5. ಸುಗಮ ಚಾಲನೆ..
ಅಗತ್ಯವಿಲ್ಲದಿದ್ದರೂ ಸಹ ಹಠಾತ್ ಬ್ರೇಕ್ ಹಾಕುವುದು, ನಿಗದಿತ ವೇಗದಲ್ಲಿ ಚಲಾಯಿಸದೆ ಒಮ್ಮೆ ವೇಗವಾಗಿ ಮತ್ತು ಒಮ್ಮೆ ನಿಧಾನವಾಗಿ ಚಲಾಯಿಸುವುದು ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ. ಸುಗಮ ಚಾಲನೆಯಿಂದ ಇಂಧನ ಉಳಿತಾಯವಾಗುತ್ತದೆ.
6. ಕಡಿಮೆ ವೇಗ ಒಳ್ಳೆಯದು..
ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುವುದರಿಂದ ಪೆಟ್ರೋಲ್, ಡೀಸೆಲ್ ಹೆಚ್ಚು ಖರ್ಚಾಗುತ್ತದೆ. ಕಡಿಮೆ ವೇಗ ಅಂದರೆ ಸುಮಾರು 50-60 ಕಿ.ಮೀ./ಗಂ ವೇಗದಲ್ಲಿ ಪ್ರಯಾಣಿಸುವುದರಿಂದ ಮೈಲೇಜ್ ಹೆಚ್ಚಾಗುತ್ತದೆ. ಈ ವಿಷಯವನ್ನು ಕಂಪನಿಗಳು ವಾಹನಗಳ ಸ್ಪೀಡೋ ಮೀಟರ್‌ನಲ್ಲಿ ಹಸಿರು, ಹಳದಿ, ಕೆಂಪು ಸ್ಟಿಕ್ಕರ್‌ಗಳ ಮೂಲಕ ತಿಳಿಸುತ್ತವೆ. ಹಲವರು ಇವುಗಳನ್ನು ಗಮನಿಸುವುದಿಲ್ಲ.