ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ? ಇದರಲ್ಲಿದೆ ಹಲವು ಪ್ರಯೋಜನ

Published : Jun 27, 2025, 04:25 PM IST

ವಾಹನ ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್ ಕಡ್ಡಾಯ. ಆದರೆ ಇತ್ತೀಚೆಗೆ ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್ ಟ್ರೆಂಡ್ ಆಗುತ್ತಿದೆ. ಏನಿದು ಡಜಿಟಲ್ ಡ್ರೈವಿಂಗ್ ಲೈಸೆನ್ಸ್? ಇದನ್ನು ಪಡೆಯುವುದು ಹೇಗೆ? ಪ್ರಯೋಜನವೇನು?

PREV
15

ವಾಹನ ಚಲಾಯಿಸಲು ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಇರಲೇಬೇಕು. ಇದರಲ್ಲೂ ನೀವು ವಾಹನ ಚಲಾಯಿಸುವಾಗ ನಿಮ್ಮ ಕೈಯಲ್ಲಿ ಡ್ರೈವಿಂಗ್ ಲೈಸೆನ್ಸ್ ಇಟ್ಟುಕೊಂಡಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಯಾರೂ ಕೂಡ ಹಾರ್ಡ್ ಕಾಪಿ ಅಥವಾ ಆರ್‌ಟಿಒ ನೀಡಿದ ಡ್ರೈವಿಂಗ್ ಲೈಸೆನ್ಸ್ ಕಾರ್ಡ್ ಇಟ್ಟುಕೊಳ್ಳುವುದಿಲ್ಲ. ಇದರ ಬದಲಾಗಿ ಡಿಜಿಟಲ್ ಲೈಸೆನ್ಸ್ ಕಾರ್ಡ್ ಇಟ್ಟುಕೊಳ್ಳುತ್ತಾರೆ. ಇದರಿಂದ ಹಲವು ಪ್ರಯೋಜನಗಳಿವೆ.

25

ಇದು ಡಿಜಿಟಲ್ ಇಂಡಿಯಾ, ಬಹುತೇಕ ಎಲ್ಲಾ ಕೆಲಸಗಳು ಡಿಜಿಟಲ್ ಮೂಲಕವೇ ಆಗುತ್ತಿದೆ. ಇದಕ್ಕೆ ಡಿಎಲ್ ಕೂಡ ಹೊರತಾಗಿಲ್ಲ. ಯಾರ ಬಳಿ ಡ್ರೈವಿಂಗ್ ಲೈಸೆನ್ಸ್ ಇದೆಯೋ ಅವರೆಲ್ಲರೂ ಈ ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅರ್ಹರಾಗಿದ್ದಾರೆ. ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್‌ನಿಂದ ಹಾರ್ಡ್ ಕಾಪಿ ಲೈಸೆನ್ಸ್ ಇರಬೇಕು ಎಂದಿಲ್ಲ. ಡಿಜಿಟಲ್ ಡಿಎಲ್ ಎಲ್ಲಾ ಕಡೆ ಮಾನ್ಯವಾಗಿದೆ.

35

ಡಿಜಿಟಲ್ ಲೈಸೆನ್ಸ್ ಪಡೆಯುವುದು ಹೇಗೆ?

ಡಿಜಿಟಲ್ ಲೈಸೆನ್ಸ್ ಪಡೆಯಲು ಹೆಚ್ಚು ಸರ್ಕಸ್ ಮಾಡಬೇಕಿಲ್ಲ. ಕೇಂದ್ರ ಸರ್ಕಾರದ ಅಧಿಕೃತ ಡಿಜಿ ಲಾಕರ್ ಅಥವಾ ಪರಿವಾಹನ ಆ್ಯಪ್ ಮೂಲಕ ಡಿಜಿಟಲ್ ಲೈಸೆನ್ಸ್ ಪಡೆಯಲು ಸಾಧ್ಯವಿದೆ. ಆ್ಯಪ್ ಮೂಲಕ ನಿಮ್ಮ ಡ್ರೈವಿಂಗ್ ಲೈಸೆನ್ಸ್ ನಂಬರ್ ಹಾಕಿ ಡಿಜಿಟಲ್ ಡಿಎಲ್ ಡೌನ್ಲೋಡ್ ಮಾಡಿಕೊಳ್ಳಬಹುದು.

45

ಮೊಬೈಲ್‌ನಲ್ಲಿ ಡಿಜಿಲಾಕರ್ ಆ್ಯಪ್ ಡೌನ್ಲೋಡ್ ಮಾಡಿ ಲಾಗಿನ್ ಆಗಬೇಕು. ಬಳಿಕ ಮಿನಿಸ್ಟ್ರಿ ಆಫ್ ರೋಡ್ ಆ್ಯಂಡ್ ಟ್ರಾನ್ಸ್‌ಪೋರ್ಟ್ ಹೈವೇ ವಿಭಾಗ ಕ್ಲಿಕ್ ಮಾಡಿ ನಿಮ್ಮ ಲೈಸೆನ್ಸ್ ಐಡಿ ನಂಬರ್ ಹಾಕಿ ನಿಮ್ಮ ಲೈಸೆನ್ಸ್ ಡೌನ್ಲೋಡ್ ಮಾಡಿಕೊಳ್ಳಬುಹುದು. ಇದು ನಿಮ್ಮ ಡಿಜಿಟಲ್ ವರ್ಶನ್ ಲೈಸೆನ್ಸ್.

55

ಅಧಿಕೃತ ಆ್ಯಪ್ ಮೂಲಕ ಡೌನ್ಲೋಡ್ ಮಾಡಿದ ಡಿಜಿಟಲ್ ಲೈಸೆನ್ಸ್ ಮಾನ್ಯವಾಗಿರುತ್ತದೆ. ಇದರಿಂದ ಹಾರ್ಡ್ ಕಾಪಿ ಕೈಯಲ್ಲಿ ಇಟ್ಟುಕೊಳ್ಳಬೇಕು ಎಂದಿಲ್ಲ. ಮೊಬೈಲ್ ಮೂಲಕ ಡ್ರೈವಿಂಗ್ ಡಿಜಿಟಲ್ ಲೈಸೆನ್ಸ್ ತೋರಿಸಿದರೆ ಸಾಕು. ಕಳದುಕೊಳ್ಳುವ, ಮರೆತು ಹೋಗುವ ಆತಂಕ ಇಲ್ಲಿ ಇರುವುದಿಲ್ಲ.

Read more Photos on
click me!

Recommended Stories