ಜಾತಿ ಸ್ಟಿಕ್ಕರ್ ಅಂಟಿಸಿದರೆ ವಾಹನವೇ ಸೀಝ್; ಕಟ್ಟು ನಿಟ್ಟಿನ ಆದೇಶ ಜಾರಿ!

First Published | Dec 27, 2020, 4:14 PM IST

ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಬಳಿಕ ಭಾರತದಲ್ಲಿ ಸಾರಿಗೆ ನಿಯಮ ಕಠಿಣವಾಗಿದೆ. ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ತೆರಬೇಕಾಗುತ್ತದೆ. ಚಲ್ತಾ ಹೇ ಅನ್ನೋ ಧೋರಣೆ ಇದೀಗ ಇಲ್ಲ. ಎಲ್ಲವೂ ನಿಯಮದ ಚೌಕಟ್ಟಿನೊಳಗೆ ಇರಬೇಕು.  ನಂಬರ್ ಪ್ಲೇಟ್ ಮೇಲೆ ಜಾತಿ, ಲವ್ ಯು ಚಿನ್ನು ಸೇರಿದಂತೆ ಹಲವು ರೀತಿಯ ಸ್ಟಿಕ್ಕರ್ ಕಾಣಬಹುದು. ಇಂತಹ ವಾಹನಗಳನ್ನು ಪೊಲೀಸರು ಸೀಝ್ ಮಾಡಲು ಮುಂದಾಗಿದ್ದಾರೆ.

ಮೋಟಾರು ವಾಹನ ನಿಯಮದಲ್ಲಿ ನಂಬರ್ ರಿಜಿಸ್ಟ್ರೇಶನ್ ಪ್ಲೇಟ್ ಕುರಿತು ಸ್ಪಷ್ಟವಾಗಿ ಹೇಳಲಾಗಿದೆ. ನಿಯಮದ ಪ್ರಕಾರ ಸರ್ಕಾರ ಹೇಳಿರುವ IND ನಂಬರ್ ಪ್ಲೇಟ್ ಹಾಕಿಸಬೇಕು.
ಇನ್ನು ನಂಬರ್ ಪ್ಲೇಟ್‌ನಲ್ಲಿ ವಾಹನದ ರಿಜಿಸ್ಟ್ರೇಶನ್ ಹೊರತುಪಡಿಸಿದರೆ ಇನ್ನೇನು ಇರಬಾರದು. ಹೆಚ್ಚಿನವರು ನಂಬರ್ ಪ್ಲೇಟ್‌ನಲ್ಲಿ ಚಿನ್ನು ಲವ್ ಯೂ, ಮಾಮ್ಸ್ ಗಿಫ್ಟ್, ತಮ್ಮ ಜಾತಿ ಸ್ಟಿಕ್ಕರ್ ಅಂಟಿಸಿರುತ್ತಾರೆ.
Tap to resize

ಹೀಗೆ ನಂಬರ್ ಪ್ಲೇಟ್ ಮೇಲೆ ನಂಬರ್ ಹೊರತುಪಡಿಸಿದರೆ ಇನ್ನೇನು ಹಾಕುವಂತಿಲ್ಲ. ಹೀಗೆ ಹಾಕಿದವರ ಮೇಲೆ ಉತ್ತರ ಪ್ರದೇಶ ಪೊಲೀಸರು ಕಾರ್ಯಚರಣೆ ಆರಂಭಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ವಾಹನದ ನಂಬರ್ ಪ್ಲೇಟ್ ಮೇಲೆ ತಮ್ಮ ತಮ್ಮ ಜಾತಿ ಸ್ಟಿಕ್ಕರ್ ಹೆಚ್ಚಾಗಿ ಹಾಕಿಸಿಕೊಂಡಿರುತ್ತಾರೆ. ಜಾಟ್ ಸೇರಿದಂತೆ ಹಲವು ಜಾತಿಗಳ ಸ್ಟಿಕ್ಕರ್ ಉತ್ತರ ಪ್ರದೇಶದಲ್ಲಿ ಜನಪ್ರಿಯವಾಗಿದೆ.
ಇದೀಗ ಉತ್ತರ ಪ್ರದೇಶ ಪೊಲೀಸರು ನಂಬರ್ ಪ್ಲೇಟ್ ಮೇಲೆ ಜಾತಿ ಸ್ಟಿಕ್ಕರ್ ಹಾಕಿದ ವಾಹನವನ್ನೇ ಸೀಝ್ ಮಾಡುವುದಾಗಿ ಹೇಳಿದ್ದಾರೆ. ಇನ್ನು ಇತರ ಏನಾದರು ಸ್ಟಿಕ್ಕರ್ ಇದ್ದರೆ ದುಬಾರಿ ದಂಡ ಹಾಕುವುದಾಗಿ ಪೊಲೀಸರು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಸರಾಸರಿ ನೋಡಿದರೆ ಪ್ರತಿ 20ನೇ ಕಾರಿನಲ್ಲಿ ಜಾತಿ ಸ್ಟಿಕ್ಕರ್ ಕಾಣಸಿಗುತ್ತದೆ. ನಂಬರ್ ಪ್ಲೇಟ್ ಮೇಲಿನ ಈ ರೀತಿಯ ಪ್ರಯತ್ನಕ್ಕೆ ತಕ್ಕ ಉತ್ತರ ನೀಡಲು ಉತ್ತರ ಪ್ರದೇಶ ಪೊಲೀಸರ ಸಜ್ಜಾಗಿದೆ.
ಉತ್ತರ ಪ್ರದೇಶದಲ್ಲಿ ಕಾರಿನ ನಂಬರ್ ಪ್ಲೇಟ್ ಮೇಲೆ ಜಾತಿ ಸ್ಟಿಕ್ಕರ್ ಆರಂಭವಾಗಿದ್ದು, 2003ರಲ್ಲಿ. ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ 2003 ರಿಂದ 2007ರ ವರೆಗೆ ತಮ್ಮ SUV ಕಾರಿನಲ್ಲಿ ಯಾದವ್ ಎಂಬ ಜಾತಿ ಸ್ಟಿಕ್ಕರ್ ಹಾಕಿಸಿಕೊಂಡು ತಿರುಗಾಡಿದ್ದರು.
ಮುಲಾಯಂ ಸಿಂಗ್ ಯಾದವ್‌ರಿಂತ ಆರಂಭಗೊಂಡ ಈ ಶೋಕಿ ಇದೀಗ ಸಾಮಾನ್ಯ ಜನರು ತಮ್ಮ ತಮ್ಮ ಜಾತಿಗಳ ಸ್ಟಿಕ್ಕರನ್ನು ನಂಬರ್ ಪ್ಲೇಟ್ ಮೇಲೆ ನಮೂದಿಸಿ ತಿರುಗಾಡುತ್ತಿದ್ದಾರೆ.

Latest Videos

click me!