ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕುರಿತಾದ 5 ಅತ್ಯುತ್ತಮ ಬಾಲಿವುಡ್ ಚಲನಚಿತ್ರಗಳು ಇಲ್ಲಿವೆ

Published : Sep 05, 2023, 12:58 PM ISTUpdated : Sep 05, 2023, 01:08 PM IST

ಬಾಲಿವುಡ್ ಚಿತ್ರೋದ್ಯಮವು ಯಾವಾಗಲೂ ನೈಜ ಜೀವನ ಕತೆಯನ್ನಾಧರಿಸಿ ಚಿತ್ರ ತೆರೆಗೆ ತರಲು ಪ್ರಯತ್ನಿಸುತ್ತದೆ. ಆದರೆ ಇಂಥ ಚಿತ್ರಗಳ ಸಂಖ್ಯೆ ಬಹಳ ಕಡಿಮೆ ಎನ್ನಬಹುದು. ಅದರಲ್ಲೂ ನಮ್ಮ ಶಿಕ್ಷಣ ವ್ಯವಸ್ಥೆಯ ಬಗ್ಗೆ ತಿಳಿಸಲು ಹೆಚ್ಚಿನ ಚಲನಚಿತ್ರಗಳಿಲ್ಲ. ಇರುವ ಚಲನಚಿತ್ರಗಳಲ್ಲಿ ಅತ್ಯುತ್ತಮವಾಗಿರುವ, ಸ್ಫೂರ್ತಿದಾಯಕವಾಗಿರುವ ಚಿತ್ರಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ. ಇಲ್ಲಿ ಕೊಡಲಾಗಿರುವ ಸಿನಿಮಾಗಳು ವಿದ್ಯಾರ್ಥಿ, ಶಿಕ್ಷಕರು ಮತ್ತು ಶೈಕ್ಷಣಿಕ ವ್ಯವಸ್ಥೆಯ ಸುತ್ತ ಹೆಣೆದ ಕತೆಗಳಾಗಿವೆ. ಶಾಲಾ ಶಿಕ್ಷಕರು, ಮಕ್ಕಳೊಂದಿಗೆ ಕುಳಿತು ನೋಡಬಹುದಾದ ಚಿತ್ರಗಳು. ನಿಮಗೂ ಇಷ್ಟವಾಗಬಹುದು. 

PREV
15
ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕುರಿತಾದ 5 ಅತ್ಯುತ್ತಮ ಬಾಲಿವುಡ್ ಚಲನಚಿತ್ರಗಳು ಇಲ್ಲಿವೆ

Taare zameen par

2007ರಲ್ಲಿ ತೆರೆಕಂಡ ಹಿಂದಿ ಚಲನಚಿತ್ರ ಇದು. ಇದನ್ನು ಆಮಿರ್ ಖಾನ್‌ ನಿರ್ಮಿಸಿ ನಿರ್ದೇಶಿಸಿದರು. ಚಲನಚಿತ್ರವು ಡಿಸ್ಲೆಕ್ಸಿಯಾ ಇರುವ 8 ವರ್ಷ ವಯಸ್ಸಿನ ಮಗು ಇಶಾನ್‍ನ ಜೀವನ ಮತ್ತು ಕಲ್ಪನೆಯನ್ನು ಅನ್ವೇಷಿಸುತ್ತದೆ. ಅವನು ಕಲೆಯಲ್ಲಿ ಮುಂದೆ ಇದ್ದರೂ, ಅವನ ಕಳಪೆ ಶೈಕ್ಷಣಿಕ ಸಾಧನೆಯ ಕಾರಣ ಅವನ ತಂದೆತಾಯಿ ಅವನನ್ನು ವಸತಿಶಾಲೆಗೆ ಕಳಿಸುತ್ತಾರೆ. ಅವನಿಗೆ ಡಿಸ್ಲೆಕ್ಸಿಯಾ ಇದೆ ಎಂದು ಇಶಾನ್‍ನ ಹೊಸ ಕಲಾ ಶಿಕ್ಷಕನು ಶಂಕಿಸಿ ಅವನಿಗೆ ಅವನ ಅಸಮರ್ಥತೆಯನ್ನು ಜಯಿಸಲು ನೆರವಾಗುತ್ತಾನೆ. ದರ್ಶೀಲ್ ಸಫ಼ಾರಿ 8 ವರ್ಷದ ಇಶಾನ್ ಆಗಿ ನಟಿಸಿದ್ದರೆ, ಅಮಿರ್ ಖಾನ್ ಅವನ ಕಲಾ ಶಿಕ್ಷಕನ ಪಾತ್ರವಹಿಸಿದ್ದಾರೆ. ಈ ಚಿತ್ರವು ಮನೋಜ್ಞ ಅಭಿನಯದಿಂದ ಕೂಡಿದೆ. ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಸ್ಫೂರ್ತಿದಾಯ ಚಿತ್ರವಿದು.

25

3 Idiots

ಈಡಿಯಟ್ಸ್ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಹಾಸ್ಯ ಚಿತ್ರವಾಗಿದ್ದು, ಅಮೀರ್ ಖಾನ್, ರಂಗನಾಥನ್ ಮಾಧವನ್ ಮತ್ತು ಶರ್ಮನ್ ಜೋಶಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಈ ಚಲನಚಿತ್ರವು ಭಾರತೀಯ ಶಿಕ್ಷಣ ವ್ಯವಸ್ಥೆ ಕುರಿತು ಒಂದು ಗಟ್ಟಿ ಸಂದೇಶ ನೀಡಿದೆ. ಕಾಲೇಜು ಹುಡುಗರ ರಾಗಿಂಗ್, ಉನ್ನತ ಶ್ರೇಣಿಗಳೊಂದಿಗೆ ಉನ್ಮಾದ ಮತ್ತು ಇಂದಿನ ಕಾಲೇಜು ವಿದ್ಯಾರ್ಥಿಗಳ ಮೇಲೆ ಪೋಷಕರ ಬೇಡಿಕೆಗಳ ಅಪಾಯಕಾರಿ ಪರಿಣಾಮಗಳನ್ನು ಎತ್ತಿ ತೋರಿಸುತ್ತದೆ..

ಈ ಚಲನಚಿತ್ರವು ಅತಿ ಹೆಚ್ಚು ಮಾರಾಟವಾಗಿ ದಾಖಲೆ ನಿರ್ಮಿಸಿದ ಲೇಖಕ ಚೇತನ್ ಭಗತ್ ಅವರ 'ಫೈವ್ ಪಾಯಿಂಟ್ ಸಮ್ ವನ್' ಕಾದಂಬರಿಯನ್ನು ಆಧರಿಸಿದೆ. ಚಲನಚಿತ್ರದ ಕಥೆಯು ಮೂರು ಕಾಲೇಜು ಸ್ನೇಹಿತರ ಜೀವನವನ್ನು ತಿಳಿಸುತ್ತದೆ.

35

I am Kalam

ಪ್ರಶಸ್ತಿ ವಿಜೇತ ಈ ಬಾಲಿವುಡ್ ಚಲನಚಿತ್ರವನ್ನು ನೀಲಾ ಮಾಧವ್ ಪಾಂಡಾ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಗುಲ್ಶನ್ ಗ್ರೋವರ್, ಹರ್ಷ್ ಮಾಯರ್ ಮತ್ತು ಹುಸನ್ ಸಾದ್ ನಟಿಸಿದ್ದಾರೆ.  

ಚಿತ್ರದ ಕಥೆಯು ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅವರ ಜೀವನದಿಂದ ಪ್ರೇರೇಪಿಸಲ್ಪಟ್ಟ ನಿರ್ಗತಿಕ ಹುಡುಗ ಛೋಟು ಸುತ್ತ ಸುತ್ತುತ್ತದೆ.'ಚೋಟು' ಪಾತ್ರದಲ್ಲಿ  ದೆಹಲಿಯ ಸ್ಲಂ ಬಾಲಕ ಹರ್ಷ ಮಯಾರ್ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಈ ಬಾಲಕ ತಾನು ಅಬ್ದುಲ್ ಕಲಾಂರಂತೆ ಆಗಬೇಕು ಎಂಬ ಬಗ್ಗೆ ಕಾಣುವ ಕನಸುಗಳೇ ಈ ಚಿತ್ರದಲ್ಲಿ ಹೈಲೈಟ್ ಆಗುತ್ತದೆ. ರಾಜಾಸ್ಥಾನದ ಮರುಭೂಮಿಯಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ. ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಮಕ್ಕಳಿಗೆ ಸ್ಫೂರ್ತಿದಾಯಕ ಚಿತ್ರವಾಗಿದೆ.

45
Teachers day

Paathshala

 ಮಿಲಿಂದ್ ಉಕಿ ನಿರ್ದೇಶನದ ಪಾಠಶಾಲಾ ಬಾಲಿವುಡ್‌ನ ಅತ್ಯುತ್ತಮ ಚಿತ್ರಗಳಲ್ಲೊಂದಾಗಿದೆ. ಶಾಹಿದ್ ಕಪೂರ್, ನಾನಾ ಪಾಟೇಕರ್ ಮತ್ತು ಆಯೇಶಾ ಟಾಕಿಯಾ ಶ್ರದ್ಧಾ ಆರ್ಯ ಅಭಿನಯಿಸಿದ್ದಾರೆ. ಈ ಚಿತ್ರವು ಭಾರತೀಯ ಶಿಕ್ಷಣ ವ್ಯವಸ್ಥೆ ಮತ್ತು ಅದರ ನ್ಯೂನತೆಗಳ ಬಗ್ಗೆ ತಿಳಿಸುತ್ತದೆ.

ಶೈಕ್ಷಣಿಕ ವ್ಯವಸ್ಥೆ ವಾಣಿಜ್ಯೀಕರಣ ಮತ್ತು ಗ್ರಾಹಕೀಕರಣದ ಈ ದಿನಗಳಲ್ಲಿ ದಿನವೂ ದಿನಪತ್ರಿಕೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಮೇಲೆ ಒತ್ತಡ, ವಿದ್ಯಾರ್ಥಿಗಳಿಂದ ಗುರುಗಳ ಮೇಲೆ ಹಲ್ಲೆ, ಪಾಲಕರಿಗೆ ಶುಲ್ಕ ಹೆಚ್ಚಳ, ಶಿಕ್ಷಕರು ವಿದ್ಯಾರ್ಥಿಗಳನ್ನು ಅಮಾನವೀಯವಾಗಿ ಶಿಕ್ಷಿಸುತ್ತಿರುವುದು, ವಿದ್ಯಾರ್ಥಿಗಳ ಆತ್ಮಹತ್ಯೆ ಇಂತಹ ನೈಜ ಸಮಸ್ಯೆಗಳನ್ನು ಇಲ್ಲಿ ಹೇಳಲಾಗಿದೆ.

55

F.A.L.T.U (ಫಕೀರ್‌ಚಂದ್ ಮತ್ತು ಲಾಕಿರ್‌ಚಂದ್ ಟ್ರಸ್ಟ್ ಯೂನಿವರ್ಸಿಟಿ)

ರೆಮೋ ಡಿಸೋಜಾ ನಿರ್ದೇಶನದ ಬಾಲಿವುಡ್ ಹಾಸ್ಯ ಚಲನಚಿತ್ರವಾಗಿದೆ. ಚಿತ್ರದಲ್ಲಿ ರಿತೇಶ್ ದೇಶ್‌ಮುಖ್, ಅರ್ಷದ್ ವಾರ್ಸಿ, ಅಕ್ಬರ್ ಖಾನ್ ಮತ್ತು ದರ್ಶನ್ ಜರಿವಾಲಾ ಅವರೊಂದಿಗೆ ಜಾಕಿ ಭಗ್ನಾನಿ, ಪೂಜಾ ಗುಪ್ತಾ, ಚಂದನ್ ರಾಯ್ ಸನ್ಯಾಲ್ ಮತ್ತು ಅಂಗದ್ ಬೇಡಿ ನಟಿಸಿದ್ದಾರೆ.

 ಚಿತ್ರದ ಕಥೆಯು ಮೂವರು ಸೋತ ಸ್ನೇಹಿತರನ್ನು ಆಧರಿಸಿದೆ, ಅವರು ತಮ್ಮದೇ ಆದ ಕಾಲೇಜು ತೆರೆಯುವ ನಿರ್ಧಾರವನ್ನು ಮಾಡುತ್ತಾರೆ.

Read more Photos on
click me!

Recommended Stories