ಇನ್ನೂ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭ ಮಾಡಿದ್ದರಿಂದ ನಮಗೂ ಕೂಡ ಅನುಕೂಲವಾಗಿದೆ ಅಂತಾರೆ ಪೋಷಕರು. ಖಾಸಗಿ ಶಾಲೆಗಳಿಗೆ ಪ್ರತಿ ವರ್ಷ ಕೂಡ ಸಾವಿರಾರು ರೂಪಾಯಿ ಕೊಟ್ಟು ದಾಖಲು ಮಾಡಬೇಕು. ಇದರಿಂದ ಬಡ ಪೋಷಕರಿಗೆ ಕಷ್ಟವಾಗುತ್ತಿತ್ತು. ಆದ್ರೆ ಆಂಗ್ಲ ಮಾಧ್ಯಮದ ದಾಖಲಾತಿ ಜೊತೆಗೆ ಶಿಕ್ಷಕರು ಕೂಡ ಒಂದು ಸಾವಿರ ಕೊಡ್ತಿರುವುದ ಮಾತ್ರ ಸಂತಸದ ವಿಚಾರ ಅಂತಾರೆ. ಅಲ್ಲದೇ ನನ್ನ ಮಗಳು ಕೂಡ ಇಂಗ್ಲೀಷ್ ಕಲಿತಿದ್ದಾಳೆ, ಇದೇ ಶಿಕ್ಷಣ ಕೊಡಿಸಲು ಖಾಸಗಿಯಾಗಿ ಓದಿಸಿದ್ರೆ ಕಷ್ಟವಾಗುತ್ತಿತ್ತು. ಆದ್ರೆ ಖಾಸಗಿ ಶಾಲೆಯ ಮಕ್ಕಳಂತೆ ಶಾಲೆಯ ಬಹುತೇಕ ಮಕ್ಕಳು ಇಂಗ್ಲೀಷ್ ಮಾತನಾಡುತ್ತಿದ್ದು, ಇದು ಸಂತಸದ ಸಂಗತಿಯಾಗಿದೆ ಅಂತಾರೆ.
ಒಟ್ನಲ್ಲಿ ಸರ್ಕಾರಿ ಶಾಲೆಯ ದಾಖಲಾತಿ ಹೆಚ್ಚಿಸಲು ಶಿಕ್ಷಕ ಶ್ರೀಧರ್ ತಮ್ಮ ವೇತನದಲ್ಲಿ ಒಂದು ಸಾವಿರ ರೂಪಾಯಿ ಕೊಡ್ತಿರುವ ಕೆಲಸಕ್ಕೆ ಎಲ್ಲರಿಂದಲೂ ಮೆಚ್ಚುಗೆ, ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೇ ಸರ್ಕಾರಿ ಶಾಲೆಗೂ ಕೂಡ ಇದರಿಂದ ಮಕ್ಕಳ ಸಂಖ್ಯೆ ಹೆಚ್ಚಾಗ್ತಿದೆ.