ಯುಕೆ ಪಿಎಂ ರಿಷಿ ಸುನಕ್ ಮತ್ತು ಪತ್ನಿ ಅಕ್ಷತಾರ ಶೈಕ್ಷಣಿಕ ಅರ್ಹತೆ ಮತ್ತು ಸುಂದರ ಪ್ರೇಮಕಥೆ

Published : Sep 12, 2023, 04:44 PM IST

ಯುನೈಟೆಡ್ ಕಿಂಗ್‌ಡಂ ಪ್ರಧಾನ ಮಂತ್ರಿ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಇತ್ತೀಚೆಗೆ G20 ಶೃಂಗಸಭೆಗಾಗಿ ಭಾರತಕ್ಕೆ ಭೇಟಿ ನೀಡಿದ್ದರು ಮತ್ತು ರಾಷ್ಟ್ರ ರಾಜಧಾನಿಯಲ್ಲಿರುವ ಅಕ್ಷರಧಾಮ ದೇವಾಲಯ ಸೇರಿದಂತೆ ದೆಹಲಿಯಲ್ಲಿ  ಹಲವಾರು ಸ್ಥಳಗಳಿಗೆ ಭೇಟಿ ನೀಡಿದರು. ಯುಕೆ ಪಿಎಂ ಮತ್ತು ಅವರ ಪತ್ನಿಯ ಶೈಕ್ಷಣಿಕ ಅರ್ಹತೆಗಳು ಮತ್ತು ಅವರ ಸುಂದರ ಪ್ರೇಮಕಥೆ ಇಲ್ಲಿದೆ.  

PREV
18
ಯುಕೆ ಪಿಎಂ ರಿಷಿ ಸುನಕ್ ಮತ್ತು ಪತ್ನಿ ಅಕ್ಷತಾರ ಶೈಕ್ಷಣಿಕ ಅರ್ಹತೆ ಮತ್ತು ಸುಂದರ ಪ್ರೇಮಕಥೆ

ಯುಕೆ ಪಿಎಂ ರಿಷಿ ಸುನಕ್ ಇತ್ತೀಚೆಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದು, ಯುಕೆಯ ಮೊದಲ ಭಾರತೀಯ ಮೂಲದ ಪ್ರಧಾನಿಯಾಗಿದ್ದಾರೆ. ಸುನಕ್ ಅವರು ಭಾರತೀಯ ಟೆಕ್‌ ಉದ್ಯಮಿ ನಾರಾಯಣ ಮೂರ್ತಿ ಅವರ ಅಳಿಯ ಕೂಡ ಹೌದು, ಅವರು ಬಹುಕೋಟಿ ಟೆಕ್ ಕಂಪನಿ ಇನ್ಫೋಸಿಸ್ ಅನ್ನು ಸ್ಥಾಪಕರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇವರ ಮಗಳು ಅಕ್ಷತಾ ಮೂರ್ತಿ  ಈಗ ಯುಕೆ ಪ್ರಥಮ ಮಹಿಳೆ ಎನಿಸಿಕೊಂಡಿದ್ದಾರೆ.

28

ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ ಮತ್ತು ಸುನಕ್ ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕೂ ಮುನ್ನ ವಿವಾಹವಾಗಿದ್ದರು. ಭಾರತಕ್ಕೆ ಜಿ20 ಶೃಂಗ ಸಭೆಗೆ ಬಂದಾಗ ಇಂಡೋ ವೆಸ್ಟರ್ನ್ ಮತ್ತು ಭಾರತೀಯ ಸಂಸ್ಕೃತಿಗೆ ಒಗ್ಗುವ ಬಟ್ಟೆ ಹಾಕಿ ಮಿಂಚಿದ್ದರು.

38

ರಿಷಿ ಸುನಕ್ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಭಾರತದಿಂದ ಹೋಗಿ ನೆಲೆಸಿರುವ ಪಂಜಾಬಿ ಸಿಂಧಿ ಕುಟುಂಬದಲ್ಲಿ ಜನಿಸಿದರು. ಅವರು ವಿಂಚೆಸ್ಟರ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು ಮತ್ತು ನಂತರ ಆಕ್ಸ್‌ಫರ್ಡ್‌ನ ಪ್ರತಿಷ್ಠಿತ ಲಿಂಕನ್ ಕಾಲೇಜಿನಿಂದ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ನಂತರ, ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದರು. 
 

48

ಹಲವಾರು ವರ್ಷಗಳ ಕಾಲ ಹೂಡಿಕೆ ಬ್ಯಾಂಕರ್ ಆಗಿ ಕೆಲಸ ಮಾಡಿದ ನಂತರ, ಅವರು ರಾಜಕೀಯಕ್ಕೆ ಸೇರಲು ನಿರ್ಧರಿಸಿದರು. ಬಳಿಕ ಯಾರ್ಕ್‌ಷೈರ್‌ನ ರಿಚ್‌ಮಂಡ್‌ನಿಂದ ಸಂಸದರಾಗಿ ಆಯ್ಕೆಯಾದರು. ಈಗ ದೇಶದ ಪ್ರಧಾನಿಯಾಗಿದ್ದಾರೆ.

58

ಅಕ್ಷತಾ ಮೂರ್ತಿ ಅವರು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಶಿಕ್ಷಣದ ಪ್ರವರ್ತಕಿ ಸುಧಾ ಮೂರ್ತಿ ಅವರ ಪುತ್ರಿ. ಅಕ್ಷತಾ ತನ್ನ ಶಾಲಾ ಶಿಕ್ಷಣವನ್ನು ಕರ್ನಾಟಕದ ಬೆಂಗಳೂರಿನಿಂದ ಬಾಲ್ಡ್‌ವಿನ್ ಗರ್ಲ್ಸ್ ಹೈಸ್ಕೂಲ್‌ನಿಂದ ಪೂರ್ಣಗೊಳಿಸಿದಳು. ನಂತರ ಅವರು ಅರ್ಥಶಾಸ್ತ್ರ ಮತ್ತು ಫ್ರೆಂಚ್ ಕಲಿಯಲು ಕ್ಯಾಲಿಫೋರ್ನಿಯಾದ ಕ್ಲಾರೆಮಾಂಟ್ ಮೆಕೆನ್ನಾ ಕಾಲೇಜಿಗೆ ಹೋದರು.

68

 ಅಕ್ಷತಾ ಮೂರ್ತಿ ನಂತರ ಫ್ಯಾಶನ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಮತ್ತು ಮರ್ಚಂಡೈಸಿಂಗ್‌ನಲ್ಲಿ ಬಟ್ಟೆ ತಯಾರಿಕೆಯಲ್ಲಿ ಪದವಿಯನ್ನು ಪಡೆದಿದ್ದಾರೆ.  ನಂತರ ರಿಷಿ ಸುನಕ್ ಅವರಂತೆಯೇ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ತಮ್ಮ ಎಂಬಿಎ ಮಾಡಿದರು. ಆಗ ಒಇವರಿಬ್ಬರ ನಡುವೆ ಪ್ರೀತಿಯಾಗಿ ನಂತರ ಮದುವೆಯಾದರು.

78

ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಇಬ್ಬರೂ ಯುಕೆ ಪ್ರಜೆಗಳಾಗಿದ್ದರೂ, ತಮ್ಮ ಭಾರತೀಯ ಮೂಲಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ತಮ್ಮ ಅಧಿಕೃತ ಪ್ರಧಾನ ಮಂತ್ರಿ ನಿವಾಸದಲ್ಲಿ ಹಲವಾರು ಹಿಂದೂ ಹಬ್ಬಗಳನ್ನು ಅವರು ಆಚರಿಸುತ್ತಾರೆ.
 

 

88

ಪದವಿ ಪಡೆದ ನಂತರ ಬೇರೆ ಬೇರೆ ದೇಶಗಳಲ್ಲಿ ಇಬ್ಬರು ವಾಸಿಸುತ್ತಿದ್ದರೂ ತಮ್ಮ ಪ್ರೀತಿಯನ್ನು ಉಳಿಸಿಕೊಂಡರು. ರಿಷಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹೂಡಿಕೆ ಬ್ಯಾಂಕಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಅಕ್ಷತಾ ಯುಕೆಯಲ್ಲಿ ತನ್ನ ವೃತ್ತಿಜೀವನವನ್ನು ಮುಂದುವರೆಸಿದರು. ಪ್ರೇಮಿಗಳಿಬ್ಬರು 2009ರಲ್ಲಿ ಮದುವೆಯಾದರು. ಈಗ ದಂಪತಿಗೆ ಕೃಷ್ಣ ಸುನಕ್ ಮತ್ತು ಅನೋಷ್ಕಾ ಸುನಕ್ ಎಂಬ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ.

Read more Photos on
click me!

Recommended Stories