2021ರಲ್ಲಿ ಜನಸಾಮಾನ್ಯರು- ಶ್ರೀಮಂತರು ಆಯ್ಕೆ ಮಾಡುವ ಸಾರಿಗೆ ಯಾವುದು? ಸಮೀಕ್ಷಾ ವರದಿ ಪ್ರಕಟ!

First Published | Dec 29, 2020, 2:38 PM IST

ಕೊರೋನಾ ವೈರಸ್ ಕಾರಣ ಸಾರಿಗೆ ಆಯ್ಕೆಯಲ್ಲಿ ಹಲವು ಬದಲಾವಣೆಗಳಾಗಿದೆ.  ಮಾಲಿನ್ಯ, ಸಂಚಾರ ದಟ್ಟಣೆ, ಇಂಧನ ಉಳಿತಾಯ, ಸುರಕ್ಷತೆ ಸೇರಿದಂತೆ ಹಲವು ಕಾರಗಳಿಗೆ ಸಾರಿಗೆ ವಾಹವನ್ನೇ ಬಳಸಿ ಎನ್ನುತ್ತಿದ್ದ ಸರ್ಕಾರಗಳೇ ಇದೀಗ, ಸಾರಿಗೆ ವಾಹನಗಳ ಸಂಖ್ಯೆ ಕಡಿಮೆ ಮಾಡಿದೆ.  ಹೀಗಾಗಿ ಜನರೂ ಕೂಡ ವಾಹನ ಖರೀದಿ, ತಮ್ಮ ಸ್ವಂತವಾಹನಗಳನ್ನೇ ನೆಚ್ಚಿಕೊಳ್ಳುತ್ತಿದ್ದಾರೆ. ಇದರ ನಡುವೆ 2021ರಲ್ಲಿ ಶ್ರೀಮಂತರು, ಜನಸಾಮಾನ್ಯರು ಸೇರಿದಂತೆ ಬಹುತೇಕರ ಸಾರಿಗೆ ಆಯ್ಕೆ ಯಾವುದಾಗಲಿದೆ? ಈ ಕುರಿತ ಸಮೀಕ್ಷಾ ವರದಿ ಪ್ರಕಟಗೊಂಡಿದೆ.

2019ರ ಅಂತ್ಯದಲ್ಲಿ ಚೀನಾದ ವುಹಾನ್‌ನಲ್ಲಿ ಆರಂಭಗೊಂಡ ಕೊರೋನಾ ವೈರಸ್, ಬಳಿಕ ಇಡೀ ವಿಶ್ವಕ್ಕೆ ಹರಡಿದೆ. ಇದೀಗ ಒಂದು ವರ್ಷ ಪೂರೈಸಿ, ಎರಡನೇ ವರ್ಷಕ್ಕೂ ಕಾಲಿಟ್ಟಿದೆ. ಇನ್ನೂ ನಿಯಂತ್ರಣಕ್ಕೆ ಸಿಗುತಿಲ್ಲ.
undefined
ಇದರ ನಡುವೆ ಹೊಸ ವೈರಸ್ ತಳಿ ಪತ್ತೆ ಕೂಡ ಆತಂಕ ಹೆಚ್ಚಿಸಿದೆ. ಹೀಗಾಗಿ ಸಾರಿಗೆ ವಾಹನ ಬಳಕೆ ಅತೀ ಕಡಿಮೆಯಾಗಿದೆ. ಅನಿವಾರ್ಯವಾಗಿ, ಬೇರೆ ಆಯ್ಕೆಗಳಿಲ್ಲದೇ ಹೋದಾಗ ಮಾತ್ರ ಸಾರಿಗೆ ವಾಹನಗಳ ಬಳಕೆಯಾಗುತ್ತಿದೆ.
undefined

Latest Videos


ಕೊರೋನಾ ಕಾರಣದಿಂದ ಸಾರಿಗೆ ವಾಹನ ಬಳಕೆ, ಖಾಸಗಿ ವಾಹನಗಲ್ಲಿ ಓಡಾಟ, ಸ್ವಂತ ವಾಹನ ಖರೀದಿ, ಮುಂದಿನ ಆಯ್ಕೆ ಕುರಿತು ಸಮೀಕ್ಷೆಯೊಂದು ಪ್ರಕಟಗೊಂಡಿದೆ. ಈ ಸಮೀಕ್ಷೆ ಪ್ರಕಾರ 2021ರಲ್ಲಿ ಬಹುತೇಕ ಜನರ ಪ್ರಮುಖ ಸಾರಿಗೆ ಸೈಕಲ್ ಎಂದು ವರದಿ ಮಾಡಿದೆ.
undefined
ಶ್ರೀಮಂತರು, ಬಡವರು ಸೇರಿದಂತೆ ಎಲ್ಲರೂ ತಮ್ಮ ದಿನ ನಿತ್ಯದ ಬಳಕೆ, ಕಚೇರಿಗೆ ತೆರಳಲು, ಶಾಲಾ-ಕಾಲೇಜು ಸೇರಿದಂತೆ ಬಹುತೇಕ ಬಳಕೆಗೆ ಸೈಕಲ್ ಪ್ರಮುಖ ಸಾರಿಯಾಗಿದೆ ಎಂದು ಸಮೀಕ್ಷೆ ಹೇಳುತ್ತಿದೆ.
undefined
ಅಮೆರಿಕದ ಕ್ಯಾಲಿಫೋರ್ನಿಯಾ, ಕೊಲಂಬಿಯಾ, ಪ್ಯಾರಿಸ್, ಬಾರ್ಸಿಲೋನಾ ಸೇರಿದಂತೆ ಕಲ ದೇಶಗಳಲ್ಲಿ ಸಮೀಕ್ಷೆ ನಡೆಸಿ ಈ ವರದಿ ಪ್ರಕಟಿಸಿದೆ. ಸೈಕಲ್ ಪ್ರಮುಖ ಸಾರಿಗೆಯಾಗಲು ಕಾರಣಗಳೇನು ಅನ್ನೋದನ್ನು ವರದಿಯಲ್ಲಿ ಹೇಳಿದೆ.
undefined
ಕೊರೋನಾ ವೈರಸ್ ಕಾರಣ ಆರೋಗ್ಯವಾಗಿರಲು ಕನಿಷ್ಠ ವ್ಯಾಯಾಮದ ಅಗತ್ಯವಿದೆ. ಆದರೆ ವ್ಯಯಾಮಕ್ಕಾಗಿ ಸಮಯ ಮೀಸಲಿಡಲು, ಪ್ರತಿದಿನ ವ್ಯಾಯಾಮಾ ಮಾಡಲು ಹೆಚ್ಚಿನವರಿಗೆ ಆಸಕ್ತಿ ಇರುವುದಿಲ್ಲ. ಹೀಗಾಗಿ ಸೈಕಲ್ ಸಾರಿಗೆಯನ್ನಾಗಿ ಮಾಡಿದರೆ ಆರೋಗ್ಯವೂ ವೃದ್ಧಿಸುತ್ತದೆ.
undefined
ಸೈಕಲ್ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಜೊತೆಗೆ ನಿರ್ವಹಣಾ ವೆಚ್ಚ ಶೂನ್ಯ, ಇಷ್ಟೇ ಅಲ್ಲ ಪರಿಸರಕ್ಕೆ ಪೂರಕವಾಗಿದೆ. ಇನ್ನು ಹೆಚ್ಚಿನ ಅಪಾಯಗಳೂ ಇಲ್ಲ. ಹೀಗಾಗಿ ಹೆಚ್ಚಿನವರು ಇದೀಗ ಸೈಕಲ್‌ನತ್ತ ಮೊರೆ ಹೋಗಿದ್ದಾರೆ.
undefined
ಆದರೆ ಭಾರತದಲ್ಲಿ ಇದು ವಿರುದ್ಧವಾಗಿದೆ. ಕೊರೋನಾ ವಕ್ಕರಿಸಿದ ಬಳಿಕ ಹೆಚ್ಚಿನ ಬೈಕ್, ಸ್ಕೂಟರ್, ಕಾರು ಖರೀದಿಗೆ ಮುಂಜಾಗಿದ್ದಾರೆ. ಹೊಸ ವಾಹನ BS6 ಸೇರಿದಂತೆ ಹಲವು ಕಾರಣದಿಂದ ದುಬಾರಿಯಾಗಿದೆ. ಹೀಗಾಗಿ ಸೆಕೆಂಡ್ ಹ್ಯಾಂಡ್ ವಾಹನಕ್ಕೂ ಬೇಡಿಕೆ ಹೆಚ್ಚಾಗಿದೆ.
undefined
ಹೊಸ ವಾಹನಗಳ ಮಾರಾಟದಲ್ಲೂ ಗಣನೀಯ ಏರಿಕೆ ಕಂಡಿದೆ. ವಾಹನ ಖರೀದಿಸಲು ಶಕ್ತಿ ಇಲ್ಲದವರೂ ಮಾತ್ರ ಸಾರಿಗೆ ವಾಹನ ಬಳಕೆ ಮಾಡುತ್ತಿದ್ದಾರೆ. ಇದರ ಬದಲು ಸೈಕಲ್ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದರೆ ಎಲ್ಲಾ ದೃಷ್ಟಿಯಿಂದಲೂ ಉತ್ತಮವಾಗಿದೆ.
undefined
click me!