ನಟಿ ದಿವಿ ವಾದ್ತ್ಯಾ ಅವರ ಲೇಟೆಸ್ಟ್ ಫೋಟೋಗಳು ಪಡ್ಡೆಹುಡುಗರ ನಿದ್ದೆ ಕದ್ದಿವೆ. ಸೋಶಿಯಲ್ ಮೀಡಿಯಾದಲ್ಲಿ ಈಕೆಗೆ ಸಖತ್ ಫಾಲೋಯಿಂಗ್ ಇದೆ. ಆದರೆ, ಸಣ್ಣಪುಟ್ಟ ಪಾತ್ರಗಳನ್ನು ಬಿಟ್ಟರೆ ನಾಯಕಿಯಾಗಿ ದಿವಿ ವಾದ್ತ್ಯಾಗೆ ಹೇಳಿಕೊಳ್ಳುವಂತಹ ಅವಕಾಶಗಳು ಸಿಗುತ್ತಿಲ್ಲ.
ಬಿಳಿ ಬಣ್ಣದ ಸೀರೆಯುಟ್ಟು ನಟಿ ದಿವಿ ವಾದ್ತ್ಯಾ ಕ್ಯಾಮೆರಾಗೆ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ಸೀರೆಯ ಮೇಲಿರುವ ಪಿಂಕ್ ಹಾಗೂ ತಿಳಿ ಕಂದು ಬಣ್ಣದ ಹೂವಿನ ಎಂಬ್ರಾಯ್ಡರಿ ಡಿಸೈನ್ ನೋಡುಗರ ಗಮನ ಸೆಳೆಯುತ್ತಿದೆ. ಸೀರೆಯ ಅಂಚಿನಲ್ಲಿರುವ ಹೊಳೆಯುವ ಡಿಸೈನ್ ಈಕೆಯ ಟ್ರೆಡಿಷನಲ್ ಲುಕ್ ಅನ್ನು ಮತ್ತಷ್ಟು ಹೆಚ್ಚಿಸಿದೆ.
26
ಮೇಕಪ್ ಹಾಗೂ ಜ್ಯುವೆಲ್ಲರಿ ಲುಕ್
ಈ ಫೋಟೋಗಳಲ್ಲಿ ದಿವಿ ಕಿವಿಗೆ ಸುಂದರವಾದ ಜುಮ್ಕಾ ಹಾಗೂ ಕೈಗಳಿಗೆ ಬ್ರೇಸ್‌ಲೆಟ್ ಧರಿಸಿದ್ದಾರೆ. ಕಣ್ಣಿಗೆ ಕಪ್ಪು ಐಲೈನರ್, ಸಿಂಪಲ್ ಮೇಕಪ್ ಜೊತೆಗೆ ನ್ಯಾಚುರಲ್ ಹೇರ್‌ಸ್ಟೈಲ್ ಈಕೆಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಯಾವುದೇ ಅತಿಯಾದ ಮೇಕಪ್ ಇಲ್ಲದೆ ತಮ್ಮ ಸಿಂಪಲ್ ಲುಕ್‌ನಿಂದಲೇ ದಿವಿ ಕಮಾಲ್ ಮಾಡುತ್ತಿದ್ದಾರೆ.
36
ನೋಟದಲ್ಲೇ ಸೆಳೆದ ನಟಿ
ಕ್ಯಾಮೆರಾ ಕಡೆ ನೋಡದೆ, ಪಕ್ಕಕ್ಕೆ ತಿರುಗಿ ದಿವಿ ಕೊಟ್ಟಿರುವ ಪೋಸ್‌ಗಳು ಫೋಟೋಗಳಿಗೆ ಹೊಸ ಕಳೆ ತಂದಿವೆ. ಮುಖದಲ್ಲಿರುವ ಮುದ್ದಾದ ನಗು ಹಾಗೂ ಕಾನ್ಫಿಡೆನ್ಸ್ ಹಾವಭಾವಗಳು ಈ ಫೋಟೋಗಳ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ.
ಮಾಡೆಲ್ ಆಗಿ ಕೆರಿಯರ್ ಶುರುಮಾಡಿದ ದಿವಿ ವಾದ್ತ್ಯಾ, ಮಹೇಶ್ ಬಾಬು ನಟನೆಯ 'ಮಹರ್ಷಿ' ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದರು. ಆ ನಂತರ 'ಗಾಡ್‌ಫಾದರ್', 'ಲಂಬಸಿಂಗಿ', 'ಸಿಂಬಾ', 'ಪುಷ್ಪ 2: ದಿ ರೂಲ್', 'ಡಾಕು ಮಹಾರಾಜ್' ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
56
ಬಿಗ್‌ಬಾಸ್‌ನಿಂದ ಸಿಕ್ಕ ಜನಪ್ರಿಯತೆ
'ಬಿಗ್‌ಬಾಸ್ ತೆಲುಗು 4' ಶೋನಲ್ಲಿ ಭಾಗವಹಿಸಿದ ಮೇಲೆ ದಿವಿಗೆ ಪ್ರೇಕ್ಷಕರಲ್ಲಿ ಇನ್ನಷ್ಟು ಜನಪ್ರಿಯತೆ ಸಿಕ್ಕಿತು. ಸಿನಿಮಾಗಳ ಜೊತೆಗೆ ವೆಬ್ ಪ್ರಾಜೆಕ್ಟ್‌ಗಳಲ್ಲೂ ನಟಿಸುತ್ತಾ ತಮ್ಮ ಕೆರಿಯರ್ ಮುಂದುವರಿಸುತ್ತಿದ್ದಾರೆ. 2026ರಲ್ಲಿ ಬಿಡುಗಡೆಯಾದ 'ಹನಿ' ಸಿನಿಮಾದಲ್ಲೂ ಆಕೆ ಕಾಣಿಸಿಕೊಂಡಿದ್ದಾರೆ.
66
ವೈರಲ್ ಆಗುತ್ತಿರುವ ಫೋಟೋಗಳು
ಗ್ಲಾಮರಸ್ ಬಟ್ಟೆಗಳ ಜೊತೆಗೆ ಟ್ರೆಡಿಷನಲ್ ಉಡುಗೆಯಲ್ಲೂ ದಿವಿ ಮಿಂಚಬಲ್ಲರು ಎಂಬುದನ್ನು ಈ ಫೋಟೋಗಳು ಸಾಬೀತುಪಡಿಸಿವೆ. ಸೀರೆಯ ಬಣ್ಣ, ಒಡವೆಗಳು ಹಾಗೂ ಆಕೆಯ ಹಾವಭಾವಗಳು ಈ ಫೋಟೋಗಳಿಗೆ ವಿಶೇಷ ಮೆರುಗು ನೀಡಿವೆ. ಹೀಗಾಗಿಯೇ ದಿವಿಯ ಈ ಸೀರೆಯ ಲುಕ್ ಫ್ಯಾಷನ್ ಪ್ರಿಯರ ಮನಗೆದ್ದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.