6 ವಿಧದ ಎಲೆಕ್ಚ್ರಿಕ್ ವಾಹನ ಬಿಡುಗಡೆ ಮಾಡಿದ ಬೆಂಗಳೂರಿನ ಬಾಲನ್ ಎಂಜಿನಿಯರಿಂಗ್!

Published : Jan 29, 2021, 03:46 PM IST

ಬೆಂಗಳೂರು ಮೂಲದ ಬಾಲನ್ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ 6 ವಿಧದ ಎಲೆಕ್ಟ್ರಿಕ್ ವಾಹನ ಬಿಡುಗಡೆ  ಮಾಡಿದೆ. ರಾಜ್ಯದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ನಿತಿನ್ ಗಡ್ಕರಿ, ಹಾಗೂ ಸದಾನಂದ ಗೌಡ ನೂತನ ವಾಹನಗಳನ್ನು ಬಿಡುಗಡೆ ಮಾಡಿದ್ದಾರೆ. ವಾಹನಗಳ ಕುರಿತ ಹೆಚ್ಚಿನ ವಿವರ ಇಲ್ಲಿದೆ.

PREV
110
6 ವಿಧದ ಎಲೆಕ್ಚ್ರಿಕ್ ವಾಹನ ಬಿಡುಗಡೆ ಮಾಡಿದ ಬೆಂಗಳೂರಿನ ಬಾಲನ್ ಎಂಜಿನಿಯರಿಂಗ್!

ಬೆಂಗಳೂರು ಮೂಲದ ಬಾಲನ್ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ಇಂದು ಆರು ವಿಧದ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಿತು. ಸರಕು ಸಾಗಣೆ, ಕೃಷಿ, ನಾಗರಿಕ ಸೌಕರ್ಯ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಜನರಿಗೆ ಹಾಗೂ ಸಂಸ್ಥೆಗಳಿಗೆ ಅನುಕೂಲವಾಗುವ ಈ ವಾಹನಗಳು ಆರು ವಿಧದಲ್ಲಿ ಲಭ್ಯವಿವೆ. ರಾಜ್ಯದ ಕೈಗಾರಿಕೆ ಸಚಿವ ಶ್ರೀ ಜಗದೀಶ್ ಶೆಟ್ಟರ್ ಅವರು ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್‍ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಿದರು. ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಶ್ರೀ ಸದಾನಂದ ಗೌಡ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಎಂಎಸ್‍ಎಂಇ ಸಚಿವ ಶ್ರೀ ನಿತಿನ್ ಗಡ್ಕರಿ ಉಪಸ್ಥಿತರಿದ್ದರು.

210

ಇಂದು ಬಿಡುಗಡೆಯಾದ ಆರು ಮಾದರಿಯ ಎಲೆಕ್ಟ್ರಿಕ್ ವಾಹನಗಳು – ಎಲೆಕ್ಟ್ರಿಕ್ ಲೋಡರ್ `ವಿಶ್ವಾಸ್’, ಎಲೆಕ್ಟ್ರಿಕ್ ಗಾರ್ಬೇಜ್ ವಾಹನ `ಸ್ವಚ್ಛ ರಥ್’, ಎಲೆಕ್ಟ್ರಿಕ್ ಪ್ಯಾಸೆಂಜರ್ ರಿಕ್ಷಾ `ಬಿ 5’, ಎಲೆಕ್ಟ್ರಿಕ್ ಸ್ಯಾನಿಟೈಸಿಂಗ್ ವಾಹನ, ಎಲೆಕ್ಟ್ರಿಕ್ ಫ್ಯೂಮಿಗೇಶನ್ ವಾಹನ ಹಾಗೂ ಎಲೆಕ್ಟ್ರಿಕ್ ಪುಶ್ ಕಾರ್ಟ್ `ಕಮಲಾ.’ ಇವು ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಹಾಗೂ ಮುನ್ಸಿಪಾಲಿಟಿಯಂತಹ ನಾಗರಿಕ ಸೇವಾ ಸಂಸ್ಥೆಗಳಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಿವೆ. ಜೊತೆಗೆ, ನೂತನವಾಗಿ ಬಿಡುಗಡೆಯಾದ ಎಲೆಕ್ಟ್ರಿಕ್ ವಾಹನಗಳು ದೀರ್ಘಕಾಲ ಬಾಳಿಕೆ ಬರುವ ಹಾಗೂ ಗಟ್ಟಿಮುಟ್ಟಾದ ವಾಹನಗಳಾಗಿವೆ. ಕಂಪನಿಯು ವಾಹನದ ಬ್ಯಾಟರಿಗೆ ಹಾಗೂ ಮೋಟರ್ ಕಂಟ್ರೋಲರ್‍ಗೆ 4 ವರ್ಷಗಳ ವಾರಂಟಿ ನೀಡಲಿದೆ.

310

ಬಾಲನ್ ಎಂಜಿನಿಯರಿಂಗ್ ಕಂಪನಿಯು ಅನೇಕ ವಿಧದ ಎಲೆಕ್ಟ್ರಿಕಲ್ ವಾಹನಗಳ ಉತ್ಪಾದನೆ, ಜೋಡಣೆ ಹಾಗೂ ಮಾರಾಟದಲ್ಲಿ ತೊಡಗಿಸಿಕೊಂಡಿದ್ದು, ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ದೊಡ್ಡ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಪರವಾನಗಿ ಪಡೆದುಕೊಂಡಿದೆ.

410

ಸದ್ಯ ಕಂಪನಿಯ ಎಲೆಕ್ಟ್ರಿಕ್ ವಾಹನಗಳು ಬೆಂಗಳೂರಿನಲ್ಲಿ ಉತ್ಪಾದನೆಯಾಗುತ್ತಿವೆ. ತಿಂಗಳಿಗೆ 300-400 ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಸಾಮಥ್ರ್ಯವನ್ನು ಈ ಘಟಕ ಹೊಂದಿದೆ. ಮುಂಬರುವ 6ರಿಂದ 9 ತಿಂಗಳಲ್ಲಿ ಕಂಪನಿಯ ಉತ್ಪಾದನಾ ಘಟಕವು ಪೂರ್ಣ ಪ್ರಮಾಣದಲ್ಲಿ ಬಾಗಲಕೋಟೆಗೆ ಸ್ಥಳಾಂತರವಾಗಲಿದ್ದು, ಆಗ ಬೆಂಗಳೂರಿನ ಘಟಕವು ನಗರದ ಸರ್ವೀಸ್ ಸೆಂಟರ್ ಆಗಿ ಮಾರ್ಪಡಲಿದೆ.

510

ಎಲೆಕ್ಟ್ರಿಕ್ ವಾಹನಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಬಾಲನ್ ಎಂಜಿನಿಯರಿಂಗ್ ಪ್ರೈ.ಲಿ. ನಿರ್ದೇಶಕ ಶ್ರೀ ಬಾಲಕೃಷ್ಣ ಅವರು, `ಬಾಗಲಕೋಟೆಯಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ನಾವು 25 ಎಕರೆ ಜಾಗ ಖರೀದಿ ಮಾಡಿದ್ದೇವೆ. ಅಲ್ಲಿನ ಭೂ ಅಭಿವೃದ್ಧಿ ಚಟುವಟಿಕೆಗಳು ಈಗಾಗಲೇ ಪೂರ್ಣಗೊಂಡಿವೆ. ನಿರ್ಮಾಣ ಕಾಮಗಾರಿ ಆರಂಭಿಸಲು ಕೆಲ ಹಣಕಾಸು ವ್ಯವಸ್ಥೆಗಳಿಗಾಗಿ ಕಾಯುತ್ತಿದ್ದೇವೆ’ ಎಂದು ಹೇಳಿದರು.

610

`ಬಾಗಲಕೋಟೆಯ ಉತ್ಪಾದನಾ ಘಟಕವನ್ನು 50 ಕೋಟಿ ರು. ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಅದಕ್ಕೆ ಬಂಡವಾಳವನ್ನು ಎರಡು ಹಂತದಲ್ಲಿ ತೊಡಗಿಸಲಾಗುವುದು. ಅದು ಅತ್ಯಾಧುನಿಕ ಉತ್ಪಾದನಾ ಘಟಕವಾಗಿರಲಿದೆ. ಅಲ್ಲಿ ನಮ್ಮದೇ ಬ್ರ್ಯಾಂಡ್ ಅಡಿ ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದನೆ ಮಾಡಲಿದ್ದೇವೆ. ಜೊತೆಗೆ, ನಮ್ಮ ಜೊತೆ ಕೈಜೋಡಿಸಲು ಮುಂದೆ ಬರುವವರಿಗೂ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದನೆ ಮಾಡಿಕೊಡುತ್ತೇವೆ. ಕೆಲ ದೊಡ್ಡ ಕಂಪನಿಗಳು ಈಗಾಗಲೇ ನಮ್ಮ ಜೊತೆ ಪಾಲುದಾರಿಕೆ ಮಾಡಿಕೊಂಡು ಅವರ ಹೆಸರಿನಲ್ಲಿ ವಾಹನಗಳನ್ನು ತಯಾರಿಸಿಕೊಡುವಂತೆ ಒಪ್ಪಂದ ಮಾಡಿಕೊಳ್ಳಲು ಚರ್ಚೆ ನಡೆಸುತ್ತಿವೆ’ ಎಂದೂ ತಿಳಿಸಿದರು.

710

ಬಾಗಲಕೋಟೆ ಘಟಕದಲ್ಲಿ ಆರಂಭದಲ್ಲಿ ವರ್ಷಕ್ಕೆ 25,000 ವಾಹನಗಳನ್ನು ತಯಾರಿಸಬಹುದು. ನಂತರ ಘಟಕವನ್ನು ವಿಸ್ತರಿಸಿದ ಮೇಲೆ ವರ್ಷಕ್ಕೆ 50,000ಕ್ಕೂ ಹೆಚ್ಚು ವಾಹನಗಳನ್ನು ವಾರ್ಷಿಕವಾಗಿ ಉತ್ಪಾದಿಸಲು ಸಾಧ್ಯವಿದೆ. ಕಂಪನಿಯ ಪ್ರವರ್ತಕರು ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವ ರೀತಿಯ ವಾಹನಗಳನ್ನು ಉತ್ಪಾದಿಸಬೇಕೆಂದು ಬಹಳ ಕಾಲದಿಂದ  ಯೋಚಿಸುತ್ತಿದ್ದರು. ಸಾಗಣೆ ವೆಚ್ಚವನ್ನು ಗಣನೀಯವಾಗಿ ತಗ್ಗಿಸುವ, ಬಂಡವಾಳಕ್ಕೆ ತಕ್ಕಂತೆ ಲಾಭ ತರುವ ಹಾಗೂ ಖರ್ಚು ಕಡಿಮೆ ಮಾಡುವ ರೀತಿಯ ವಾಹನಗಳನ್ನು ಉತ್ಪಾದಿಸುವುದು ಕಂಪನಿಯ ಉದ್ದೇಶವಾಗಿತ್ತು. ಹಣಕ್ಕೆ ತಕ್ಕಂತೆ ಉತ್ತಮ ಸೇವೆ ನೀಡುವ ಹಾಗೂ ದೀರ್ಘಕಾಲ ಬಾಳಿಕೆ ಬರುವ ಉತ್ಪನ್ನಗಳನ್ನು ತಯಾರಿಸುವುದು ಕಂಪನಿಯ ಮೂಲಭೂತ ತತ್ವವಾಗಿದೆ.

810

ಬಾಲನ್ ಎಂಜಿನಿಯರಿಂಗ್‍ನಲ್ಲಿ ತಯಾರಾದ ಈ ವಾಹನಗಳು ಶೇ.100ರಷ್ಟು ಮೇಡ್ ಇನ್ ಇಂಡಿಯಾ ಉತ್ಪನ್ನಗಳಾಗಿದ್ದು, ಆತ್ಮನಿರ್ಭರ ಭಾರತ ಯೋಜನೆಯ ಎಲ್ಲಾ ಮಾನದಂಡಗಳಿಗೆ ಪೂರಕವಾಗಿವೆ. ಕಂಪನಿಯು ಅತ್ಯುತ್ತಮ ಗುಣಮಟ್ಟದ ಮೋಟರ್ ಹಾಗೂ ಲೀಥಿಯಂ ಬ್ಯಾಟರಿ ಪೂರೈಕೆದಾರರ ಜೊತೆ ಒಪ್ಪಂದ ಮಾಡಿಕೊಂಡಿದೆ. ಬಳಕೆದಾರರ ಮನಸ್ಸಿನಲ್ಲಿ ಆತ್ಮವಿಶ್ವಾಸ ಮೂಡಿಸುವಂತಹ ಉತ್ಪನ್ನಗಳನ್ನು ಒದಗಿಸಲು ಕಂಪನಿಯು ಬದ್ಧವಾಗಿದೆ.

910

ಕಂಪನಿಯ ಕೆಲ ಉತ್ಪನ್ನಗಳು ಅತ್ಯಂತ ವಿಶಿಷ್ಟವಾಗಿದ್ದು, ಇವು ನಾಗರಿಕ ಸೇವೆಗಳನ್ನು ಒದಗಿಸುವ ಪೌರಾಡಳಿತ ಸಂಸ್ಥೆಗಳಾದ ನಗರಸಭೆ, ಪಾಲಿಕೆ, ಮುನ್ಸಿಪಾಲಿಟಿ ಮುಂತಾದ ಸ್ಥಳೀಯ ಸಂಸ್ಥೆಗಳಿಗೆ ಹೇಳಿಮಾಡಿಸಿದಂತಿವೆ. ಇವು ಬೇರೆ ಬೇರೆ ದೇಶಕ್ಕೆ ರಫ್ತಾಗುವಂತಹ ಉತ್ಕøಷ್ಟ ಗುಣಮಟ್ಟವನ್ನು ಹೊಂದಿವೆ. ಭಾರತದಲ್ಲಿರುವ ರಸ್ತೆಗಳ ಗುಣಮಟ್ಟಕ್ಕೆ ತಕ್ಕಂತೆ ಈ ವಾಹನಗಳ ಕ್ಷಮತೆಯನ್ನು ಪರೀಕ್ಷಿಸಲು ಸಂಪೂರ್ಣ ಲೋಡ್ ಮಾಡಿ ಪ್ರಾಯೋಗಿಕವಾಗಿ ಬಳಕೆ ಮಾಡಿ ನೋಡಲಾಗಿದೆ.

1010

`ಕರ್ನಾಟಕದಲ್ಲಿ ಬಾಗಲಕೋಟೆಯು ಔದ್ಯೋಗಿಕವಾಗಿ ಹೆಚ್ಚು ಅಭಿವೃದ್ಧಿ ಹೊಂದುವ ಅನುಕೂಲಗಳಿಲ್ಲದ ಕೆಲವೇ ಪ್ರದೇಶಗಳಲ್ಲಿ ಒಂದು. ಹೀಗಾಗಿ ನಾವು ಬಾಗಲಕೋಟೆಯಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಮುಂದೆ ಬಂದಾಗ ಅದಕ್ಕೆ ಕರ್ನಾಟಕ ಸರ್ಕಾರದಿಂದ ಸಾಕಷ್ಟು ಬೆಂಬಲ ಹಾಗೂ ಪ್ರೋತ್ಸಾಹ ದೊರೆಯಿತು. ಬಾಗಲಕೋಟೆಯಲ್ಲಿ ನಾವು ಸ್ಥಾಪಿಸುವ ಘಟಕದಲ್ಲಿ ನೇರವಾಗಿ 200 ಉದ್ಯೋಗ ಹಾಗೂ ಪರೋಕ್ಷವಾಗಿ 300 ಉದ್ಯೋಗಗಳು ಸೃಷ್ಟಿಯಾಗಲಿವೆ. ನಮ್ಮ ಘಟಕದ ಸುತ್ತಮುತ್ತಲ ಪ್ರದೇಶಗಳಲ್ಲೂ ಕೂಡ ಜನರು ವೈಯಕ್ತಿಕವಾಗಿ ವರ್ಕ್‍ಶಾಪ್‍ಗಳನ್ನು ಆರಂಭಿಸಲು ಹಾಗೂ ದೊಡ್ಡ ಕಾರ್ಖಾನೆಗಳನ್ನು ಸ್ಥಾಪಿಸಲು ಸೂಕ್ತ ವಾತಾವರಣ ನಿರ್ಮಾಣವಾಗಲಿದೆ. ಘಟಕ ನಿರ್ಮಾಣವಾಗುತ್ತಿರುವ ಸ್ಥಳವು ಬೆಂಗಳೂರು, ಹೈದರಾಬಾದ್ ಹಾಗೂ ಮುಂಬೈನ ರಸ್ತೆಗಳು ಕೂಡುವ ಸ್ಥಳದಲ್ಲಿದೆ. ಹೀಗಾಗಿ ಮಹಾರಾಷ್ಟ್ರದ ಕೆಳಗಿರುವ ಆರು ರಾಜ್ಯಗಳ ಮೇಲೆ ನಾವು ಹೆಚ್ಚಿನ ಗಮನ ಹರಿಸಲಿದ್ದೇವೆ’ ಎಂದೂ ಬಾಲಕೃಷ್ಣ ಅವರು ಹೇಳಿದರು.

click me!

Recommended Stories