ಮಕ್ಕಳ ಮೊಬೈಲ್‌ಗೆ 43ರ ಅಮ್ಮನ ಖಾಸಗಿ ಕ್ಷಣಗಳ ಪೋಟೋ ಕಳಿಸಿದ ಮಾಜಿ ಲವರ್!

First Published | Nov 28, 2020, 9:17 PM IST

ಅಹಮದಾಬಾದ್ (ನ. 28)  ಇದೊಂದು ವಿಚಿತ್ರ ಪ್ರಕರಣ. ತಾಯಿಯ ಮಾಜಿ ಬಾಯ್ ಫ್ರೆಂಡ್ ಮಹಿಳೆಯೊಂದಿಗೆ ಕಳೆದ ಖಾಸಗಿ ಕ್ಷಣಗಳ ಪೋಟೋಗಳನ್ನು ಮಹಿಳೆಯ ಮಕ್ಕಳ ಮೊಬೈಲ್‌ ಗೆ ಕಳಿಸಿದ್ದಾನೆ.

ಅಂಬಾವಾಡಿಯಲ್ಲಿ ಮಹಿಳೆ ಬವಾಸವಿದ್ದಾಳೆ. ಕ್ಯಾಟರಿಂಗ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುವ ತಾಯಿಗೆ ಇಬ್ಬರು ಮಕ್ಕಳು.
15 ವರ್ಷಗಳ ಹಿಂದೆ ತನ್ನ ಗಂಡನಿಂದ ಬೇರ್ಪಟ್ಟ ಮಹಿಳೆ ಒಂಟಿಯಾಗಿಯೇ ಜೀವನ ಸಾಗಿಸುತ್ತಿದ್ದರು. ಸುಮಾರು ಒಂದೂವರೆ ವರ್ಷದ ಒಬ್ಬನ ಜತೆ ಸ್ನೇಹವಾಗಿದೆ.
Tap to resize

ಇಬ್ಬರ ನಡುವೆ ಖಾಸಗಿತನ ಏರ್ಪಟ್ಟಿದೆ. ಆರೋಪಿ ಮಿತೇಶ್ ಪರ್ಮಾರ್ ಮತ್ತು ಮಹಿಳೆ ದಿನ ಕಳೆದಿದ್ದಾರೆ.
ಮಕ್ಕಳಗೆ ಈ ವಿಚಾರ ಗೊತ್ತಾದರೆ ಮುಂದೆ ತೊಂದರೆಯಾಗುತ್ತದೆ ಎಂದು ಭಾವಿಸಿದ ಮಹಿಳೆ ಆತನಿಂದ ದೂರವಾಗುವ ನಿರ್ಧಾರ ಮಾಡಿದ್ದಾರೆ.
ದೂರವಾಗಬಾರದು ಎಂದು ಆರೋಪಿ ಕೇಳಿಕೊಂಡಿದ್ದಾನೆ. ಆದರೂ 43 ವರ್ಷದ ಮಹಿಳೆ ಸಂಬಂಧ ಕಡಿದುಕೊಳ್ಳುವ ನಿರ್ಧಾರ ಮಾಡಿದ್ದಾರೆ.
ಇದರಿಂದ ಕೋಪಗೊಂಡ ವ್ಯಕ್ತಿ ತಾಯಿ ಜತೆಗಿದ್ದ ಬೆತ್ತಲೆ ಚಿತ್ರಗಳನ್ನು ಮಕ್ಕಳ ಮೊಬೈಲ್ ಗೆ ಕಳಿಸಿದ್ದಾನೆ. ಅಲ್ಲದೇ ಸೋಶಿಯಲ್ ಮೀಡಿಯಾಕ್ಕೂ ಎಡಿಟ್ ಮಾಡಿ ಹಾಕಿದ್ದಾನೆ.
ಈ ವಿಚಾರ ಮಹಿಳೆ ಗಮನಕ್ಕೆ ಬಂದ ತಕ್ಷಣ ಪೊಲೀಸರ ಮೊರೆ ಹೋಗಿದ್ದಾರೆ.

Latest Videos

click me!