ನಿಯಮ ಉಲ್ಲಂಘಿಸಿದ 51 ವಾಹನಗಳ ಸೈಲೆನ್ಸರ್ ಕಿತ್ತು ಹಾಕಿ ರೋಲರ್ ಹರಿಸಿದ ಪೊಲೀಸ್!

First Published Feb 4, 2021, 6:19 PM IST

ಬೈಕ್ ಮಾಡಿಫಿಕೇಶನ್ ಮಾಡುವುದು, ಅದರಲ್ಲೂ ಬುಲೆಟ್ ಸೇರಿದಂತೆ ಸ್ಪೋರ್ಟ್ಸ್ ಬೈಕ್‌ಗಳ ಸೈಲೆನ್ಸರ್ ಬದಲಾಯಿಸಿ ಶಬ್ಧ ಹೆಚ್ಚಿಸುವುದು ಬೈಕ್ ಪ್ರಿಯರಿಗೆ ಹೆಚ್ಚು ಇಷ್ಟ. ಆದರೆ ಈ ರೀತಿ ಶಬ್ದ ಹಾಗೂ ಪರಿಸರ ಮಾಲಿನ್ಯ ಮಾಡುವ ಬೈಕ್‌ಗಳ ಬೆನ್ನಟ್ಟಿದ ಉಡುಪಿ ಪೊಲೀಸರು 51 ವಾಹನಗಳ ಸೈಲೆನ್ಸರ್ ಮೇಲೆ ರೋಲರ್ ಹರಿಸಿದ್ದಾರೆ.
 

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಅಂಗವಾಗಿ ಮಣಿಪಾಲ ಪರಿಸರದಲ್ಲಿ ಕರ್ಕಶ ಶಬ್ದ, ಮಾಲಿನ್ಯ ಮಾಡುತ್ತಿದ್ದ 51 ವಾಹನಗಳ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಾತ್ರವಲ್ಲ ಈ ಕರ್ಕಶತೆಗೆ ಕಾರಣವಾದ ಈ ವಾಹನಗಳ ಸೈಲೆನ್ಸರ್‌ಗಳನ್ನು ಪೊಲೀಸರೇ ಕಿತ್ತು ಹಾಕಿ, ಅವುಗಳನ್ನು ಮತ್ತೇ ಬಳಸಲಾಗದಂತೆ ಬುಲ್ಡೋಜರ್‌ನಿಂದ ಅನುಪಯುಕ್ತಗೊಳಿಸಲಾಗಿದೆ.
undefined
ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಅವರು ಸುದ್ದಿಗಾರರಿಗೆ ವಿವರಗಳನ್ನು ನೀಡಿದರು. ಜ. 1ರಿಂದ 31ವರೆಗೆ ನಡೆದ ಈ ಮಾಸಾಚರಣೆಯಲ್ಲಿ ಮಣಿಪಾಲ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಕಾನೂನು ಪ್ರಕಾರ 80 ಡೆಸಿಬಲ್ ಗಿಂತ ಹೆಚ್ಚು ಶಬ್ದಕ್ಕೆ ಕಾರಣವಾಗುತಿದ್ದ ಒಟ್ಟು 50 ದ್ವಿಚಕ್ರ ವಾಹನ ಹಾಗೂ 1 ಕಾರಿನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಅವರಿಂದ 25,500 ರು. ದಂಡ ಸಂಗ್ರಹಿಸಿದ್ದಾರೆ.
undefined
ಈ ಹಿಂದೆ ಶಬ್ದ ಮಾಲಿನ್ಯ ಮಾಡುವವರಿಗೆ ದಂಡ ಮಾತ್ರ ವಿಧಿಸಲಾಗುತಿತ್ತು. ಆದರೇ ವಾಹನ ಸವಾರರು ದಂಡ ಕಟ್ಟಿ ಮತ್ತೇ ಅದೇ ವಾಹನಗಳಲ್ಲಿ ಶಬ್ದ ಮಾಲಿನ್ಯ ಮಾಡುತಿದ್ದರು.
undefined
ಈ ಬಾರಿ ಅಂತಹ ವಾಹನಗಳ ಸೈಲೆನ್ಸರ್‌ಗಳನ್ನೇ ವಶಪಡಿಸಿಕೊಂಡು ಅವುಗಳ ಮೇಲೆ ಬುಲ್ಡೋಜರ್ ಓಡಿಸಿ ನಾಶಪಡಿಸಲಾಗಿದೆ. ಇನ್ನು ಈ ವಿಧಾನವನ್ನು ಜಿಲ್ಲೆಯ ಎಲ್ಲಾ ಠಾಣೆಗಳಲ್ಲಿಯೂ ನಡೆಸಲಾಗುತ್ತದೆ ಎಂದು SPತಿಳಿಸಿದರು.
undefined
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಚಂದ್ರ, ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಸದಾನಂದ ನಾಯಕ್, ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ಎಂ., ಪೊಲೀಸ್ ಉಪನಿರೀಕ್ಷಕ ರಾಜಶೇಖರ್ ವಂದಲಿ, ಸುಧಾಕರ್ ತೋನ್ಸೆ, ಪಿಎಸ್‌ಐ ನಿರಂಜನ್ ಗೌಡ, ದೇವರಾಜ ಬಿರಾದಾರ ಹಾಗೂ ಮಣಿಪಾಲ ಠಾಣೆಯ ಸಿಬ್ಬಂದಿ ದಾಳಿ ಮಾಡಿದರು
undefined
ವಾಹನಗಳ ಮೂಲ ಸೈಲನ್ಸರ್ ಗಳನ್ನು ಬದಲಾಯಿಸಿ ಕರ್ಕಶ ಶಬ್ದವನ್ನುಂಟು ಮಾಡುವ ಸೈಲೆನ್ಸರ್ ಅಳವಡಿಸುವುದು ಕಾನೂನು ಬಾಹಿರವಾಗಿದೆ. ಆದ್ದರಿಂದ ಈ ರೀತಿ ಸೈಲೆನ್ಸರ್ ಗಳನ್ನು ಬದಲಾವಣೆ ಮಾಡುವ ಗ್ಯಾರೇಜ್, ವಾಹನ ಶೋ ರೂಮ್ ಗಳನ್ನು ಪತ್ತೆ ಹಚ್ಚಿ, ಅವರ ಮೇಲೂ ದಂಡ ವಿಧಿಸಲಾಗುತ್ತದೆ. ಜೊತೆಗೆ ಅವುಗಳ ವ್ಯಾಪಾರ ಪರವಾನಗಿಯನ್ನೂ ರದ್ದು ಪಡಿಸಲು ಸ್ಥಳೀಯಾಡಳಿತಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಎಸ್ಪಿ ಎಚ್ಚರಿಕೆ ನೀಡಿದರು.
undefined
ವಾಹನ ಮಾಡಿಫಿಕೇಶನ್, ಸೈಲೆನ್ಸರ್ ಬದಲಾವಣೆ, ಹೆಡ್ ಲೈಟ್ ಬದಲಾವಾನೆ ಸೇರಿದಂತೆ ಯಾವುದೇ ರೀತಿಯ ಬದಲಾವಣೆಗಳು ನಿಯಮ ಉಲ್ಲಂಘನೆಯಾಗಿದೆ. ಈ ನಿಯಮ ಉಲ್ಲಂಘಿಸುವರಿೆ 10,000 ರೂಪಾಯಿ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ.
undefined
click me!