ಬರೀ 3.4 ಸೆಕೆಂಡ್‌ನಲ್ಲಿ 0-100 KM ಸ್ಪೀಡ್‌, ಆಸ್ಟನ್‌ ಮಾರ್ಟಿನ್‌ 2024 Vantage ಭಾರತದಲ್ಲಿ ಲಾಂಚ್‌, ಬೆಲೆ ಎಷ್ಟು ಗೊತ್ತಾ?

Published : Aug 30, 2024, 05:45 PM IST

ಆಸ್ಟನ್ ಮಾರ್ಟಿನ್ ಪ್ರಕಾರ, ವಾಂಟೇಜ್ ಕೇವಲ 3.4 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ / ಗಂ ವೇಗವನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಗರಿಷ್ಠ ವೇಗ ಗಂಟೆಗೆ 325 ಕಿಮೀ ಎಂದು ಹೇಳಲಾಗಿದೆ. ವಾಂಟೇಜ್‌ನಲ್ಲಿನ ಹೊಸ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅಳವಡಿಸಲಾಗಿದ್ದು, ಮರ್ಸಿಡೀಸ್ ಸಾಫ್ಟ್‌ವೇರ್‌ಅನ್ನು ಬಳಸಿಕೊಳ್ಳಲಾಗಿಲ್ಲ. ಆಸ್ಟನ್ ಮಾರ್ಟಿನ್‌ನ ಸ್ವಂತ ಇಂಟರ್‌ಫೇಸ್ ಅನ್ನು ಬಳಸಿದೆ.

PREV
112
ಬರೀ 3.4 ಸೆಕೆಂಡ್‌ನಲ್ಲಿ 0-100 KM ಸ್ಪೀಡ್‌, ಆಸ್ಟನ್‌ ಮಾರ್ಟಿನ್‌ 2024 Vantage ಭಾರತದಲ್ಲಿ ಲಾಂಚ್‌, ಬೆಲೆ ಎಷ್ಟು ಗೊತ್ತಾ?

ಆಸ್ಟನ್ ಮಾರ್ಟಿನ್ ಭಾರತದಲ್ಲಿ 2024 ವಾಂಟೇಜ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ, ಇದರ ಬೆಲೆ ₹3.99 ಕೋಟಿ (ಎಕ್ಸ್ ಶೋ ರೂಂ ಬೆಲೆ). ಭಾರತದ ಐಷಾರಾಮಿ ಕಾರು ಮಾರುಕಟ್ಡೆಗೆ ಬ್ರಿಟಿಷ್‌ ವಾಹನ ತಯಾರಕರ ಅತ್ಯಂತ ನಿರೀಕ್ಷಿತ ಮಾಡೆಲ್‌ನ ಪ್ರವೇಶ ಇದಾಗಿದೆ.
 

212

ಅದ್ಭುತವಾದ ಬಾಹ್ಯ ವಿನ್ಯಾಸ: ಹೊಸ ವಾಂಟೇಜ್ ಗಮನಾರ್ಹವಾದ ಬಾಹ್ಯ ಅಪ್‌ಡೇಟ್‌ಗಳನ್ನು ಹೊಂದಿದೆ, ವಿಶಾಲವಾದ ಗ್ರಿಲ್ ಜೊತೆಗೆ ಕಾರಿನ ಏರೋಡೈನಾಮಿಕ್‌ ದಕ್ಷತೆಯನ್ನು ಹೆಚ್ಚಿಸುತ್ತದೆ. ತನ್ನ ಆಕ್ರಮಣಕಾರಿ ವಿನ್ಯಾಸದ ಸಲುವಾಗಿ ಕಾರ್‌ನ ಬಾನೆಟ್‌ಅನ್ನು ಮರುವಿನ್ಯಾಸ ಮಾಡಲಾಗಿದೆ. ಉತ್ತಮ ಗೋಚರತೆಗಾಗಿ ಮರುವಿನ್ಯಾಸಗೊಳಿಸಲಾದ LED ಹೆಡ್‌ಲ್ಯಾಂಪ್‌ಗಳು ಇನ್ನಷ್ಟು ದೊಡ್ಡದಾಗಿದೆ. ಆದರೆ ಸ್ಲಿಮ್ LED ಟೈಲ್‌ಲೈಟ್‌ಗಳು ಕಾರಿನ ಹಿಂಭಾಗದ ಬಾಹ್ಯರೇಖೆಗಳನ್ನು ವಿಶಿಷ್ಟ ನೋಟಕ್ಕಾಗಿ ಅನುಸರಿಸುತ್ತವೆ.

312

ಒಳಾಂಗಣ ಫೀಚರ್‌ನಲ್ಲೂ ಅಪ್‌ಡೇಟ್‌:  ವಾಂಟೇಜ್‌ನ ಒಳಭಾಗದಲ್ಲಿ ಅದರ ಹಿಂದಿನ ಮಾದರಿಗಿಂತ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಡ್ಯಾಶ್‌ಬೋರ್ಡ್‌ನಲ್ಲಿ 10.25 ಇಂಚ್‌ನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್‌ ಇದೆ. ವಿಭಿನ್ನ ರೀತಿಯ ಕನೆಕ್ಟಿವಿಟಿ ಆಫರ್‌ಗಳನ್ನು ಇದು ನೀಡುತ್ತದೆ. ಹೊಸದಾಗಿ ವಿನ್ಯಾಸಗೊಳಿಸಲಾದ ಮೂರು-ಸ್ಪೋಕ್ ಸ್ಟೀರಿಂಗ್ ವೀಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನೊಂದಿಗೆ ಜೋಡಿಸಲಾಗಿದೆ.
 

412

ಹೈ-ಪರ್ಫಾರ್ಮೆನ್ಸ್ ಇಂಜಿನ್: ಬಾನೆಟ್ ಅಡಿಯಲ್ಲಿ, ವಾಂಟೇಜ್ ಮರ್ಸಿಡಿಸ್-AMG ನಿಂದ ಪಡೆದ 4.0-ಲೀಟರ್ ಟ್ವಿನ್-ಟರ್ಬೊ V8 ಎಂಜಿನ್‌ನಿಂದ ಚಾಲಿತವಾಗಿದೆ. ಈ ಎಂಜಿನ್ 656 BHP ಮತ್ತು 800 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಇದನ್ನು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮೂಲಕ ಹಿಂದಿನ ಚಕ್ರಗಳಿಗೆ ಪವರ್‌ ಕಳಿಸುತ್ತದೆ.

512

ವೇಗ ಮತ್ತು ವೇಗವರ್ಧನೆ: ಆಸ್ಟನ್ ಮಾರ್ಟಿನ್ ಪ್ರಕಾರ, ವಾಂಟೇಜ್ 3.4 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ / ಗಂ ವೇಗವನ್ನು ಹೆಚ್ಚಿಸಬಹುದು. ಗರಿಷ್ಠ ವೇಗ ಗಂಟೆಗೆ 325 ಕಿಮೀ ಎಂದು ಹೇಳಲಾಗಿದೆ.

612

ವರ್ಧಿತ ಎಂಜಿನ್ ಟ್ಯೂನಿಂಗ್: ಹೊಸ ಕ್ಯಾಮ್ ಪ್ರೊಫೈಲ್‌ಗಳು, ಸುಧಾರಿತ ಕೂಲಿಂಗ್ ಸಿಸ್ಟಮ್‌ಗಳು ಸೇರಿದಂತೆ ಹಲವಾರು ತಾಂತ್ರಿಕ ಸುಧಾರಣೆಗಳಿಂದ ವಾಂಟೇಜ್‌ನ ಎಂಜಿನ್ ಪ್ರಯೋಜನಗಳನ್ನು ಪಡೆಯುತ್ತದೆ. ಹೆಚ್ಚುವರಿಯಾಗಿ, ಒಟ್ಟಾರೆ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ದೊಡ್ಡ ಟರ್ಬೋಚಾರ್ಜರ್‌ಗಳನ್ನು ಸ್ಥಾಪಿಸಲಾಗಿದೆ.
 

712

ಸುಧಾರಿತ ಡ್ರೈವಿಂಗ್ ಡೈನಾಮಿಕ್ಸ್: ಕಾರಿನ ಕಾರ್ಯಕ್ಷಮತೆಯನ್ನು ಅದರ ಅಡಾಪ್ಟಿವ್ ಡ್ಯಾಂಪರ್‌ಗಳು ಮತ್ತು ಎಲೆಕ್ಟ್ರಾನಿಕ್ ರಿಯರ್ ಡಿಫರೆನ್ಷಿಯಲ್‌ನಿಂದ ಇನ್ನಷ್ಟು ಹೆಚ್ಚಿಸಲಾಗಿದೆ. 50:50 ವೇಟ್ ಡಿಸ್ಟ್ರಿಬ್ಯೂಷನ್‌ ನಿರ್ವಹಿಸಲು ಈ ವ್ಯವಸ್ಥೆಗಳು ಒಟ್ಟಾಗಿ ಕೆಲಸ ಮಾಡುತ್ತವೆ. ವಾಂಟೇಜ್ ಮೈಕೆಲಿನ್ ಪೈಲಟ್ ಸ್ಪೋರ್ಟ್ 5 ಟೈರ್‌ಗಳೊಂದಿಗೆ ಅಳವಡಿಸಲಾಗಿರುವ 21-ಇಂಚಿನ ಚಕ್ರಗಳನ್ನು ಸಹ ಹೊಂದಿದೆ.

812

ಹೊಸ ಮಾದರಿಯ ಇನ್ಫೋಟೈನ್‌ಮೆಂಟ್ ಸಿಸ್ಟಂ: ವಾಂಟೇಜ್‌ನಲ್ಲಿರುವ ಹೊಸ ಇನ್ಫೋಟೈನ್‌ಮೆಂಟ್ ಸಿಸ್ಟಂ ಮರ್ಸಿಡಿಸ್ ಸಾಫ್ಟ್‌ವೇರ್‌ನಿಂದ ಬದಲಾವಣೆ ಮಾಡಲಾಗಿದೆ.  ಆಸ್ಟನ್ ಮಾರ್ಟಿನ್‌ನ ಸ್ವಂತ ಇಂಟರ್‌ಫೇಸ್ ಅನ್ನು ಸಂಯೋಜಿಸುತ್ತದೆ. ಈ ವ್ಯವಸ್ಥೆಯು ಸ್ಮಾರ್ಟ್‌ಫೋನ್ ಸಂಪರ್ಕ, 3D ಲೈವ್ ಮ್ಯಾಪಿಂಗ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಮಿರರಿಂಗ್ ಮತ್ತು ಆನ್-ಫುಟ್ ನ್ಯಾವಿಗೇಶನ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

912

ಬ್ರೇಕ್ ಮತ್ತು ಕಸ್ಟಮೈಸೇಶನ್ ಆಪ್ಶನ್ಸ್‌: ಸ್ಟ್ಯಾಂಡರ್ಡ್ ವಾಂಟೇಜ್ ಸ್ಟೀಲ್ ಬ್ರೇಕ್‌ಗಳನ್ನು ಹೊಂದಿದೆ, ಆದರೆ ಖರೀದಿದಾರರು ಕಾರ್ಬನ್ ಸೆರಾಮಿಕ್ ಬ್ರೇಕ್‌ಗಳಿಗೆ ಅಪ್‌ಗ್ರೇಡ್ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ. ಈ ಐಚ್ಛಿಕ ಬ್ರೇಕ್‌ಗಳು ಉತ್ತಮ ಶಾಖ ಪ್ರತಿರೋಧ ಮತ್ತು ಕಡಿಮೆ ಬ್ರೇಕ್ ಫೇಡ್ ಅನ್ನು ನೀಡುತ್ತವೆ, ಇದು ಹೆಚ್ಚಿನ ಕಾರ್ಯಕ್ಷಮತೆಯ ಚಾಲನೆಗೆ ನಿರ್ಣಾಯಕವಾಗಿದೆ.
 

1012

F1 ಸೇಫ್ಟಿ ಕಾರ್ ಹೆರಿಟೇಜ್: Vantage ತನ್ನ ವಿಶೇಷ F1 ಆವೃತ್ತಿಯಲ್ಲಿ ಅಧಿಕೃತ F1 ಸುರಕ್ಷತಾ ಕಾರಿನ ಶೀರ್ಷಿಕೆಯನ್ನು ಸಹ ಹೊಂದಿದೆ. ಈ ಪಾತ್ರವು ಕಾರಿನ ಕಾರ್ಯಕ್ಷಮತೆಯ ಕ್ರೆಡೆನ್ಶಿಯಲ್‌ಗಳನ್ನು ಮತ್ತು ಮೋಟಾರ್‌ಸ್ಪೋರ್ಟ್‌ನ ಪ್ರಪಂಚಕ್ಕೆ ಅದರ ಸಂಪರ್ಕವನ್ನು ಒತ್ತಿಹೇಳುತ್ತದೆ.

1112


ಮುಂಬರುವ ಆಸ್ಟನ್ ಮಾರ್ಟಿನ್ ಮಾದರಿಗಳು:ಆಸ್ಟನ್ ಮಾರ್ಟಿನ್ ಭಾರತದಲ್ಲಿ ಇನ್ನೂ ಎರಡು ಮಾದರಿಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ನವೀಕರಿಸಿದ DBX707, SUV ಅನ್ನು ನವೆಂಬರ್ 2024 ರಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಮುಂದಿನ ತಲೆಮಾರಿನ ವ್ಯಾಂಕ್ವಿಶ್, ಸೆಪ್ಟೆಂಬರ್ 2024 ರಲ್ಲಿ ಜಾಗತಿಕವಾಗಿ ಪಾದಾರ್ಪಣೆ ಮಾಡಲಿದೆ, 2025 ರ ಎರಡನೇ ತ್ರೈಮಾಸಿಕದ ವೇಳೆಗೆ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ.
 

1212

ಡೆಲಿವರಿ ಶೆಡ್ಯುಲ್‌ : ಭಾರತೀಯ ಗ್ರಾಹಕರಿಗೆ ವಾಂಟೇಜ್‌ನ ಡೆಲಿವರಿಯು 2024 ರ ನಾಲ್ಕನೇ ತ್ರೈಮಾಸಿಕದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.

Read more Photos on
click me!

Recommended Stories