ನವೆಂಬರ್ 15ರಿಂದ ಫಾಸ್ಟ್ಯಾಗ್ ನೀತಿಯಲ್ಲಿ ಮಹತ್ವದ ಬದಲಾವಣೆ, ಪಾವತಿಯಲ್ಲಿ ವಿನಾಯಿತಿ

Published : Oct 04, 2025, 07:38 PM IST

ನವೆಂಬರ್ 15ರಿಂದ ಫಾಸ್ಟ್ಯಾಗ್ ನೀತಿಯಲ್ಲಿ ಮಹತ್ವದ ಬದಲಾವಣೆ, ಪಾವತಿಯಲ್ಲಿ ವಿನಾಯಿತಿ ನೀಡಲಾಗಿದೆ. ಹಲವು ಅಪ್‌ಡೇಟ್ ಬಳಿಕ ಇದೀಗ ಪಾವತಿಯಲ್ಲಿ ಮಾಡಿರುವ ವಿನಾಯಿತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನ.15ರಿಂದ ಫಾಸ್ಟ್ಯಾಗ್‌ನಲ್ಲಿ ಬದಲಾವಣೆ ಏನು?

PREV
16
ಫಾಸ್ಟ್ಯಾಗ್ ನೀತಿಯಲ್ಲಿ ಮೇಜರ್ ಚೇಂಜಸ್

ಫಾಸ್ಟ್ಯಾಗ್ ನೀತಿಯಲ್ಲಿ ಮೇಜರ್ ಚೇಂಜಸ್

ಭಾರತದಲ್ಲಿ ಟೋಲ್ ಬಳಿ ನಗದು ಪಾವತಿಗೆ ಬ್ರೇಕ್ ಹಾಕಿ ಡಿಜಿಟಲ್ ಪಾವತಿ ಮಾಡಲಾಗಿದೆ. ಫಾಸ್ಟ್ಯಾಗ್ ಮೂಲಕ ಟೋಲ್ ಗೇಟ್ ಬಳಿ ಪಾವತಿ ಮಾಡಲಾಗುತ್ತಿದೆ. ಇದರಿಂದ ಸಮಯವೂ ಉಳಿತಾಯವಾಗಲಿದೆ, ನಗದು ವ್ಯವಾಹರ ತಪ್ಪಲಿದೆ. ಇತ್ತೀಚೆಗೆ ತಿಂಗಳ ಪಾಸ್, ವಾರ್ಷಿಕ ಪಾಸ್ ಸೇರಿದಂತೆ ಹಲವು ರೀತಿಯ ಅಪ್‌ಡೇಟ್ ಮಾಡಲಾಗಿದೆ. ಇದೀಗ ಫಾಸ್ಟ್ಯಾಗ್ ನಿಯಮದಲ್ಲಿ ಮತ್ತೊಂದು ಮಹತ್ವದ ಬದಲಾವಣೆಯಾಗುತ್ತಿದೆ.

26
ಪಾವತಿಯಲ್ಲಿ ವಿನಾಯಿತಿ

ಪಾವತಿಯಲ್ಲಿ ವಿನಾಯಿತಿ

ಫಾಸ್ಟ್ಯಾಗ್ ಮೂಲಕ ಹಣ ಪಾವತಿ ಸರಳ ಹಾಗೂ ಸುಲಭವಾಗಿದೆ. ವಾಹನ ಮಾಲೀಕರು ಫಾಸ್ಟ್ಯಾಗ್‌ಗೆ ರೀಚಾರ್ಜ್ ಮಾಡಿಕೊಂಡರೆ ಸಾಕು, ಸ್ಕ್ಯಾನ್ ಮೂಲಕ ಅಟೋಮ್ಯಾಟಿಕ್ ಆಗಿ ಹಣ ಪಾವತಿಯಾಗಲಿದೆ. ಆದರೆ ಕೆಲವರು ಫಾಸ್ಟ್ಯಾಗ್ ಇಲ್ಲದೆ ಪ್ರಯಾಣ ಮಾಡುವವರು ದುಪ್ಪಟ್ಟು ಹಣವನ್ನು ದಂಡದ ರೂಪದಲ್ಲಿ ಪಾವತಿ ಮಾಡಬೇಕು. ಇದೀಗ ಫಾಸ್ಟ್ಯಾಗ್ ಇಲ್ಲದ ವಾಹನಗಳ ಪಾವತಿಯಲ್ಲಿ ಕೆಲ ವಿನಾಯಿತಿ ನೀಡಲಾಗಿದೆ.

36
1.25ರಷ್ಟು ಪಾವತಿ ವಿನಾಯಿತಿ

1.25ರಷ್ಟು ಪಾವತಿ ವಿನಾಯಿತಿ

ನಗದು ಮೂಲಕ ಟೋಲ್ ಗೇಟ್ ಬಳಿ ಪಾವತಿ ಮಾಡಿದರೆ ದುಪ್ಪಟ್ಟು ಹಣ ನೀಡಬೇಕು. ಈ ನಿಯಮದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಯುಪಿಐ ಮೂಲಕ ಡಿಜಿಟಲ್ ಪಾವತಿ ಮಾಡಿದರೆ 1.25ರಷ್ಟು ಪಾವತಿ ಮಾಡಿದರೆ ಸಾಕು. ಇದುವರೆಗೆ ಫಾಸ್ಟ್ಯಾಗ್ ಇಲ್ಲದ ವಾಹನಗಳ ಪಾವತಿ ಯಾವುದೇ ರೂಪದಲ್ಲಿದ್ದರೂ ದುಪ್ಪಟ್ಟು ಹಣ ಪಾವತಿ ಮಾಡಬೇಕಿತ್ತು.

46
1.25ರಷ್ಟು ಪಾವತಿ ಎಂದರೆ ಎಷ್ಟು?

1.25ರಷ್ಟು ಪಾವತಿ ಎಂದರೆ ಎಷ್ಟು?

ಫಾಸ್ಟ್ಯಾಗ್ ಇಲ್ಲದ ವಾಹನಗಳಿಗೆ ಇದುವರೆಗೆ ದುಪ್ಪಟ್ಟು ಹಣ ಪಾವತಿ ಮಾಡಬೇಕಿತ್ತು. ಇದೀಗ ಫಾಸ್ಟ್ಯಾಗ್ ಇಲ್ಲದಿದ್ದರೂ ಪಾವತಿಯನ್ನು ಡಿಜಿಟಲ್ ಅಂದರೆ ಯುಪಿಐ ಮೂಲಕ ಮಾಡಿದರೆ 1.25ರಷ್ಟು ಪಾವತಿ ಮಾಡಿದರೆ ಸಾಕು. ಉದಾಹರಣೆಗೆ ಫಾಸ್ಟ್ಯಾಗ್ ಮೂಲಕ ಟೋಲ್ ಗೇಟ್ ಬಳಿ 100 ರೂಪಾಯಿ ಪಾವತಿ ಮಾಡಿದರೆ, ಫಾಸ್ಟ್ಯಾಗ್ ಇಲ್ಲದೇ ನಗದು ಮೂಲಕ ಪಾವತಿ ಮಾಡುವುದಾದರೆ 200 ರೂಪಾಯಿ ಪಾವತಿ ಮಾಡಬೇಕು. ಇನ್ನು ಫಾಸ್ಟ್ಯಾಗ್ ಇಲ್ಲ ಆದರೆ ಪಾವತಿಯನ್ನು ಯುಪಿಐ ಮೂಲಕ ನೀವೆ ಟೋಲ್ ಬೂತ್ ಬಳಿ ಸ್ಕ್ಯಾನ್ ಮಾಡಿ ಮಾಡಿದರೆ 125 ರೂಪಾಯಿ ಪಾವತಿಸಿದರೆ ಸಾಕು.

56
ಡಿಜಿಟಲ್ ಪಾವತಿ ಉತ್ತೇಜಿಸಲು ಕ್ರಮ

ಡಿಜಿಟಲ್ ಪಾವತಿ ಉತ್ತೇಜಿಸಲು ಕ್ರಮ

ಡಿಜಿಟಲ್ ಪಾವತಿ ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇಷ್ಟೇ ಅಲ್ಲ ನಗದು ಮೂಲಕ ನಡೆಯುತ್ತಿರುವ ವ್ಯವಹಾರದ ಲೆಕ್ಕ ಟ್ಯಾಲಿಯಾಗುತ್ತಿಲ್ಲ ಅನ್ನೋ ಆರೋಪಗಳು ಕೇಳಿಬರುತ್ತಿದೆ. ಹಣ ಪೋಲಾಗದಂತೆ, ಸೋರಿಕೆಯಾಗದಂತೆ ತಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಕ್ರಮ ಕೈಗೊಂಡಿದೆ.

66
ಫಾಸ್ಟ್ಯಾಗ್ ಬಳಕೆಯಲ್ಲಿ ಪ್ರಗತಿ

ಫಾಸ್ಟ್ಯಾಗ್ ಬಳಕೆಯಲ್ಲಿ ಪ್ರಗತಿ

ಭಾರತದಲ್ಲಿ ಬಹುತೇಕ ವಾಹನ ಮಾಲೀಕರು ಫಾಸ್ಟ್ಯಾಗ್ ಬಳಸುತ್ತಿದ್ದಾರೆ. ಈ ಪೈಕಿ ಕೆಲವೇ ಕೆಲವು ಮಂದಿ ಫಾಸ್ಟ್ಯಾಗ್‌ನಿಂದ ದೂರ ಉಳಿದಿದ್ದಾರೆ. ಇದೀಗ ಯುಪಿಐ ಪಾವತಿ ಮೂಲಕ ವಿನಾಯಿತಿ ನೀಡಿರುವುದು ಫಾಸ್ಟ್ಯಾಗ್‌ನಿಂದ ದೂರ ಉಳಿದಿರುವ ಮಂದಿಗೆ ಕೊಂಚ ರಿಲೀಫ್ ಸಿಕ್ಕಿದೆ.

Read more Photos on
click me!

Recommended Stories