ಪೆಟ್ರೋಲ್ ಬೆಲೆಗೆ 'ಬೆಂದ'ಕಾಳೂರು; ಶತಕದತ್ತ ದಾಪುಗಾಲು!

First Published | Jan 22, 2021, 2:42 PM IST

ಪೆಟ್ರೋಲ್, ಡೀಸೆಲ್ ಬೆಲೆ ಈಗಾಗಲೇ ಸಾರ್ವಕಾಲಿಕ ಗರಿಷ್ಠ ಬೆಲೆ ತಲುಪಿದೆ. ಸದ್ಯಕ್ಕೆ ಇಂಧನ ಬೆಲೆ ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಕಾರಣ ದಿನದಿಂದ ದಿನಕ್ಕೆ ಪೆಟ್ರೋಲ್ ಡೀಸೆಲ್ ಬೆಲೆ ಏರುತ್ತಲೇ ಇದೆ. ಇದೀಗ ಬೆಂಗಳೂರು ಪೆಟ್ರೋಲ್, ಡೀಸೆಲ್ ಬೆಲೆಗೆ ಬೆಂದು ಹೋಗುತ್ತಿದೆ. 

ಬೆಂದಕಾಳೂರು ಇದೀಗೆ ಪೆಟ್ರೋಲ್ ಬೆಲೆಗೆ ಬೆಂದು ಹೋಗುತ್ತಿದೆ. ಹೌದ ರಾಜ್ಯ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 88 ರೂಪಾಯಿ ದಾಟಿದೆ. ಈ ಮೂಲಕ ಇದೀಗ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆತಂಕ ಆರಂಭಗೊಂಡಿದೆ.
ಬೆಂಗಳೂರಿನಲ್ಲಿ ಜನವರಿ 22ಕ್ಕೆ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 88.07 ರೂಪಾಯಿ ಆಗಿದೆ. ಇನ್ನು ಡೀಸೆಲ್ ಬೆಲೆ 80.20 ರೂಪಾಯಿ ಆಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಇಂಧನ ಕಂಡ ಗರಿಷ್ಠ ದರವಾಗಿದೆ.
Tap to resize

ಶ್ರೀನಗರ ಹಾಗೂ ರಾಜಸ್ಥಾನದಲ್ಲಿ ಪೆಟ್ರೋಲ್ ಬೆಲೆ ಬರೋಬ್ಬರಿ 97.50 ರೂಪಾಯಿ ಆಗಿದೆ. ಈ ಮೂಲಕ 100 ರೂಪಾಯಿ ಗಡಿ ತಲಪಲು ಕೇವಲ 2.50 ರೂಪಾಯಿ ಮಾತ್ರ ಬಾಕಿ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 85.45 ರೂಪಾಯಿ ಆಗಿದ್ದು, ಡೀಸೆಲ್ ಬೆಲೆ 75.63 ರೂಪಾಯಿ ಪ್ರತಿ ಲೀಟರ್‌ಗೆ ಆಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 92 ರೂಪಾಯಿ ಆಗಿದೆ. ದೇಶದ ಪ್ರತಿ ಮೂಲೆ ಮೂಲೆಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಗಗನಕ್ಕೇರಿದೆ.
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಗೆ ಅಬಕಾರಿ ಸುಂಕ ಕೂಡ ಪ್ರಮುಖ ಕಾರಣವಾಗಿದೆ ಎಂದು ವರದಿ ಹೇಳುತ್ತಿದೆ. ಹೀಗಾಗಿ ಸುಂಕ ಕಡಿತಗೊಳಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಚಿವಾಲಯ, ಹಣಕಾಸಲು ಸಚಿವಾಲಯದ ಜೊತೆ ಮಾತುಕತೆ ಮುಂದಾಗಿದೆ.
2018ರಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗರಿಷ್ಠ ಪ್ರಮಾಣ ತಲುಪಿದಾಗ ಸರ್ಕಾರ ಅಬಕಾರಿ ಸುಂಕ ಕಡಿತ ಮಾಡಿತ್ತು. 1.50 ರೂಪಾಯಿ ವರೆಗೆ ಅಬಕಾರಿ ಸುಂಕ ಕಡಿತ ಮಾಡಲಾಗಿತ್ತು

Latest Videos

click me!