ ರಿಚಾರಿಗೆ ಸೋತಿದ್ದರು. 1987ರಲ್ಲಿ ರಿಚಾರಿಗೆ ಪ್ರಪೋಸ್ ಮಾಡಿದ್ದರು.ರಿಚಾರ ಪೋಷಕರು ಮದುವೆಗೆ ಸಿದ್ಧರಿಲ್ಲ. ಈ ಸಮಯದಲ್ಲಿ ಸಂಜಯ್ ನ್ಯೂಯಾರ್ಕ್ ಗೆ ಹೋಗಿ ರಿಚಾಳ ಪೋಷಕರನ್ನು ಭೇಟಿಯಾದರು.
1111
1987 ರಲ್ಲಿ ಸಂಜಯ್- ರಿಚಾ ವಿವಾಹವಾದರು. 1988 ರಲ್ಲಿ, ಮಗಳು ತ್ರಿಶಲಾ ಜನಿಸಿದರು.