ಕೇರಳ ಕುಟ್ಟಿ ಲುಕ್ಕಲ್ಲಿ ಸನ್ನಿ ಲಿಯೋನ್, ಸ್ವಲ್ಪ ಸೆರಗು ಸರಿ ಹಾಕೊಳ್ಳಿ ಅಂದ್ರು ನೆಟ್ಟಿಗರು!

Published : Sep 05, 2023, 06:48 PM ISTUpdated : Sep 05, 2023, 10:06 PM IST

ಸನ್ನಿ ಲಿಯೋನ್‌ ಅಂದಾಗ ಆಕೆಯ 'ಹಾಟ್‌' ಅವತಾರಗಳನ್ನೇ ನೋಡಿದ ಅಭಿಮಾನಿಗಳಿಗೆ ಕಳೆದ ಭಾನುವಾರ ಅಚ್ಚರಿ ಕಾದಿತ್ತು. ಹಾಟ್‌ ಡ್ರೆಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸನ್ನಿ ಲಿಯೋನ್‌ರನ್ನು ಸಾಂಪ್ರದಾಯಿಕ ಕೇರಳ ಸೀರೆಯಲ್ಲಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

PREV
117
ಕೇರಳ ಕುಟ್ಟಿ ಲುಕ್ಕಲ್ಲಿ ಸನ್ನಿ ಲಿಯೋನ್, ಸ್ವಲ್ಪ ಸೆರಗು ಸರಿ ಹಾಕೊಳ್ಳಿ ಅಂದ್ರು ನೆಟ್ಟಿಗರು!

ಮಾಜಿ ಪಾರ್ನ್‌ಸ್ಟಾರ್‌ ಸನ್ನಿ ಲಿಯೋನ್‌ ತಮ್ಮ ಹಳೆಯ ವೃತ್ತಿ ಜೀವನವನ್ನು ಬಿಟ್ಟು ಬಾಲಿವುಡ್‌ನಲ್ಲಿ ಅವಕಾಶ ಪಡೆದುಕೊಳ್ಳಲು ಆರಂಭಿಸಿ ಹಲವು ವರ್ಷಗಳು ಕಳೆದಿವೆ.

217

ಅಮೆರಿಕದ ಅಡಲ್ಟ್‌ ಫಿಲ್ಮ್‌ ಇಂಡಸ್ಟ್ರಿಯಲ್ಲಿ ತಮ್ಮ ಹಾಟ್‌ ಅವತಾರಗಳಿಂದಲೇ ಪಡ್ಡೆಗಳಿಗೆ ನಿದ್ದೆಗೆಡಿಸಿದ್ದ ಸನ್ನಿ ಲಿಯೋನ್‌ ಇಂದು ಬಾಲಿವುಡ್‌ನಲ್ಲಿ ಪ್ರಮುಖ ತಾರೆ.

317

ದೊಡ್ಡ ದೊಡ್ಡ ನಾಯಕರ ಜೊತೆಯಲ್ಲಿ ಸಿನಿಮಾ ಅವಕಾಶಗಳನ್ನು ಈಕೆ ಪಡೆದುಕೊಳ್ಳದೇ ಇದ್ದರೂ, ಸಿಕ್ಕಿರುವ ಅವಕಾಶಗಳೇನೂ ಕಡಿಮೆಯಿಲ್ಲ.

417

ಈಗಾಗಲೇ ಸಾಕಷ್ಟು ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿರುವ ಸನ್ನಿ ಲಿಯೋನ್‌, ದಕ್ಷಿಣ ಭಾರತದ ವಿವಿಧ ಸಿನಿಮಾ ಇಂಡಸ್ಟ್ರಿಗಳಲ್ಲೂ ನಟಿಸಿದ್ದಾರೆ.

517

ಸಿನಿಮಾಗಳೊಂದಿಗೆ ಸಾಕಷ್ಟು ಕಾಂಡೋಮ್‌ ಜಾಹೀರಾತು ಸೇರಿದಂತೆ ವಿವಿಧ ರೀತಿಯ ಜಾಹೀರಾತುಗಳಲ್ಲೂ ಇವರು ಕಾಣಿಸಿಕೊಂಡಿದ್ದಾರೆ,

617

ಅದರೊಂದಿಗೆ ಖಾಸಗಿ ಕಾರ್ಯಕ್ರಮಗಳು, ಇವೆಂಟ್‌ಗಳಿಗೆ ಅತಿಥಿಯಾಗಿಯೂ ಸನ್ನಿ ಲಿಯೋನ್‌ ಭಾಗವಹಿಸುತ್ತಾರೆ. ವಿವಿಧ ರಾಜ್ಯಗಳಲ್ಲಿ ಅವರ ಕಾರ್ಯಕ್ರಮಕ್ಕೆ ಸಾಕಷ್ಟು ಡಿಮಾಂಡ್‌ ಇದೆ.

717

ಇತ್ತೀಚೆಗೆ ಸನ್ನಿ ಲಿಯೋನ್‌ ಕೇರಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಸೀರೆಯಲ್ಲಿ ಕಂಗೊಳಿಸಿರುವ ಫೋಟೋ ಹಾಗೂ ವಿಡಿಯೋಗಳು ವೈರಲ್‌ ಆಗಿದೆ. 

817

Cameo Fashion Photography ಈ ಚಿತ್ರಗಳು ಹಾಗೂ ವಿಡಿಯೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಪ್ರಕಟ ಮಾಡಿದ್ದು, ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

917

ಸಾಂಪ್ರದಾಯಿಕ ಕೇರಳ ಕಸುವು ಸೀರೆಯಲ್ಲಿ ಸ್ಟೇಜ್‌ಗೇರಿದ ಸನ್ನಿ ಲಿಯೋನ್‌ರನ್ನು ಅವರ ಕೇರಳ ಅಭಿಮಾನಿಗಳು ಅಪಾರವಾಗಿ ಮೆಚ್ಚಿದ್ದಾರೆ.

1017

ಬಿಳಿ ಬಣ್ಣ ಹಾಗೂ ಚಿನ್ನದ ಬಣ್ಣದ ಅಂಚು ಹೊಂದಿದ್ದ ಸೀರೆಗಳನ್ನು ಧರಿಸಿದ್ದ ಸನ್ನಿ ಲಿಯೋನ್‌ ತಲೆಗೆ ಮಲ್ಲಿಗೆ ಹೂವನ್ನು ಮುಡಿದುಕೊಂಡು ಸಾಂಪ್ರದಾಯಿಕವಾಗಿ ಬಂದಿದ್ದರು.

1117

ಭಾನುವಾರ ಕೇರಳದ ಕೋಝಿಕ್ಕೋಡ್‌ಗೆ ಆಗಮಿಸಿದ್ದ ಬಾಲಿವುಡ್‌ ನಟಿ ಸನ್ನಿ ಲಿಯೋನ್‌,  ಕ್ಯಾಲಿಕಟ್ ಟ್ರೇಡ್ ಸೆಂಟರ್‌ನಲ್ಲಿ ನಡೆದ ‘ಫ್ಯಾಶನ್ ರೇಸ್ - ವಿನ್ ಯುವರ್ ಪ್ಯಾಶನ್’ ಫ್ಯಾಷನ್ ಶೋನಲ್ಲಿ ಪಾಲ್ಗೊಂಡಿದ್ದರು.

1217

ವೇದಿಕೆಯಿಂದಲೇ ತನ್ನ ಎಲ್ಲಾ ಅಭಿಮಾನಿಗಳಿಗೆ ಓಣಂ ಹಬ್ಬದ ಶುಭಾಶಯ ತಿಳಿಸಿದ ಸನ್ನಿ ಲಿಯೋನ್‌, ವಿಕಲಾಂಗ ಮಕ್ಕಳೊಂದಿಗೆ ರಾಂಪ್‌ ವಾಕ್‌ ಮಾಡಿದರು.

1317

ಬಾಲಿವುಡ್‌ನ ಅಗ್ರ ದರ್ಜೆಯ ನಟಿ ಅಲ್ಲದೇ ಇದ್ದರೂ, ಸನ್ನಿ ಲಿಯೋನ್‌ ಅವರ ಜನಪ್ರಿಯತೆ ಭಾರತದಲ್ಲಿ 2019ರಿಂದಲೂ ಕಡಿಮೆಯಾಗಿಲ್ಲ.

1417

ಅದಕ್ಕೆ ಸಾಕ್ಷಿ ಎನ್ನುವಂತೆ 2019ರಿಂದಲೂ ಸನ್ನಿ ಲೀಯೋನ್‌, ಗೂಗಲ್‌ ಸರ್ಚ್‌ನಲ್ಲಿ (Google Search), ಗರಿಷ್ಠ ಬಾರಿ ಸರ್ಚ್‌ಗೆ ಒಳಗಾದ ಭಾರತೀಯ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ.

1517

ಗೂಗಲ್‌ ಸರ್ಚ್‌ನಲ್ಲಿ ಸನ್ನಿ ಲಿಯೋನ್‌ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಲಿವುಡ್‌ನ ಕಿಂಗ್‌ ಖಾನ್‌ಗಳನ್ನೂ ಕೂಡ ಹಿಂದೆ ಹಾಕಿರುವುದು ವಿಶೇಷ.

1617

ಈಗಾಗಲೇ ಮಲಯಾಳಂ ಚಿತ್ರರಂಗದಲ್ಲಿ ಕಾಲಿಡುವ ತಯಾರಿಯಲ್ಲಿರುವ ಸನ್ನಿ ಲಿಯೋನ್‌, 2024ರಲ್ಲಿ ರಂಗೀಲಾ ಎನ್ನುವ ಸಿನಿಮಾದೊಂದಿಗೆ ಕೇರಳ ಸಿನಿ ಇಂಡಸ್ಟ್ರಿಗೆ ಕಾಲಿಡಲಿದ್ದಾರೆ.

'ಒಂದ್‌ ಗ್ಲಾಸ್‌ ಕೋಲಾ ಕುಡಿಯೋಕೆ ಅಲ್ಲಿಗೆ ಹೋಗಿದ್ಯಲ್ಲ..' ಸೋನು ಗೌಡ ಫಾರಿನ್‌ ಟ್ರಿಪ್‌ಗೆ ಭಯಂಕರ ಕಾಮೆಂಟ್ಸ್‌!

1717

ಇದಕ್ಕೂ ಮುನ್ನ 2019ರಲ್ಲಿ ಸನ್ನಿ ಲಿಯೋನ್‌ ಮಲಯಾಳಂ ಚಿತ್ರ ಮಧುರ ರಾಜಾದಲ್ಲಿ ಐಟಂ ಸಾಂಗ್‌ನಲ್ಲಿ ನಟಿಸಿದ್ದರು. ಅದರೊಂದಿಗೆ ಎರಡು ತಮಿಳು ಚಿತ್ರಗಳಲ್ಲಿಯೂ ಈಕೆ ನಟಿಸಲಿದ್ದಾರೆ.

ಬೆಡ್‌ರೂಮ್‌ ಸೀನ್‌ಗಾಗಿಯೇ 1 ಕೋಟಿ ಜಾಸ್ತಿ ಸಂಭಾವನೆ ಕೇಳಿದ್ರಾ ತಮನ್ನಾ?

Read more Photos on
click me!

Recommended Stories