ಭಾರತದಲಲ್ಲಿ ಯುಟ್ಯೂಬ್ ತುಂಬಿ ತುಳುಕುತ್ತಿದೆ. ಅಡುಗೆ, ಪ್ರವಾಸ, ಕಥನ, ಸುದ್ದಿ, ಮನರಂಜನೆ ಸೇರಿದಂತೆ ಹಲವು ವಿಷಯಾಧಾರಿತ ಯೂಟ್ಯೂಬ್ ಚಾನೆಲ್ ಇವೆ. ಇದರ ನಡುವೆ ಇವೆಲ್ಲವನ್ನು ಮೀರಿಸುವ ಕೋಚಿಂಗ್, ಟೀಚಿಂಗ್ ಸೇರಿದಂತೆ ಮಾರ್ಗದರ್ಶನ ನೀಡುವ, ಶಾಲಾ ಕಲಿಕೆಯನ್ನು ಸುಲಭಗೊಳಿಸುವ ಯೂಟ್ಯೂಬ್ ಚಾನೆಲ್ ಇವೆ.
ಯೂಟ್ಯೂಬ್ ಮೂಲಕ ಮಕ್ಕಳಿಗೆ ಪಾಠ ಹೇಳಿಕೊಡುತ್ತಾ ಅತ್ಯಲ್ಪ ಸಮಯದಲ್ಲಿ ಕೆಲ ಟೀಟರ್ಸ್ ದೇಶಾದ್ಯಂತ ಜನಪ್ರಿಯರಾಗಿದ್ದಾರೆ. ಭಾರತದಲ್ಲಿ ಈ ಸಂಖ್ಯೆ ದೊಡ್ಡದಿದೆ. ಈ ಪೈಕಿ ಟಾಪ್ 10 ಯೂಟ್ಯೂಬ್ ಟೀಚರ್ಸ್ ವಿವರ ಇಲ್ಲಿದೆ.
ಖಾನ್ ಜಿಎಸ್ ರಿಸರ್ಚ್ ಸೆಂಟರ್
ಖಾನ್ ಸರ್ ಎಂದೇ ಖ್ಯಾತಿಗೊಂಡಿರುವ ಫಾಜಿಲ್ ಖಾನ್, 2019ರಲ್ಲಿ ಯೂಟ್ಯೂಬ್ ಮೂಲಕ ಟೀಚಿಂಗ್ ಆರಂಭಿಸಿದ್ದಾರೆ. ಇದೀಗ 21 ಮಿಲಿಯನ್‌ಗೂ ಅಧಿಕ ಸಬ್‌ಸ್ಕೈಬ್ರರ್ ಹೊಂದಿರುವ ಅತೀ ದೊಡ್ಡ ಟೀಚಿಂಗ್ ಸೆಂಟರ್ ಆಗಿದೆ.
ವೈಫೈಸ್ಟಡಿ ಸ್ಟುಡಿಯೋ
ಅನ್‌ಅಕಾಡೆಮಿ ಆರಂಭಿಸಿದ ವೈಫೈ ಸ್ಟಡಿ ಸ್ಟಡಿಯೋ ಭಾರತದ ಟಾಪ್ ಯೂಟ್ಯೂಬ್ ಟೀಚಿಂಗ್ ಸೆಂಟರ್ ಆಗಿ ಗುರುತಿಸಿಕೊಂಡಿದೆ. ಬರೋಬ್ಬರಿ 16 ಮಿಲಿಯನ್ ಚಂದಾದಾರರನ್ನು ಹೊಂದಿದೆ.
ಸ್ಟಡಿ IQ IAS
IAS ಸೇರಿದಂತೆ ಇತರ ಸ್ಪರ್ಧಾತ್ಮ ಪರೀಕ್ಷೆಗಳ ತಯಾರಿಗೆ ನೀಡುತ್ತಿರುವ ಕೋಚಿಂಗ್ ಇಂದು ದೇಶಾದ್ಯಂತ ಫಾಲೋವರ್ಸ ಹೊಂದಿದ್ದಾರೆ. ಈ ಯೂಟ್ಯೂಬ್ ಚಾನೆಲ್ 15 ಮಿಲಿಯನ್ ಸಬ್‌ಸ್ಕೈಬ್ರರ್ ಹೊಂದಿದೆ.
ಉತ್ಕರ್ಷ್ ಕ್ಲಾಸಸ್
ಭಾರತದ ಮತ್ತೊಂದು ಯೂಟ್ಯೂಬ್ ಟೀಚಿಂಗ್ ಚಾನೆಲ್ ಉತ್ಕರ್ಷ್ ಕ್ಲಾಸಸ್. 12 ಮಿಲಿಯನ್ ಚಂದಾರರನ್ನು ಹೊಂದಿರುವ ಉತ್ಕರ್ಷಶಾಲಾ ಮಕ್ಕಳಿಂದ ಹಿಡಿದು ಹಲವು ವಿದ್ಯಾರ್ಥಿಗಳಿಗೆ ಕೋಚಿಂಗ್, ಟ್ಯೂಷನ್ ನೀಡುತ್ತಿದೆ.
ಫಿಸಿಕ್ಸ್ ವಾಲ್ಲಾ
ಅಲಖ್ ಪಾಂಡೆ ಆರಂಭಿಸಿದ ಫಿಸಿಕ್ಸ್ ವಲ್ಲಾ ಇದೀಗ ಅತೀ ದೊಡ್ಡ ಸೆಂಟರ್ ಆಗಿ ಮಾರ್ಪಟ್ಟಿದೆ. ಎಂಜಿನೀಯರಿಂಗ್ ಹಾಗೂ ಮೆಡಿಕಲ್ ಎಂಟ್ರಾಕ್ಸ್ ಪರೀಕ್ಷೆಗೆ ವಿದ್ಯಾರ್ಥಿಗಳನ್ನುತಯಾರು ಮಾಡಲಿದೆ. 11 ಮಿಲಿಯನ್ ಚಂದಾರರನ್ನು ಹೊಂದಿದೆ.
SSC ಮೇಕರ್
ಯೂಟ್ಯೂಬ್ ಮೂಲಕ ವಿದ್ಯಾರ್ಜನೆ ಮಾಡುತ್ತಿರುವ SSC ಮೇಕರ್ 10 ಮಿಲಿಯನ್ ಸಬ್‌ಸ್ಕ್ರೈಬರ್ ಹೊಂದಿದೆ. ಇನ್ನು ಹಿಮಾಂಶಿ ಸಿಂಗ್ ಆರಂಭಿಸಿದ ಲೆಟ್ಸ್ ಲರ್ನ್ ಯೂಟ್ಯೂಬ್ ಚಾನೆಲ್ 4 ಮಿಲಿಯನ್ ಚಂದಾರರನ್ನು ಹೊಂದಿದೆ.
ಗಗನ್ ಪ್ರತಾಪ್ ಮ್ಯಾಥ್ಸ್
ಕಬ್ಬಿಣದ ಕಡಲೆಯಾಗಿರುವ ಗಣಿತ ವಿಷಯವನ್ನು ಸರಳವಾಗಿ ಮಕ್ಕಳಿಗೆ ಯೂಟ್ಯೂಬ್ ಮೂಲಕ ಹೇಳಿಕೊಡುತ್ತಿರುವ ಗಗನ್ ಪ್ರತಾಪ್ ಮ್ಯಾಥ್ಸ್ 4 ಮಿಲಿಯನ್ ಸಬ್‌ಸ್ಕ್ರೈಬರ್ ಹೊಂದಿದೆ. ಇನ್ನು ಡಿಯರ್ ಸರ್ ಸೇರಿದಂತೆ ಇತರ ಕೆಲ ಯೂಟ್ಯೂಬ್ ಟೀಚರ್ಸ್ ಅತ್ಯಂತ ಜನಪ್ರಿಯವಾಗಿದ್ದಾರೆ.