ಆರೋಗ್ಯ ಕ್ಷೇತ್ರದ ಶಿಕ್ಷಣ ಎಲ್ಲರಿಗೂ ಸಿಗುವಂತೆ ಮಾಡಲು ಕ್ರಮ. ಎಂಬಿಬಿಎಸ್ ಸೀಟುಗಳ ಪ್ರಮಾಣದಲ್ಲಿ ಶೇ. 53 ಏರಿಕೆ, ಪೋಸ್ಟ್ ಗ್ರಾಜುವೇಶನ್ ಸೀಟ್ ನಲ್ಲಿ ಶೇ. 80 ಏರಿಕೆ.
ಆರೋಗ್ಯ ಶಿಕ್ಷಣದ ಮಹತ್ತರ ಬದಲಾವಣೆಯಿಂದ ದೇಶದ ರಿಮೋಟ್ ಏರಿಯಾಗಳಿಗೂ ವೈದ್ಯಕೀಯ ಸೌಲಭ್ಯ ನೀಡಲಾಗಿದೆ. ಕೊರೋನಾ ಸಂಕಷ್ಟದ ಕಾಲದಲ್ಲಿ ಇದು ದೊಡ್ಡ ಮಟ್ಟದ ನೆರವು ನೀಡಿತು.
ಆರು ಏಮ್ಸ್ ಸಂಸ್ಥೆಗಳ ಕಾರ್ಯಾರಂಭ, ಹದಿನಾರು ವೈದ್ಯ ವಿಜ್ಷಾನ ಸಂಶೋಧನಾ ಕೇಂದ್ರಗಳ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ಈ ಮೂಲಕ ವೈದ್ಯ ಶಿಕ್ಷಣದಲ್ಲಿ ಕೇಂದ್ರ ಸರ್ಕಾರ ಎಲ್ಲ ದಾಖಲೆಗಳನ್ನು ಹಿಂದಕ್ಕೆ ಹಾಕಿತು.
ಹೆಚ್ಚಿನ ಶಿಕ್ಷಕರು ಮತ್ತು ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ.. ಕ್ಲಾಸ್ ರೂಂ ನಲ್ಲಿಯೂ ಮಹತ್ವದ ಬದಲಾವಣೆ ಮಾಡಿಕೊಳ್ಳಲಾಯಿತು. ಯುಪಿಎ ಅವಧಿಗೂ ಈಗಿನ ಅವಧಿಗೂ ಇರುವ ವ್ಯತ್ಯಾಸ ನೀವೇ ನೋಡಿ.
21ನೇ ಶತಮಾನಕ್ಕೆ ವಿದ್ಯಾರ್ಥಿಗಳ ಸಿದ್ಧತೆ..ಶಾಲೆಗಳಿಗೆ ವಿದ್ಯಾರ್ಥಿಗಳ ಹೆಚ್ಚಿನ ಹಾಜರಿ.. ಗುಣಾತ್ಮಕ ಶಿಕ್ಷಣದ ನೀಡಿಕೆ..ವಿಶ್ವದ ಶಿಕ್ಷಣ ಶ್ರೇಯಾಂಕದಲ್ಲಿ 35ನೇ ಸ್ಥಾನ ಪಡೆದುಕೊಂಡಿತು.
ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದಲ್ಲಿ ಮಹತ್ತರ ಸಾಧನೆ. ಶಿಕ್ಷಕರಿಗೂ ತರಬೇತಿ ನೀಡಿಕೆ ಜತೆಯಲ್ಲಿ ವಿಶ್ವ ಮಟ್ಟದ ಶ್ರೇಯಾಂಕದಲ್ಲಿ ಗಣನೀಯ ಏರಿಕೆ.
ಬೇಟಿ ಬಚಾವೋ..ಬೇಟಿ ಪಡಾವೋ ಯೋಜನೆ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ. ಇದರ ಪರಿಣಾಮ ಶಾಲಾ ಹಾಜರಾತಿಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಏರಿಕೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಏರಿ ಏಳು ವರ್ಷಗಳು ಸಂದಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶಿಕ್ಷಣ ಮಹತ್ತರ ಸುಧಾರಣೆ ಕಂಡಿದೆ. ಮೋದಿ ಸರ್ಕಾರದ ಅವಧಿಯಲ್ಲಿ ಕಂಡ ಅಭಿವೃದ್ಧಿಗಳ ಮೇಲೆ ಒಂದು ನೋಟ ಇಲ್ಲಿದೆ.
2014ರ ನಂತರ ಪ್ರತಿ ವರ್ಷ ಒಂದು ಐಐಟಿ ಮತ್ತು ಐಐಎಂ ಸ್ಥಾಪನೆ. ಇದರ ಪರಿಣಾಮ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಯಾಯಿತು.
ಜಮ್ಮು ಮತ್ತು ಕಾಶ್ಮೀರದಿಂದ ಬೇರೆಯಾದ ಲಡಾಕ್ ನಲ್ಲಿ ಸೆಂಟ್ರಲ್ ವಿವಿ ಸ್ಥಾಪನೆ. ಇದು ಸಹ ಕಣಿವೆ ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಹೊಸ ದಾರಿಯನ್ನು ಮಾಡಿಕೊಟ್ಟಿತು.
2014ರ ನಂತರ ಪ್ರತಿ ವಾರ ಹೊಸದೊಂದು ವಿಶ್ವವಿದ್ಯಾನಿಲಯ ಸ್ಥಾಪನೆ. ಇದರ ಪರಿಣಾಮ ದೇಶದಲ್ಲಿ 1043 ವಿಶ್ವವಿದ್ಯಾನಿಲಯಗಳು ಗುಣಮಟ್ಟದ ಶಿಕ್ಷಣ ಆರಂಭಿಸಿದವು .
2014ರ ನಂತರ ಪ್ರತಿ ಎರಡು ದಿನಕ್ಕೆ ಒಂದು ಕಾಲೇಜು ಸ್ಥಾಪನೆ. 2019-20 ರ ಅವಧಿಯಲ್ಲಿ 42, 343 ಕಾಲೇಜುಗಳ ಸ್ಥಾಪನೆ ಮಾಡಲಾಯಿತು.
ಈಶಾನ್ಯ ರಾಜ್ಯಗಳ ಶಿಕ್ಷಣಕ್ಕೂ ವಿಶೇಷ ಆದ್ಯತೆ ನೀಡಿದ ಕೇಂದ್ರ ಸರ್ಕಾರ. ಈಶಾನ್ಯ ಭಾಗದಲ್ಲಿ 22 ಕ್ಕೂ ಅಧಿಕ ವಿಶ್ವವಿದ್ಯಾನಿಲಯಗಳ ಸ್ಥಾಪನೆ ಮಾಡಲಾಯಿತು.
ದೇಶದಲ್ಲೇ ಮೊದಲ ಫೊರೆನ್ಸಿಕ್ ವಿಶ್ವವಿದ್ಯಾನಿಲಯ.. ರೈಲು ಮತ್ತು ಸಾರಿಗೆಗೆ ಸಂಬಂಧಿಸಿ ವಿಶ್ವ ವಿದ್ಯಾನಿಲಯ ಸ್ಥಾಪನೆ ಮಾಡಲಾಯಿತು.
ಐಐಟಿ ಬಾಂಬೆ, ಐಐಟಿ ದೆಹಲಿ, ಐಐಎಸ್‌ಸಿ ಬೆಂಗಳೂರಿನಿಂದ ಅತಿ ಹೆಚ್ಚು ಗುಣಮಟ್ಟದ ಶಿಕ್ಷಣ ನೀಡಿಕೆ ಖ್ಯಾತಿ. ಅತ್ಯುತ್ತಮ ಯುನಿವರ್ಸಿಟಿ 200 ರ ಸ್ಥಾನ ಪಡೆದುಕೊಂಡ ಸಂಸ್ಥೆಗಳು.
ವರ್ಲ್ಡ್ ಯುನಿವರ್ಸಿಟಿ ಶ್ರೇಯಾಂಕದಲ್ಲಿ 71 ವಿಶ್ವವಿದ್ಯಾನಿಲಯಗಳಿಗೆ ಸ್ಥಾನ ಸಿಕ್ಕಿತು. ಹಿಂದಿನ ಎಲ್ಲ ದಾಖಲೆಗಳನ್ನು ಮುರಿದ ದೇಶ ಅತಿ ಹೆಚ್ಚಿನ ವಿವಿ ನೀಡಿದ ಖ್ಯಾತಿ ಪಡೆದುಕೊಂಡಿತು.
ಉನ್ನತ ಶಿಕ್ಷಣಕ್ಕೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡು ಬಂದಿತು. 2019-20 ರ ಅವಧಿಯಲ್ಲಿ 3.85 ಕೋಟಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ದಾಖಲಾದರು.