ಮೋದಿ 'ಸುನಾಮಿ'ಗೆ ಕೊಚ್ಚಿಹೋದ ದಿಗ್ಗಜರು!

First Published May 23, 2019, 4:22 PM IST

ಲೋಕಸಭಾ ಚುನಾವಣಾ ಮತ ಎಣಿಕೆ ಆರಂಭವಾಗಿದ್ದು, ನಾಲ್ಕು ಸುತ್ತಿನ ಎಣಿಕೆ ಮುಕ್ತಾಯವಾಗಿದೆ. ಸದ್ಯ ಲಭ್ಯವಾದ ಮಾಹಿತಿ ಅನ್ವಯ 347 ಕ್ಷೇತ್ರಗಳಲ್ಲಿ NDA ಮುನ್ನಡೆ ಕಾಯ್ದುಕೊಂಡಿದೆ. 90 ಕ್ಷೇತ್ರಗಳಲ್ಲಿ UPA ಮುನ್ನಡೆಯಲ್ಲಿದ್ದರೆ 105 ಕ್ಷೇತ್ರಗಳಲ್ಲಿ ಇತರರು ಮುಂಚೂಣಿಯಲ್ಲಿದ್ದಾರೆ. ದೇಶದಾದ್ಯಂತ ಮೋದಿ ಅಲೆ ಇನ್ನೂ ಇದೆ ಎಂಬುವುದಕ್ಕೆ ಈ ಚುನಾವಣೆಯೇ ಸಾಕ್ಷಿ. ಮೋದಿ ಸುನಾಮಿಗೆ ಕರ್ನಾಟಕ ಸೇರಿದಂತೆ ಇತರ ರಾಜ್ಯದ ಹಲವಾರು ದಿಗ್ಗಜರು ಕೊಚ್ಚಿ ಹೋಗಿದ್ದಾರೆ. ಗೆದ್ದೇ ಗೆಲ್ಲುತ್ತೇವೆಂಬ ದೃಢ ವಿಶ್ವಾಸ ಹೊಂದಿದ್ದ ನಾಯಕರೂ ನೆಲ ಕಚ್ಚಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ: ಕರ್ನಾಟಕದ ಕಲಬುರಗಿ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದ್ದರು. ಆದರೆ ಖರ್ಗೆ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಸುಮಾರು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.
undefined
ಕೆ. ಎಚ್. ಮುನಿಯಪ್ಪ: ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಪ್ರಸಿದ್ಧವಾದ ಕೋಲಾರದಲ್ಲಿ ಕಳೆದು 7 ಬಾರಿಯಿಂದಲೂ ಕೆ.ಎಚ್.ಮುನಿಯಪ್ಪ ಅವರೇ ಗೆಲವು ಬೀರುತ್ತಿದ್ದರು. ಆದರೆ, ಆಶ್ಚರ್ಯ ಎಂಬಂತೆ ಈ ಬಾರಿ ಚಿನ್ನದ ಗಣಿ ನಾಡಿನ ಮಂದಿ ಬಿಜೆಪಿಯ ಮುನಿಸ್ವಾಮಿಗೆ ಮತದಾರರು ಆಶೀರ್ವಾದ ಮಾಡಿದ್ದಾರೆ.
undefined
ಕೆ. ಎಚ್. ಮುನಿಯಪ್ಪ: ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಪ್ರಸಿದ್ಧವಾದ ಕೋಲಾರದಲ್ಲಿ ಕಳೆದು 7 ಬಾರಿಯಿಂದಲೂ ಕೆ.ಎಚ್.ಮುನಿಯಪ್ಪ ಅವರೇ ಗೆಲವು ಬೀರುತ್ತಿದ್ದರು. ಆದರೆ, ಆಶ್ಚರ್ಯ ಎಂಬಂತೆ ಈ ಬಾರಿ ಚಿನ್ನದ ಗಣಿ ನಾಡಿನ ಮಂದಿ ಬಿಜೆಪಿಯ ಮುನಿಸ್ವಾಮಿಗೆ ಮತದಾರರು ಆಶೀರ್ವಾದ ಮಾಡಿದ್ದಾರೆ.
undefined
ಎಚ್. ಡಿ. ದೇವೇಗೌಡ: ತುಮಕೂರಿನಿಂದ ಸ್ಪರ್ಧಿಸಿದ್ದ ಜೆಡಿಎಸ್ ಮುಖಂಡ, ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡ ಕೆವಲ 19 ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟು ಕೊಟ್ಟಿದ್ದ ದೇವೇಗೌಡರು ತುಮಕೂರಿನತ್ತ ಮುಖ ಮಾಡಿದ್ದರು. ಆದರೀಗ ಬಿಜೆಪಿ ಅಭ್ಯರ್ಥಿ ಜಿ. ಎಸ್. ಬಸವರಾಜ್ ಮಾಜಿ ಪ್ರಧಾನಿಯನ್ನು ಸೋಲಿಸಿದ್ದಾರೆ.
undefined
ಶತ್ರುಘ್ನ ಸಿನ್ಹಾ: ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಶತ್ರುಘ್ನ ಸಿನ್ಹಾ, ಪಟನಾಸಾಹಿಬ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರವಿ ಶಂಕರ್ ಪ್ರಸಾದ್ ವಿರುದ್ಧ ಸ್ಪರ್ಧಿಸಿದ್ದರು. ಆದರೀಗ ಬಿಜೆಪಿ ಅಭ್ಯರ್ಥಿಯ ವಿರುದ್ಧ ಸುಮಾರು 1ಲಕ್ಷಕ್ಕೂ ಅಧಿಕ ಅಂತರಗಳಿಂದ ಸೋಲನುಭವಿಸಿದ್ದಾರೆ.
undefined
ಕನ್ಹಯ್ಯಾ ಕುಮಾರ್: JNU ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಬಿಹಾರದ ಬೆಗುಸರೈ ಕ್ಷೇತ್ರದಿಂದ CPI ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಗೆಲುವಿನ ವಿಶ್ವಾಸದೊಂದಿಗೆ ಸ್ಪರ್ಧಿಸಿದ್ದ ಕನ್ಹಯ್ಯಾ, ಬಿಜೆಪಿ ಅಭ್ಯರ್ಥಿ ಗಿರಿರಾಜ್ ವಿರುದ್ಧ ಸೋಲನುಭವಿಸಿದ್ದಾರೆ
undefined
ದಿಗ್ವಿಜಯ್ ಸಿಂಗ್: ಮಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ, 'ಬ್ರ್ಯಾಂಡ್ ಹಿಂದುತ್ವ'ದೊಂದಿಗೆ ಭೋಪಾಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಜ್ಞಾ ಸಿಂಗ್ ಠಾಕೂರ್, ಕಾಂಗ್ರೆಸ್ ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ರನ್ನು ಭಾರೀ ಂತರದ ಮತಗಳಿಂದ ಸೋಲಿಸಿದ್ದಾರೆ.
undefined
click me!