ಅಟಲ್ ಸುರಂಗ 3 ದಿನ ಬಂದ್; ಕಟ್ಟು ನಿಟ್ಟಿನ ಆದೇಶ ಹೊರಡಿಸಿದ ಪೊಲೀಸ್!

First Published | Feb 4, 2021, 2:44 PM IST

ವಿಶ್ವದ ಅತೀ ಉದ್ದ ಹೆದ್ದಾರಿ ಸುರಂಗ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಅಟಲ್ ಟನಲ್, ಮನಾಲಿ ಹಾಗೂ ಲೇಹ್ ನಡುವಿನ ಸಂಪರ್ಕ ಕೊಂಡಿಯಾಗಿದೆ. ಅಟಲ್ ಸುರಂಗವನ್ನು ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದರು. ಅಕ್ಟೋಬರ್ 3 ರಿಂದ ಇಲ್ಲೀವರೆಗೆ ಅಟಲ್ ಸುರಂಗ ಸಂಚಾರಕ್ಕೆ ಮುಕ್ತವಾಗಿತ್ತು. ಆದರೆ  ಇದೀಗ ಮೂರು ದಿನಗಳ ಕಾಲ ಸುರಂಗದಲ್ಲಿ ಸಂಚಾರ ಬಂದ್ ಮಾಡಲಾಗಿದೆ.
 

ಅಕ್ಟೋಬರ್ 3 ರಂದು ಪ್ರಧಾನಿ ನರೇಂದ್ರ ಮೋದಿ ಅತೀ ಎತ್ತರದಲ್ಲಿರುವ ಹಾಗೂ ಅತಿ ಉದ್ದನೆಯ ಹೆದ್ದಾರಿ ಸುರಂಗ ಮಾರ್ಗವನ್ನು ಲೋಕಾರ್ಪಣೆಗೊಳಿಸಿದ್ದರು.
ಈ ಸುಂರಗ ಮಾರ್ಗದಿಂದ ಸುತ್ತಿ ಬಳಿಸಿ ಪ್ರಯಾಣ ಮಾಡುತ್ತಿದ್ದ ತಾಪತ್ರಯ ತಪ್ಪಿದೆ. ಇಷ್ಟೇ ಅಲ್ಲ ಲೇಹ್ ಹಾಗೂ ಮನಾಲಿ ನಡುವಿನ ಅಂತರ 46 ಕಿ.ಮೀ ಕಡಿಮೆಯಾಗಿದೆ.
Tap to resize

ಕಳೆದ ನಾಲ್ಕು ತಿಂಗಳಿನಿಂದ ಅಟಲ್ ಟನಲ್‌ನಲ್ಲಿ ಯಾವುದೇ ಅಡೆತಡೇ ಇಲ್ಲದೆ ಸಾಗಿದ್ದ ಸಂಚಾರ ಇದೇ ಮೊದಲ ಬಾರಿಗೆ ಬಂದ್ ಆಗಿದೆ. ತೀವ್ರ ಹಿಮಪಾತದಿಂದಿ ಅಟಲ್ ಸುರಂಗದಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ಬದಲಾದ ಹವಾಮಾನದಿಂದ ಕುಲು ಪೊಲೀಸರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈಗಾಗಲೇ ಸ್ನೋ ಫಾಲ್ ವಿಪರೀತವಾಗಿದ್ದು, ಹಲವು ವಾಹನಗಳು ಟನಲ್ ಮತ್ತೊಂದು ಬದಿಯಲ್ಲಿ ಸಿಲುಕಿಕೊಂಡಿದೆ.
ಮುಂದಿನ 3 ದಿನಗಳ ಕಾಲ ಸ್ನೋ ಫಾಲ್ ಹೆಚ್ಚಾಗಲಿದೆ. ಈ ವೇಳೆ ಸಂಚಾರ ಮತ್ತಷ್ಟು ಅಪಾಯ ತಂದೊಡ್ಡಲಿದೆ. ಹೀಗಾಗಿ ಸಂಚಾರ್ ಬಂದ್ ಮಾಡಲಾಗುತ್ತಿದೆ ಎಂದ ಕುಲು ಪೊಲೀಸರು ಹೇಳಿದ್ದಾರೆ.
ಫೆಬ್ರವರಿ 3 ರಿಂದ ಫೆಬ್ರವರಿ 5 ವರೆಗೆಗೆ ಹಿಮಪಾತ ವಿಪರೀತವಾಗಲಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಹಿಮಪಾತ ತೀವ್ರವಾಗಿತ್ತು. ಹೀಗಾಗಿ 24 ದಿನಗಳ ಕಾಲ ಕುಲು ಮನಾಲಿ-ಲೇಹ್ ರಸ್ತೆ ಮಾರ್ಗ ಬಂದ್ ಮಾಡಲಾಗಿತ್ತು.
ಈ ಬಾರಿ ಸುರಂಗ ಮಾರ್ಗ ಸಂಚಾರಕ್ಕೆ ಮುಕ್ತವಾಗಿರುವ ಕಾರಣ ಕೇವಲ 3 ರಿಂದ 6 ದಿನ ಗಳ ಕಾಲ ಬಂದ್ ಆಗುವ ಸಾಧ್ಯತೆ ಇದೆ.
ಜನವರಿ ತಿಂಗಳಲ್ಲಿ ಸ್ನೋ ಫಾಲ್ ಕಾರಣ ಅಟಲ್ ಸುರಂಗದ ಮತ್ತೊಂದು ಬದಿಯಲ್ಲಿ ಸಿಲುಕಿದ್ದ 300ಕ್ಕೂ ಹೆಚ್ಚು ಪ್ರಯಾಣಿಕರನ್ನು ಪೊಲೀಸರು ರಕ್ಷಿಸಿದ್ದರು.

Latest Videos

click me!