ಲವ್ ಜಿಹಾದ್; ಯೋಗಿ ಆಡಳಿತದಲ್ಲಿ ದಾಖಲಾಯ್ತು ಮೊಟ್ಟ ಮೊದಲ ಪ್ರಕರಣ!

First Published | Nov 29, 2020, 11:17 PM IST

ಲಕ್ನೋ/  ಬರೇಲಿ(ನ.  29) ಮದುವೆಯಾಗುವುದಕ್ಕೆ ಮತಾಂತರ ವಿಚಾರದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದ ಉತ್ತರ ಪ್ರದೇಶ ಸರ್ಕಾರ ಸುಗ್ರೀವಾಜ್ಞೆ ಮುಖೇನ ಕಾನೂನು ಪಾಸ್ ಮಾಡಿತ್ತು.  ಮೊಟ್ಟ ಮೊದಲ ಲವ್ ಜಿಹಾದ್ ಪ್ರಕರಣ ಇದೀಗ ದಾಖಲಾಗಿದೆ.

ಶನಿವಾರ ಪ್ರಕರಣ ದಾಖಲಾಗಿದ್ದು ಮಾಧ್ಯಮಗಳಿಗೆ ಮಾಹಿತಿ ಸಿಕ್ಕಿದೆ.
ಜಾತಿ ಪರಿವರ್ತನೆ ನಿಷೇಧ ಕಾಯ್ದೆಯಡಿ ಬಾಲಕಿಯ ತಂದೆ ಸಲ್ಲಿಸಿದ ದೂರಿನ ಆಧಾರದಲ್ಲಿ ಪೊಲೀಸರು ಹೊಸ ಕಾಯ್ದೆ ಅನುನಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Tap to resize

ಭಿನ್ನ ದರ್ಮದ ಯುವಕ ಮತ್ತೊಂದು ಧರ್ಮದ ಯುವತಿಯನ್ನು ಪ್ರೀತಿಸುವ ನಾಟಕವಾಡಿದ್ದು, ವಿವಾಹಕ್ಕಾಗಿ ಆಕೆಗೆ ತಮ್ಮ ಜಾತಿಗೆ ಪರಿವರ್ತನೆಗೊಳ್ಳುವಂತೆ ಒತ್ತಡ ಹೇರುತ್ತಿದ್ದ ಎಂಬುದನ್ನು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಭಯೋತ್ಪಾದನೆಯ ಮತ್ತೊಂದು ರೂಪ ಲವ್ ಜಿಹಾದ್ ನಿಗ್ರಹಕ್ಕೆ ಹಲವು ರಾಜ್ಯಗಳು ಕಾನೂನು ತರಲು ಮುಂದಾಗಿವೆ.
ಉತ್ತರ ಪ್ರದೇಶ ಸರ್ಕಾರ ದಿಟ್ಟ ತೀರ್ಮಾನ ತೆಗೆದುಕೊಂಡಿದ್ದು ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿ ಮಾಡಿತ್ತು.
ಕರ್ನಾಟಕದಲ್ಲಿಯೂ ಲವ್ ಜಿಹಾದ್ ವಿರುದ್ಧ ಕಾನೂನು ತರುತ್ತೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದರು.

Latest Videos

click me!