ಭಾರತದಲ್ಲಿ ಡ್ರೈವಿಂಗ್ ಲೆಸನ್ಸ್ ಪಡೆಯುವುದು ಈಗ ಸುಲಭವಲ್ಲ. ಡ್ರೈವಿಂಗ್ ಗೊತ್ತಿದೆ ಅಂದ ತಕ್ಷಣ ಲೆಸೆನ್ಸ್ ನಿಮ್ಮ ಕೈಗೆ ಬರುವುದಿಲ್ಲ. ಅದಕ್ಕೂ ಪೂರಕ ದಾಖಲೆಗಳು ಸರಿಯಾಗಿರಬೇಕು.
ಮಧ್ಯ ಪ್ರದೇಶ ಸರ್ಕಾರ ಇದೀಗ ಡ್ರೈವಿಂಗ್ ಲೆಸೆನ್ಸ್ ಪಡೆಯಲು ಮತ್ತೊಂದು ದಾಖಲೆ ಕಡ್ಡಾಯ ಮಾಡಿದೆ. ಇತರ ದಾಖಲೆಗಳ ಜೊತೆಗೆ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕಡ್ಡಾಯ ಮಾಡಲಾಗಿದೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾನ್ ಈ ಐತಿಹಾಸಿಕ ನಿರ್ಧಾರ ಘೋಷಿಸಿದ್ದಾರೆ. ಯಾವ ವ್ಯಕ್ತಿ ಮೇಲೆ ಮಹಿಳಾ ದೌರ್ಜನ್ಯ ಸೇರಿದಂತೆ ಯಾವುದೇ ಪ್ರಕರಣ ದಾಖಲಾಗಿದ್ದರೆ, ಅವರಿಗೆ ಲೈಸೆನ್ಸ್ ಸಿಗುವುದಿಲ್ಲ.
ಮಾಫಿಯಾ, ಮಹಿಳೆಯರ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳ ಸೇರಿದಂತೆ ಯಾವುದೇ ಪ್ರಕರಣ ದಾಖಲಾಗಿದ್ದರೆ ಲೈಸೆನ್ಸ್ ಪಡೆಯಲು ಸಾಧ್ಯವಿಲ್ಲ.
ಈಗಾಗಲೇ ಲೆಸೆನ್ಸ್ ಪಡೆದಿರುವವರ ಮೇಲೆ ಈ ರೀತಿಯ ಯಾವುದೇ ಮಹಿಳಾ ಪ್ರಕರಣಗಳು ದಾಖಲಾಗಿದ್ದರೆ, ಅಂತವರ ಲೈಸೆನ್ಸ್ ರದ್ದು ಮಾಡಲು ಆದೇಶಿಸಲಾಗಿದೆ.
ಲೈಸೆನ್ಸ್ ಪಡೆಯುವ ಮುನ್ನ ಎಸ್‌ಎಸ್ಎಲ್‌ಸಿ ಅಂಕಪಟ್ಟಿ , ಗುರುತಿನ ಚೀಟಿ, ವಿಳಾಸ ಸೇರಿದಂತೆ ಕೆಲ ದಾಖಲೆಗಳನ್ನು ನೀಡಬೇಕು. ಇದರ ಜೊತೆಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗುಣ-ನಡತೆ ಸರ್ಟಿಫಿಕೇಟ್ ನೀಡಬೇಕಿದೆ.
ಯಾವುದೇ ಪ್ರಕರಣ ದಾಖಲಾಗಿದ್ದರೆ. ಗುಣ-ನಡತೆ ಸರ್ಟಿಫಿಕೇಟ್ ಸಿಗುವುದಿಲ್ಲ. ಸರ್ಕಾರದ ಈ ನಿರ್ಧಾರ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮಹಿಳಾ ಹೋರಾಟಗಾರ್ತಿ ರೊಲಿ ಶಿವಹಾರೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕಠಿಣ ಕಾನೂನಿದ್ದರೂ ಮಹಿಳೆಯ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯತ್ತಲೇ ಇದೆ. ಈ ರೀತಿಯ ಕೆಲ ದಿಟ್ಟ ನಿರ್ಧಾರ ದೇಶಕ್ಕೆ ಮಾದರಿಯಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.