Published : Oct 04, 2021, 11:36 PM ISTUpdated : Oct 05, 2021, 12:49 PM IST
ವಡೋದರಾ(ಅ. 04) ಹೈ ಪ್ರೊಫೈಲ್ ಡ್ರಗ್ಸ್ ಪಾರ್ಟಿ ಮೇಲೆ ಎನ್‌ಸಿಬಿ (NCB) ಅಧಿಕಾರಿಗಳು ಪ್ರವಾಸಿಗರ ಸೋಗಿನಲ್ಲಿ ದಾಳಿ ಮಾಡಿ ಬಾಲಿವುಡ್ (Bollywood) ನಾಯಕ ಶಾರುಖ್ ಖಾನ್ ಪುತ್ರನ ಸೇರಿ ಹಲವರನ್ನು ವಶಕ್ಕೆ ಪಡೆದಿದ್ದಾರೆ. ಶಾರುಖ್ ಪುತ್ರನ ಜತೆ ರೂಪದರ್ಶಿ ಒಬ್ಬಳ ಬಂಧನವಾಗಿದ್ದು ಈಕೆ ಯಾರು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.
ಹೈ ಪ್ರೊಫೈಲ್ ಡ್ರಗ್ಸ್ ಪ್ರಕರಣ(Drug Case) ಬಾಲಿವುಡ್(Bollywood) ಹಾಗೂ ದೇಶವನ್ನೇ ಬೆಚ್ಚಿಬೀಳಿಸಿದೆ. ಕ್ರ್ಯೂಸ್ ಹಡಗಿನಲ್ಲಿ(Cruise Drug bust) ನಡೆದ ರೇವ್ ಪಾರ್ಟಿಯಲ್ಲಿ ನಡೆದ NCB ಅಧಿಕಾರಿಗಳ ದಾಳಿ ಬಾಲಿವುಡ್ ಡ್ರಗ್ಸ್ ಕರಾಳ ಕತೆಯನ್ನು ಬಿಚ್ಚಿಟ್ಟಿದೆ.
27
ಆರ್ಯನ್ ಖಾನ್ ಜತೆ ಬಂಧನಕ್ಕೆ ಒಳಗಾಗಿರುವ ಮುನ್ಮನ್ ಧಮೇಚಾ (Munmun Dhamecha) ಎಂಬಾಕೆಯೇ ಈಗ ಕೇಂದ್ರ ಬಿಂದು. ಈಕೆ ಕುರಿತ ಸಾಕಷ್ಟು ಮಾಹಿತಿಗಳು ಹರಿದು ಬರುತ್ತಿವೆ.
37
ರೂಪದರ್ಶಿಯಾಗಿರುವ ಮುನ್ಮನ್ ದೆಹಲಿಯಲ್ಲಿ ವಾಸ ಮಾಡುತ್ತಿದ್ದರೂ ಮೂಲತಃ ಮಧ್ಯಪ್ರದೇಶದ ತಹಸಿಲ್ ನವರು. ತಾಯಿ ಕಳೆದ ವರ್ಷ ಮೃತಪಟ್ಟಿದ್ದರಿಂದ ಈಕೆ ದೆಹಲಿಗೆ ತೆರಳಿ ವಾಸವಿದ್ದರು.
47
ನಟಿ ರೂಪದರ್ಶಿ ಸಹೋದರನ ಜತೆ ದೆಹಲಿಯಲ್ಲಿ ವಾಸವಿದ್ದರು. ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಈಕೆ ಫ್ಯಾಷನ್ ಶೋಗಳಲ್ಲಿ ಭಾಗವಹಿಸುತ್ತಾರೆ.
57
ನೈಟ್ ಪಾರ್ಟಿಗಳನ್ನು ಸಾಕಷ್ಟು ಎಂಜಾಯ್ ಮಾಡುತ್ತಿದ್ದ ರೂಪದರ್ಶಿಗೆ ಈಗ ಡ್ರಗ್ಸ್ ಕಂಟಕ ಶುರುವಾಗಿದೆ. ಬಾಲಿವುಡ್ ನ ಸೆಲೆಬ್ರಿಟಟಿಗಳೊಂದಿಗೂ ಈಕೆ ಉತ್ತಮ ಬಾಂಧವ್ಯ ಹೊಂದಿದ್ದರು ಎನ್ನಲಾಗಿದೆ.
67
ಮಧ್ಯಪ್ರದೇಶದ ಉದ್ಯಮಿಯ ಮಗಳಾಗಿರುವ ಈಕೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟೀವ್. ಎನ್‌ಸಿಬಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಮುಂದೆ ಯಾವ ತಿರುವುಗಳನ್ನು ಪಡೆದುಕೊಳ್ಳಲಿದೆ ಎಂಬುದನ್ನು ನೋಡಬೇಕಿದೆ.
77
ಶಾರುಖ್ ಪುತ್ರ ಇದ್ದಾರೆ ಎನ್ನಲಾದ ಅಶ್ಲೀಲ ವಿಡಿಯೋ ಒಂದು ವೈರಲ್ ಆಗುತ್ತಿದ್ದು ಒಂದು ಕಡೆ ಕಾನೂನಿನ ಸಂಕಷ್ಟ ಇದ್ದರೆ ಇನ್ನೊಂದು ಕಡೆ ಸೋಶಿಯಲ್ ಮೀಡಿಯಾದಿಂದ ಕಮೆಂಟ್ ಗಳು ಹರಿದು ಬರುತ್ತಿವೆ.