ಫಿರೋಜ್ ಗಾಂಧಿಯಿಂದ ಸೋನಿಯಾವರೆಗೆ ಇಲ್ಲಿ ಗಾಂಧಿ ಕುಟುಂಬವೇ ಮೇಲು!

First Published Apr 11, 2019, 5:25 PM IST

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಗುರುವಾರ ಗಾಂಧಿ ಕುಟುಂಬದ ಪಾರಂಪರಿಕ ಲೋಕಸಭಾ ಕ್ಷೇತ್ರ ರಾಯ್ಬರೇಲಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಕುಟುಂಬದೊಂದಿಗೆ ವಿಶೇಷ ಪೂಜೆ- ಹವನದಲ್ಲಿ ಭಾಗಿಯಾದ ಸೋನಿಯಾ ಗಾಂಧಿ, ಬಳಿಕ ರೋಡ್ ಶೋ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಈ ಸಂದರ್ಭದ ಕೆಲ ಫೋಟೋಗಳು ಇಲ್ಲಿವೆ.

ಸೋನಿಯಾ ಸತತ ಐದನೇ ಬಾರಿ ರಾಯ್ಬರೇಲಿಯಿಂದ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
undefined
5ನೇ ಬಾರಿ ಸ್ಪರ್ಧಿಸುತ್ತಿರುವುದರಿಂದ ಇಸ್ ಬಾರ್ ಪಾಂಚ್ ಲಾಖ್ ಪಾರ್(ಈ ಬಾರಿ 5 ಲಕ್ಷದಾಚೆ) ಎಂಬ ಘೋಷಣೆಯೊಂದಿಗೆ ಕಣಕ್ಕಿಳಿದಿದೆ.
undefined
ಸೋನಿಯಾ ಗಾಂಧಿಗೆ ಎದುರಾಳಿಯಾಗಿ ಬಿಜೆಪಿಯು ದಿನೇಶ್ ಪ್ರತಾಪ್ ಸಿಂಗ್ ರನ್ನು ಕಣಕ್ಕಿಳಿಸಿದೆ. ಆದರೆ SP ಹಾಗೂ BSP ಇಲ್ಲಿ ಯಾವುದೇ ಅಭ್ಯರ್ಥಿಗಳನ್ನು ಘೋಷಿಸಿಲ್ಲ.
undefined
ರಾಯ್ ಬರೇಲಿ ಕಾಂಗ್ರೆಸ್ ನ ಭದ್ರಕೋಟೆ ಎಂದೇ ಪ್ರಖ್ಯಾತಿ ಪಡೆದಿದೆ. 1952ರಲ್ಲಿ ಮಾಜಿ ಪ್ರಧಾನಿ ದಿವಂಗತ ಇಂಧಿರಾ ಗಾಂಧಿಯ ಪತಿ ಫಿರೋಜ್ ಗಾಂಧಿ ಈ ಕ್ಷೇತ್ರದಲ್ಲಿ ಗೆಲುವಿನ ಖಾತೆ ತೆರೆದಿದ್ದರು. ಇದು ಸೋನಿಯಾವರೆಗೆ ಮುಂದುವರೆದಿದೆ.
undefined
ಕೇವಲ ಮೂರು ಬಾರಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಸೋಲನುಭವಿಸಿದೆ. ಆದರೆ ಸೋಲನುಭವಿಸಿದಾಗ ಈ ಕ್ಷೇತ್ರದಿಂದ ಗಾಂಧಿ ಕುಟುಂಬದ ಸದಸ್ಯರು ಸ್ಪರ್ಧಿಸಿರಲಿಲ್ಲ ಎಂಬುವುದು ಗಮನಾರ್ಹ.
undefined
ರಾಜಕೀಯಕ್ಕೆ ಎಂಟ್ರಿ ನೀಡಿದ್ದ ಸೋನಿಯಾ ಗಾಂಧಿ ಮೊದಲ ಬಾರಿ ತಮ್ಮ ಪತಿ ರಾಜೀವ್ ಗಾಂಧಿ ತವರು ಕ್ಷೇತ್ರ ಅಮೇಠಿಯಿಂದ ಸ್ಪರ್ಧಿಸಿದ್ದರು.
undefined
1999ರಲ್ಲಿ ಮೊದಲ ಬಾರಿ ಅಮೇಠಿ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾದರು. 2004ರಲ್ಲಿ ರಾಹುಲ್ ಗಾಂಧಿ ರಾಜಕೀಯಕ್ಕೆ ಕಾಲಿಟ್ಟಾಗ ತಮ್ಮ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು , ತಮ್ಮ ಅತ್ತೆ ಇಂಧಿರಾ ಗಾಂಧಿ ಕ್ಷೇತ್ರದಿಂದ ಸ್ಪರ್ಧಿಸಿದರು.
undefined
ಇದಾದ ಬಳಿಕ ಸೋನಿಯಾ ಈ ಕ್ಷೇತ್ರದಿಂದ ಗೆದ್ದಿದ್ದಾರೆ. ಮೋದಿ ಅಲೆ ಕೂಡಾ ಸೋನಿಯಾರನ್ನು ಮಣಿಸಲು ಆಗಲಿಲ್ಲ.
undefined
ರಾಯ್ಬರೇಲಿಯಲ್ಲಿ ಈವರೆಗೆ ಒಟ್ಟು 16 ಬಾರಿ ಲೋಕಸಭಾ ಚುನಾವಣೆ ನಡೆದಿದ್ದು, 2 ಬಾರಿ ಉಪ ಚುನಾವಣೆ ನಡೆದಿದೆ. ಇದರಲ್ಲಿ 15 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದೆ. 1 ಬಾರಿ ಭಾರತೀಯ ಲೋಕದಳ ಹಾಗೂ 2 ಬಾರಿ ಬಿಜೆಪಿ ಗೆಲುವು ಪಡೆದಿದೆ.
undefined
1999ರ ಬಳಿಕ ಇಲ್ಲಿ ಕಾಂಗ್ರೆಸ್ ನಿರಂತರವಾಗಿ ಗೆಲ್ಲುತ್ತಾ ಬಂದಿದೆ. ಇನ್ನು SP ಹಾಗೂ BSP ಪಕ್ಷದ ಅಭ್ಯರ್ಥಿಗಳೂ ಇಲ್ಲಿ ತಮ್ಮ ಖಾತೆ ತೆರೆಯಲು ಸಾಧ್ಯವಾಗಿಲ್ಲ ಎಂಬುವುದು ಗಮನಾರ್ಹ.
undefined
click me!