ಕಿರುತೆರೆ ನಟಿ ಸುಸೈಡ್‌ ಕೇಸ್‌ಗೆ ಟ್ವಿಸ್ಟ್.. ಮದುವೆಯಾಗು ಎಂದು ಕಿರುಕುಳ ಕೊಡ್ತಿದ್ದ ನಟ!

First Published | Sep 30, 2021, 10:15 PM IST

ಬೆಂಗಳೂರು/ ಕುಂಬಳಗೋಡು(ಸೆ. 30)  ಕಿರುತೆರೆ ನಟಿ  ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಕುಂಬಳಗೋಡು ಠಾಣೆಗೆ ಸವಿ ತಂದೆ ಮಾದಪ್ಪ ದೂರು ನೀಡಿದ್ದಾರೆ.

ಕಿರುತೆರೆಯ ಓರ್ವ ನಟ ಹಾಗೂ ಸವಿ ಪಿ.ಎ ಮಹೇಶ್ ವಿರುದ್ಧ ಸವಿ ತಂದೆ ದೂರು ನೀಡಿದ್ದಾರೆ. ಕನ್ನಡ ಹಾಗೂ ತೆಲುಗು ಕಿರುತೆರೆ ನಟನೊಬ್ಬ ಮಗಳಿಗೆ ಪರಿಚಿತನಿದ್ದ. ಮದುವೆಯಾಗು ಎಂದು‌ ನನ್ನ ಮಗಳಿಗೆ ಕಿರುಕುಳ‌ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ.

actress soujanya suicide

ಆತನೇ ಬೆಳಿಗ್ಗೆ ಮನೆ ಬಳಿ ಬಂದು‌ ಕಿರುಕುಳ ನೀಡಿರುವ ಸಾಧ್ಯತೆ ಇದೆ. ಆದ್ದರಿಂದ ನನ್ನ ಮಗಳು ಸಾಯುವ ನಿರ್ಧಾರ ಮಾಡಿರಬಹುದು. ಸೂಕ್ತ ತನಿಖೆ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.

Tap to resize

ಶುಕ್ರವಾರ ರ್ ಆರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಬಳಿಕ‌ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಕೊಡಗು(Kodagu) ಜಿಲ್ಲೆಯ ಕುಶಾಲನಗರದವರಾಗಿರುವ ಉದಯೋನ್ಮುಖ ನಟಿ ಸೌಜನ್ಯ ಅನೇಕ ಧಾರವಾಹಿಗಳಲ್ಲಿ ನಟಿಸಿದ್ದರು. ಅಲ್ಲದೇ ಚೌಕಟ್ಟು, ಫನ್​ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಾವಿಗೂ ಮೊದಲು ಡೆತ್​ನೋಟ್(Suicide Note) ಬರೆದಿರುವ ಸೌಜನ್ಯ 'ನನ್ನ ಸಾವಿಗೆ ಯಾರೂ ಕಾರಣರಲ್ಲ. ಅಮ್ಮ-ಅಮ್ಮ ನನ್ನನ್ನು ಕ್ಷಮಿಸಿ. ನಾನು ನಿಮ್ಮಿಬ್ಬರನ್ನೂ ತುಂಬಾ ಪ್ರೀತಿಸುವೆ. ಸದ್ಯ ನನ್ನ ಮನಸ್ಥಿತಿ ಸರಿ ಇಲ್ಲ. ಅನಾರೋಗ್ಯ ನನ್ನನ್ನು ತೀವ್ರವಾಗಿ ಕಾಡುತ್ತಿದೆ ಎಂದು ಬರೆದಿದ್ದ ಪತ್ರ ಸಿಕ್ಕಿತ್ತು.

ಅನಾರೋಗ್ಯ ನನ್ನನ್ನು ತೀವ್ರವಾಗಿ ಕಾಡುತ್ತಿದೆ ಎಂದು ಬರೆದಿದ್ದ ಪತ್ರ ಸಿಕ್ಕಿತ್ತು.ಇನ್ನು ನಟಿ ಮೂರು ದಿನಗಳ ಹಿಂದೆಯೇ ಸೆಪ್ಟೆಂರ್‌ 27ರಂದು ಡೆತ್ ನೋಟ್ ಬರೆದಿಟ್ಟಿದ್ದರು. ಇನ್ನು ಇದರಲ್ಲಿ ಅವರು ತಮ್ಮ ಮಾನಸಿಕ ಆರೋಗ್ಯ ಚೆನ್ನಾಗಿಲ್ಲ ಎಂಬುವುದನ್ನು ಉಲ್ಲೇಖಿಸಿದ್ದರು. 

Latest Videos

click me!