೪೫ ವರ್ಷಗಳ ಸಿನಿಮಾ ಜೀವನದಲ್ಲಿ ಮೆಗಾಸ್ಟಾರ್ ಚಿರಂಜೀವಿ ಗೆದ್ದ ರಿಕಾರ್ಡ್ ಗಳಿಗೆ ಲೆಕ್ಕವಿಲ್ಲ. ಮೆಗಾಸ್ಟಾರ್ ಆಗಿ ಚಿರು ನಟನೆ, ಡ್ಯಾನ್ಸ್, ಫೈಟ್ಸ್ ಎಲ್ಲದರಲ್ಲೂ ಫ್ಯಾನ್ಸ್ ಗಳಿಗೆ ಫೇವರಿಟ್. 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಅನೇಕ ಹೀರೋಯಿನ್ಸ್ ಜೊತೆ ನಟಿಸಿದ್ದಾರೆ. ಚಿರು ಕೆರಿಯರ್ ನಲ್ಲಿ ರಾಧಾ, ರಾಧಿಕಾ, ವಿಜಯಶಾಂತಿ ಮುಖ್ಯ ಹೀರೋಯಿನ್ಸ್. ಆದರೆ ಹೀರೋಯಿನ್ಸ್ ವಿಷಯದಲ್ಲಿ ಚಿರುಗೆ ಒಂದು ಅಪರೂಪದ ರಿಕಾರ್ಡ್ ಇದೆ.
25
ಚಿರು ಜೊತೆ ನಟಿಸಿದ ಕ್ರೇಜಿ ಹೀರೋಯಿನ್ಸ್
ಮೂವರು ಅಕ್ಕ-ತಂಗಿಯರ ಜೊತೆ ರೊಮ್ಯಾನ್ಸ್ ಮಾಡಿದ ಏಕೈಕ ಹೀರೋ ಚಿರು ಅಂತಾನೆ ಹೇಳ್ಬಹುದು. ಮೂವರ ಜೊತೆಗೂ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದು ವಿಶೇಷ. ಯಾರ್ರಿವರು ಅಂದ್ರೆ, ನಗ್ಮಾ, ಜ್ಯೋತಿಕಾ ಮತ್ತು ರೋಶಿನಿ.
35
ಚಿರು ಜೊತೆ ನಟಿಸಿದ ಕ್ರೇಜಿ ಹೀರೋಯಿನ್ಸ್
ಚಿರು ಮತ್ತು ನಗ್ಮಾ ಘರಾಣಾ ಮೊಗುಡು, ರಿಕ್ಷಾವೋಡು, ಮುಗ್ಗುರು ಮೊನಗಳ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವುಗಳಲ್ಲಿ ಘರಾಣಾ ಮೊಗುಡು ಆಲ್ ಟೈಮ್ ಇಂಡಸ್ಟ್ರಿ ಹಿಟ್. 10 ಕೋಟಿ ಶೇರ್ ಸಂಪಾದಿಸಿದ ಮೊದಲ ಸಿನಿಮಾ ಘರಾಣಾ ಮೊಗುಡು. ಚಿರು-ನಗ್ಮಾ ಕಾಂಬಿನೇಷನ್ ಸಖತ್ ಹಿಟ್.
ನಗ್ಮಾ ತಂಗಿ ಜ್ಯೋತಿಕಾ ಜೊತೆ ಚಿರು ಠಾಗೋರ್ ಸಿನಿಮಾದಲ್ಲಿ ನಟಿಸಿದ್ದಾರೆ. ವಿವಿ ವಿನಾಯಕ್ ಡೈರೆಕ್ಷನ್ ನ ಈ ಸಿನಿಮಾ ಸೂಪರ್ ಹಿಟ್. ನಗ್ಮಾ ಇನ್ನೊಬ್ಬ ತಂಗಿ ರೋಶಿನಿ ಜೊತೆ ಕೂಡ ಚಿರು ಮಾಸ್ಟರ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಕೂಡ ಗೆಲುವು ಕಂಡಿತು.
55
ಚಿರು ಜೊತೆ ನಟಿಸಿದ ಕ್ರೇಜಿ ಹೀರೋಯಿನ್ಸ್
ನಗ್ಮಾ, ಜ್ಯೋತಿಕಾ ಇಬ್ಬರೂ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದು ಕಾಲದಲ್ಲಿ ಸ್ಟಾರ್ ನಟಿಯರು. ಅವರ ತಂಗಿ ರೋಶಿನಿ ಹೆಚ್ಚು ಕಾಲ ಇಂಡಸ್ಟ್ರಿಯಲ್ಲಿ ಉಳಿಯಲಿಲ್ಲ. ಮಾಸ್ಟರ್ ಸಿನಿಮಾ ನಂತರ ರೋಶಿನಿ ಪವಿತ್ರ ಪ್ರೇಮ, ಶುಭಲೇಖ ಸಿನಿಮಾಗಳಲ್ಲಿ ನಟಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.