ಆಟೋಮೊಬೈಲ್ ಕಂಪನಿ ಜೊತೆ ಗಡ್ಕರಿ ಮಾತುಕತೆ, ಕಾರು ಖರೀದಿಸುವರಿಗೆ ಭರ್ಜರಿ ಡಿಸ್ಕೌಂಟ್ ಆಫರ್!

ಆಟೋಮೊಬೈಲ್ ಕಂಪನಿಗಳ ಜೊತೆ ಸಚಿವ ನಿತಿನ್ ಗಡ್ಕರಿ ಮಾತುಕತೆ ನಡೆಸಿದ್ದಾರೆ. ಇದರ ಪರಿಣಾಮ ಇದೀಗ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಆಫರ್ ನೀಡಲು ಒಪ್ಪಿಕೊಂಡಿದೆ. ಡಿಸ್ಕೌಂಟ್ ಆಫರ್ ಕುರಿತ ವಿವರ ಇಲ್ಲಿದೆ.
 

ಭಾರತದ ಆಟೋಮೊಬೈಲ್ ತಯಾರಕ ಕಂಪನಿಗಳ ಜೊತೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಮಾತುಕತೆ ಬಳಿಕ ಮಾತನಾಡಿರುವ ಗಡ್ಕರಿ, ಆಟೋಕಂಪನಿಗಳು ಡಿಸ್ಕೌಂಟ್ ನೀಡಲು ಒಪ್ಪಿಕೊಂಡಿದೆ ಎಂದಿದ್ದಾರೆ.
 

ಪ್ರಮುಖವಾಗಿ ನಿತಿನ್ ಗಡ್ಕರಿ ನಡೆಸಿದ ಮಾತುಕತೆ ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಡಿಸ್ಕೌಂಟ್ ಕುರಿತು. ಹೌದು ಶೇಕಡಾ 1.5 ರಿಂದ ಶೇಕಡಾ 3 ರಷ್ಟು ಡಿಸ್ಕೌಂಟ್ ನೀಡಲು ಕಂಪನಿಗಳು ಒಪ್ಪಿಕೊಂಡಿದೆ.


ಅವಧಿ ಮುಗಿದ ಹಳೇ ಕಾರುಗಳನ್ನು ಗುಜುರಿಗೆ ಹಾಕಿ ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಈ ಆಫರ್ ನೀಡಲಾಗುತ್ತಿದೆ. ಈ ಮೂಲಕ 2021ರಲ್ಲಿ ಜಾರಿಗೆ ತಂದಿರುವ ವಾಹನ ಗುಜುರಿ ನೀತಿಗೆ ಪುಷ್ಠಿ ನೀಡಲು ಸರ್ಕಾರ ಮುಂದಾಗಿದೆ.
 

ವಾಯು ಮಾಲಿನ್ಯಕ್ಕೆ ಕಾರಣವಾಗಿರುವ ಅವಧಿ ಮುಗಿದ ಹಳೇ ವಾಹನವನ್ನು ಗುಜುರಿಗೆ ಹಾಕಿ, ಹೊಸ ವಾಹನ ಖರೀದಿಸುವ ಎಲ್ಲಾ ಗ್ರಾಹಕರಿಗೆ ಡಿಸ್ಕೌಂಟ್ ಆಫರ್ ಸಿಗಲಿದೆ.
 

ಐಷಾರಾಮಿ ಕಾರು ಖರೀದಿಸಿದರೆ 25,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗುತ್ತಿದೆ. ಇದರ ಜೊತೆ ಕೆಲ ರಾಜ್ಯಗಳಲ್ಲಿ ರಸ್ತೆ ತೆರಿಗೆಯಲ್ಲೂ ಡಿಸ್ಕೌಂಟ್ ನೀಡಲು ಚರ್ಚೆ ನಡೆಯುತ್ತಿದೆ.
 

ಗುಜುರಿಗೆ ಹಾಕುವ ವಾಹನಗಳ ಮಾಲೀಕರಿಗೆ ಜಿಎಸ್‌ಟಿ ಸೇರಿದಂತೆ ಇತರ ತೆರಿಗೆಯಲ್ಲೂ ಭಾರಿ ಕಡಿತಗೊಳಿಸಲು ಮಾತುಕತೆ ನಡೆಸಿದ್ದಾರೆ. ಈ ಮೂಲಕ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲು ಆಟೋಮೊಬೈಲ್ ಕ್ಷೇತ್ರ ಸಜ್ಜಾಗಿದೆ.

ವಾಣಿಜ್ಯ ವಾಹನಗಳ ಖರೀದಿಯಲ್ಲೂ ಡಿಸ್ಕೌಂಟ್ ಸಿಗಲಿದೆ. ಜೊತೆಗೆ ಹಳೇ ವಾಹನದ ಬ್ರಾಂಡ್ ಕಾರು ಅಥವಾ ಇತರ ವಾಹನ ಖರೀದಿಸುವ ಗ್ರಾಹಕರಿಗೆ ಮತ್ತಷ್ಟು ಡಿಸ್ಕೌಂಟ್ ನೀಡಲು ಆಟೋ ಕಂಪನಿಗಳು ಮುಂದಾಗಿದೆ.

ನಿತಿನ್ ಗಡ್ಕರಿ ಮಾತಕತೆ ಫಲಪ್ರದವಾಗಿರುವ ಕುರಿತು ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಆಟೋ ಕಂಪನಿಗಳು ಡಿಸ್ಕೌಂಟ್ ಕುರಿತು ಅಧಿಕೃತ ಘೋಷಣೆ ಮಾಡಲಿದೆ. 
 

ದೇಶದಲ್ಲೆಡೆ ಸರ್ಕಾರ 60 ವಾಹನ ಗುಜುರಿ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ.  ಗುಜುರಿ ಕೇಂದ್ರಗಳಲ್ಲಿ ಅವಧಿ ಮೀರಿದ ವಾಹನ ಗುಜುರಿಗೆ ಹಾಕಿ, ಮಾಲೀಕರು ಮಾರುಕಟ್ಟೆ ಮೌಲ್ಯದ ಜೊತೆಗೆ ಹೊಸ ವಾಹನ ಖರೀದಿಯಲ್ಲಿ ಡಿಸ್ಕೌಂಟ್ ಪಡೆಯಬಹುದು.
 

Latest Videos

click me!