ಗೆದ್ದು ಬೀಗಿದ ಸ್ಮೃತಿ, ಸುಮಲತಾ, ಯುಗಪುರುಷ ನಟಿಗೆ ಸೋಲೇ ಗತಿ!

First Published May 23, 2019, 4:43 PM IST

ಗೆದ್ದು ಬೀಗಿದ ಸ್ಮೃತಿ, ಸುಮಲತಾ, ಯುಗಪುರುಷ ನಟಿಗೆ ಸೋಲೇ ಗತಿ

ಹೇಮಾ ಮಾಲಿನಿ, ಉತ್ತರ ಪ್ರದೇಶದ ಮಥುರಾದಲ್ಲಿ 2ನೇ ಬಾರಿ ಗೆಲುವು.
undefined
ಮಂಡ್ಯ ಅಂದರೆ ಇಂಡಿಯಾ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಾಜಿ ಪ್ರಧಾನಿ ದೇವೇಗೌಡ ಅವರ ಪುತ್ರ ಕರ್ನಾಟಕ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸ್ವಾಭಿಮಾನದಿಂದ ಸ್ಪರ್ಧಿಸಿದ್ದ ಸುಮಲತಾಗೆ ಬಹುತೇಕ ಲಕ್ಷ ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ.
undefined
ಸ್ಮೃತಿ ಇರಾನಿ, ಉತ್ತರ ಪ್ರದೇಶದ ಅಮೇಥಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಜಯ.
undefined
ಸಮಾಜವಾದಿ ಪಕ್ಷದಲ್ಲಿದ್ದ ಜಯಪ್ರದಾ ಬಿಜೆಪಿಗೆ ಪಕ್ಷಾಂತರ ಮಾಡಿ, ಉತ್ತರಪ್ರದೇಶದ ರಾಮ್‌ಪುರಾದಲ್ಲಿ ಸೋಲುಂಡಿದ್ದಾರೆ. ಅಜಂಖಾನ್ ಇವರ ಪ್ರತಿಸ್ಫರ್ಧಿ.
undefined
ಮಂಡ್ಯದಲ್ಲಿ ಸುಮಲತಾ ವಿರುದ್ಧ ಗೆಲ್ಲಲು ಶತಾಯ ಗತಾಯ ಯತ್ನಿಸಿದ್ದ ನಿಖಿಲ್ ಕುಮಾರಸ್ವಾಮಿ ಹಾಗೂ ಕುಟುಂಬದ ರಾಜಕೀಯ ಆಟ ಈ ಬಾರಿ ನಡೆಯಲೇ ಇಲ್ಲ
undefined
ಬಾಲಿವುಡ್ ನಟ ಶತ್ರುಘ್ನ ಸಿನ್ಹಾಗೆ ಬಿಹಾರದ ಸಾಹಿಬ್‌ನಲ್ಲಿ ಸೋಲು. ಬಿಜೆಪಿಯಲ್ಲಿದ್ದ ಸಿನ್ಹಾ ಕಾಂಗ್ರೆಸ್‌ನಿಂದ ಈ ಬಾರಿ ಸ್ಪರ್ಧಿಸಿದ್ದರು.
undefined
ವೋಟ್ ಕೊಟ್ಟು ಬಿದ್ದರೂ, ಚುನಾವಣೇಲಿ ಗೆದ್ದ ಕಿರಣ್ ಖೇರ್ ಚಂಡೀಗಢ್‌ನಲ್ಲಿ ಅನುಪಮ್ ಖೇರ್ ಪತ್ನಿ ಕಿರಣ್ ಖೇರ್‌ಗೆ ಎರಡನೇ ಬಾರಿ ವಿಜಯಲಕ್ಷ್ಮಿ ಒಲಿದಿದ್ದಾಳೆ.
undefined
ಮೂನ್ ಮೂನ್ ಸೇನ್ ಕನ್ನಡದ ಯುಗಪುರುಷದಲ್ಲಿಯೂ ನಟಿಸಿದ್ದ ಮೂನ್ ಮೂನ್ ಸೇನ್ ಟಿಎಂಸಿಯಿಂದ ಸ್ಪರ್ಧಿಸಿದ್ದರು. ಗೆಲುವಿನ ವಿಶ್ವಾಸದಲ್ಲಿದ್ದ ಸೇನ್‌ ಕೈ ಹಿಡಿಯಲೇ ಇಲ್ಲ ಮತದಾರರು
undefined
ಶುತ್ರಘ್ನಾ ಸಿನ್ಹಾ ಪತ್ನಿ ಪೂನಂ ಸಿನ್ಹಾ ಲಖನೌದಿಂದ ಎಸ್ಪಿ ಅಭ್ಯರ್ಥಿಯಾಗಿದ್ದರು. ಪತಿ ಸೋತರೆ, ಪತ್ನಿ ಸೋತಿದ್ದಾಳೆ.
undefined
#JustAsking ಎನ್ನುತ್ತಲೇ ಪ್ರಕಾಶ್ ರಾಜ್ ಬೆಂಗಳೂರಿ ಸೆಂಟ್ರಲ್‌ನಲ್ಲಿನಲ್ಲಿ ಸ್ಪರ್ಧಿಸಿದ್ದರು. ಸೋತರೂ ಹೋರಾಟ ಮುಂದುವರಿಸುತ್ತಾರಂತೆ.
undefined
ಮುಂಬೈ ಉತ್ತರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಉರ್ಮಿಳಾ ಮಾತೋಂಡ್ಕರ್ ಬಿಜೆಪಿಯ ಗೋಪಾಲ್ ಶೆಟ್ಟಿ ವಿರುದ್ಧ ಹೀನಾಯ ಸೋಲುಂಡಿದ್ದಾರೆ.
undefined
ಉತ್ತರ ಪ್ರದೇಶದ ಫತೇಪುರ್ ಸಿಕ್ರಿಯಿಂದ ಸ್ಪರ್ಧಿಸಿದ್ದ ರಾಜ್ ಬಬ್ಬರ್‌ಗೆ ಜಯಲಕ್ಷ್ಮಿ ಒಲಿಯಲೇ ಇಲ್ಲ.
undefined
ಪಂಜಾಬ್‌ನ ಗುರುದಾಸಪುರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಾರ್ಡಾರ್ ಹಿರೋ ಸನ್ನಿ ಡಿಯೋಲ್‌ಗೆ ನಿರಾಯಾಸ ಗೆಲವು ಸಾಧಿಸಿದ್ದಾರೆ.
undefined
click me!