ಬಿಗ್‌ಬಾಸ್ ಸೀಸನ್ 11 ಆರಂಭದ ಹೊತ್ತಲ್ಲೇ ಪತ್ನಿಗೆ ಥಳಿಸಿದ ಮಾಜಿ ಸ್ಪರ್ಧಿ ಸಮೀರ್ ಆಚಾರ್ಯ!

First Published Sep 30, 2024, 12:12 PM IST

 ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ ತನ್ನ ತಂದೆ-ತಾಯಿಯ ಜೊತೆಗೂಡಿ ತನ್ನ ಪತ್ನಿಗೆ ಮನಬಂದಂತೆ ಥಳಿಸಿರುವ ಆರೋಪ ಕೇಳಿಬಂದಿದೆ.
 

ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ಯಾರಿಗೆ ತಾನೆ ಗೊತ್ತಿಲ್ಲ. ಬಿಗ್‌ಬಾಸ್‌ನಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲೂ ಮಿಂಚಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲೂ ಬಹಳಷ್ಟು ಫಾಲೋವರ್ಸ್ ಹೊಂದಿರುವ ಜೋಡಿ, ಜೋಡಿ ಇದ್ದರೆ ಹೀಗಿರಬೇಕು ನೋಡಿ ಎನ್ನುವಂತೆ ಅನ್ಯೋನ್ಯವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇಂದು ಘಟನೆ ನಡೆದ ನೋಡಿದ್ದೆಲ್ಲ ನೀಜವಲ್ಲ ಎಂಬಂತೆ ಭ್ರಮನಿರಸನಗೊಳಿಸಿದೆ.

ಇಂದು ಎಂದಿನಂತೆ ಮನೆಯಲ್ಲಿ ಕೆಲಸದಲ್ಲಿ ತೊಡಗಿದ್ದ ಶ್ರಾವಣಿ ಸಮೀರ್ ಆಚಾರ್ ತನ್ನ ಮಗಳು ಅಳುತ್ತಿದ್ದ ಕಾರಣಕ್ಕೆ ಗದರಿಸಿದ್ದಾರೆ. ಇದೇ ವಿಷಯಕ್ಕೆ ಸಮೀರ್ ಆಚಾರ್ಯ ಅವರ ತಂದೆ ತನ್ನ ಸೊಸೆ ಶ್ರಾವಣಿಗೆ ಬೈದಿದ್ದಾರೆ. ಇದೇ ವಿಚಾರ ಮಾತಿಗೆ ಮಾತು ಬೆಳೆದು ಜಗಳ ಪ್ರಾರಂಭವಾಗಿದೆ ಎಂದು ಹೇಳಲಾಗುತ್ತಿದೆ. 

Latest Videos


ಬಳಿಕ ಸಮೀರ್ ಸೇರಿದಂತೆ ಅವರ ಅತ್ತೆ, ಮಾವ ಸೇರಿಕೊಂಡು ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಸಮೀರ್ ಆಚಾರ ಪತ್ನಿ   ಆರೋಪಿಸಿ ಮಹಿಳಾ ಠಾಣೆ ಮೆಟ್ಟಿಲೇರಿದ್ದು. ಈ ವೇಳೆ ಇನ್ಸ್ಟಾಗ್ರಾಂನಲ್ಲಿ ಲೈವ್ ಹೋಗಿದ್ದ ಶ್ರಾವಣಿ ಫೋನ್ ಒಡೆದು ಹಾಕಿದ್ದಾರೆ. ಗಲಾಟೆ ವೇಳೆ ಶ್ರಾವಣಿ ಅವರಿಗೆ ಕೈ, ಮುಖಕ್ಕೆ ಗಾಯಗಳಾಗಿವೆ.

ಮತ್ತೊಂದೆಡೆ ಸಮೀರ್ ಆಚಾರ್ಯ ತಂದೆಯ ತಲೆಗೆ ಗಾಯಗಳಾಗಿವೆ. ಮತ್ತೊಂದೆಡೆ ಸಮೀರ್ ಆಚಾರ್ ತಂದೆ ಸೊಸೆ ಮೇಲೆ ದೂರು ನೀಡಲು ಮುಂದಾಗಿದ್ದಾರೆ ಎಂಬ ಸಂಗತಿ ಗೊತ್ತಾಗಿದೆ. ಆದರೆ ಈ ಬಗ್ಗೆ ಸಮೀರ್ ಆಚಾರ್ಯ ಪತ್ನಿ ಶ್ರಾವಣಿ ಅವರನ್ನು ಮಾತನಾಡಿಸಲು ಮುಂದಾದಾಗ ಮಾವ, ಅತ್ತೆ ಹಾಗೂ ಗಂಡ ಹಲ್ಲೆ ನಡೆಸಿದ್ದು ಸತ್ಯ ಎಂದಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಲು ನಿರಾಕರಿಸಿದರು.

click me!