ಭಾರತೀಯ ಭಾಷೆಗಳಲ್ಲಿ ಶಿಕ್ಷಣ ಕೊಡಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

First Published | Nov 16, 2021, 6:58 AM IST

ಬೆಂಗಳೂರು(ನ.16): ಇಂದು ಜಗತ್ತು ಜ್ಞಾನಾಧಾರಿತ ಆರ್ಥಿಕತೆಯ ಮೇಲೆ ಸಾಗುತ್ತಿದ್ದು, ಶಿಕ್ಷಣ ಸಂಸ್ಥೆಗಳು ಇದಕ್ಕೆ ಪೂರಕವಾದ ಶಿಕ್ಷಣ ನೀಡಬೇಕು. ಕೃಷಿ ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಸವಾಲು, ಸಮಸ್ಯೆಗಳನ್ನು ಎದುರಿಸಲು ಹೊಸ ಆಲೋಚನೆ, ಸಂಶೋಧನೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ತೊಡಗಬೇಕು ಎಂದು ಉಪರಾಷ್ಟ್ರಪತಿ(Vice President) ವೆಂಕಯ್ಯ ನಾಯ್ಡು(M Venkaiah Naidu) ಹೇಳಿದ್ದಾರೆ. 

ಬೆಂಗಳೂರಿನ (Bengaluru) ಪ್ರತಿಷ್ಠಿತ ಪಿಇಎಸ್‌ ವಿಶ್ವವಿದ್ಯಾಲಯದ(PES University) 6ನೇ ಘಟಿಕೋತ್ಸವ(Convocation) ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ದೇಶದ ಅವಶ್ಯಕತೆ ಹಾಗೂ ಅಂತಾರಾಷ್ಟ್ರೀಯ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು(Universities), ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು(Students) ತಯಾರು ಮಾಡಬೇಕು. ಇದಕ್ಕೆ ಕೇಂದ್ರ ಸರ್ಕಾರ(Central Government) ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ(National Education Policy) ಪೂರಕವಾಗಿದೆ. ಶಿಕ್ಷಣ ಸಂಸ್ಥೆಗಳು ಭಾರತೀಯ ಭಾಷೆಗಳಲ್ಲಿ(Indian languages) ಶಿಕ್ಷಣ(Education) ನೀಡಲು ಒತ್ತು ನೀಡಬೇಕು. ಮಾತೃಭಾಷೆಯಲ್ಲಿ(Mother Tongue) ಶಿಕ್ಷಣ ದೊರೆತರೆ ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುತ್ತದೆ ಎಂದು ಪ್ರತಿಪಾದಿಸಿದ ಉಪರಾಷ್ಟ್ರಪತಿಗಳು

ಕೃಷಿ, ಕೈಗಾರಿಕೆ, ಬಾಹ್ಯಾಕಾಶ(Space) ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನ(Technology) ಬಳಕೆ ಪ್ರಮುಖವಾಗಿದೆ. ಹಾಗಾಗಿ ಪ್ರತಿಯೊಂದು ಕ್ಷೇತ್ರದ ಅವಶ್ಯಕತೆಗಳ ಪೂರೈಕೆಗೆ ಬಹಳ ಸರಳವಾಗಿ ಅಳವಡಿಸಿಕೊಳ್ಳಬಹುದಾದ ತಾಂತ್ರಿಕವಾದ ಹೊಸ ಆಲೋಚನೆಗಳು, ಸಂಶೋಧನೆಗಳಿಗೆ(Research) ವಿದ್ಯಾರ್ಥಿಗಳು ಹೆಚ್ಚು ಒತ್ತು ನೀಡಬೇಕು. ದೇಶವನ್ನು ಜ್ಞಾನ ಶಕ್ತಿಯಾಗಿ ಪರಿವರ್ತಿಸುವಲ್ಲಿ ತಾಂತ್ರಿಕ ವಿವಿಗಳು ವಿಶೇಷ ಪಾತ್ರ ವಹಿಸುತ್ತದೆ. ನಮ್ಮ ದೇಶದಲ್ಲಿ ಶೇ.65ರಷ್ಟು ಜನಸಂಖ್ಯೆ ಯುವ ಜನರಿದ್ದಾರೆ. ಉನ್ನತ ಶಿಕ್ಷಣ ಸಂಸ್ಥೆಗಳು ಈ ಯುವ ಸಮುದಾಯವನ್ನು ಕೌಶಲಾಧಾರಿತ ಶಿಕ್ಷಣದೊಂದಿಗೆ ಸಜ್ಜುಗೊಳಿಸಬೇಕು ಎಂದು ತಿಳಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು 

Tap to resize

5ಜಿ ಟೆಕ್ನಾಲಜಿ(5G Technology), ಮಿಷಿನ್‌ ಲರ್ನಿಂಗ್‌, ರೋಬ್ಯಾಟಿಕ್‌, ಬಯೋಟೆಕ್ನಾಲಜಿ, ಡ್ರೋನ್‌ ಟೆಕ್ನಾಲಜಿಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ವಿಶ್ವದೆಲ್ಲೆಡೆ ಈ ಕ್ಷೇತ್ರಗಳಲ್ಲಿ ಮುಂದಿನ ಕೆಲ ವರ್ಷಗಳಲ್ಲಿ ಭಾರೀ ಸಂಖ್ಯೆಯ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಹೆಚ್ಚಿನ ಉದ್ಯೋಗಾವಕಾಶಗಳನ್ನು ನಮ್ಮ ವಿದ್ಯಾರ್ಥಿಗಳು ಪಡೆದುಕೊಳ್ಳಲು ಸಜ್ಜಗೊಳಿಸಬೇಕು ಎಂದು ವೆಂಕಯ್ಯನಾಯ್ಡು ಅವರು ಕರೆ ನೀಡಿದರು.

ಡಿಆರ್‌ಡಿಒ(DRDO) ಮತ್ತು ಇಸ್ರೋ(ISRO)ಸಹಯೋಗದಲ್ಲಿ ಪಿಇಎಸ್‌ ವಿವಿ ಎರಡು ಉಪಗ್ರಹಗಳನ್ನು(Satellite) ನಿರ್ಮಿಸಿ ಉಡಾವಣೆ ಮಾಡಿರುವುದು ಶ್ಲಾಘನೀಯ. ಸಂಶೋಧನಾ ಕ್ಷೇತ್ರದಲ್ಲಿ ದೇಶದಲ್ಲೇ(India) ಎರಡನೇ ಸ್ಥಾನದಲ್ಲಿದೆ. ಇದಕ್ಕೆ ಪಿಇಎಸ್‌ ವಿವಿಯ ಕುಲಾಧಿಪತಿ ಪ್ರೊ.ಎಂ.ಆರ್‌.ದೊರೆಸ್ವಾಮಿ ಮತ್ತು ಇತರೆ ಎಲ್ಲಾ ಬೋಧಕ ವರ್ಗ ಹಾಗೂ ಇತರೆ ಸಿಬ್ಬಂದಿ ಶ್ರಮ ಕಾರಣವಾಗಿದೆ. ಶಿಕ್ಷಣ ಕ್ಷೇತ್ರದಕ್ಕೆ ದೊರೆಸ್ವಾಮಿ ಅವರ ಬದ್ಧತೆ ದೊಡ್ಡದು ಎಂದು ಉಪರಾಷ್ಟ್ರಪತಿಗಳು ಶ್ಲಾಘಿಸಿದ್ದಾರೆ. 

ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌, ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು, ಪಿಇಎಸ್‌ ಸಮಕುಲಾಧಿಪತಿ ಪ್ರೊ.ಡಿ.ಜವಾಹರ್‌, ಕುಲಪತಿ ಡಾ.ಜೆ.ಸೂರ್ಯಪ್ರಸಾದ್‌, ಕುಲಸಚಿವ ಡಾ.ಕೆ.ಎಸ್‌.ಶ್ರೀಧರ್‌ ಮತ್ತಿತರರು ಇದ್ದರು.

ದಶಕಗಳ ಹಿಂದೆ ಕೆಲವೇ ವಿದ್ಯಾರ್ಥಿಗಳಿಂದ ಆರಂಭವಾದ ಪಿಇಎಸ್‌ ಶಿಕ್ಷಣ ಸಂಸ್ಥೆ ಇಂದು ಹತ್ತಾರು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಎಲ್ಲ ಅನುಕೂಲಗಳೊಂದಿಗೆ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ. ಪ್ರತಿ ಕೋರ್ಸಿನ ಪ್ರತಿ ಸೆಮಿಸ್ಟರ್‌ನಲ್ಲೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಒಟ್ಟಾರೆ ಪ್ರತಿ ವರ್ಷ 35 ಕೋಟಿ ರು. ವರೆಗೆ ಸ್ಕಾಲರ್‌ ಶಿಪ್‌(Scholarship) ನೀಡುತ್ತಿದ್ದೇವೆ ಎಂದು ವಿವರಿಸಿದ ಪಿಇಎಸ್‌ ವಿವಿ ಕುಲಾಧಿಪತಿ ಪ್ರೊ.ಎಂ.ಆರ್‌.ದೊರೆಸ್ವಾಮಿ

ಸಮಾರಂಭದಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 22 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು 59 ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ಪ್ರದಾನ ಮಾಡಲಾಯಿತು. ವಿವಿಧ ಪದವಿ, ಪಿಎಚ್‌.ಡಿ, ಎಂ.ಟೆಕ್‌ ಸೇರಿದಂತೆ ಒಟ್ಟಾರೆ 2,249 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

Latest Videos

click me!