ಕಳ್ಳತನವನ್ನೂ ಮಾಡಿದ್ರು, ಟೀ ಮಾಡ್ಕೊಂಡು ಕುಡಿದು ಹೋದ್ರು: ಶಿರಸಿಯಲ್ಲಿ ಕೈಚಳಕ ತೋರಿಸಿದ ಕೂಲ್ ಕಳ್ಳರು

Published : Jul 30, 2026, 02:41 PM IST

Theft and tea break cool thieves steal and drink tea in Sirsi ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ನಡೆದಿರುವ ಕಳ್ಳತನ ಪ್ರಕರಣವೊಂದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

PREV
15
ಉತ್ತರ ಕನ್ನಡ ಕಳ್ಳತನ

ಸಾಮಾನ್ಯವಾಗಿ ಕಳ್ಳರು ಮನೆಗೆ ನುಗ್ಗಿ ಚಿನ್ನ, ಹಣ ದೋಚಿಕೊಂಡು ಸದ್ದಿಲ್ಲದೆ ಪರಾರಿಯಾಗುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ನಡೆದಿರುವ ಕಳ್ಳತನ ಪ್ರಕರಣವೊಂದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಕಳ್ಳತನಕ್ಕೆ ಬಂದ ಖದೀಮರು ಚಿನ್ನ, ಹಣ ದೋಚಿದ ಬಳಿಕ ಮನೆಯಲ್ಲಿ ಗ್ಯಾಸ್ ಆನ್ ಮಾಡಿ, ಸ್ವತಃ ಟೀ ಮಾಡಿಕೊಂಡು ಕುಡಿದು ಬಳಿಕ ಆರಾಮವಾಗಿ ಪರಾರಿಯಾಗಿದ್ದಾರೆ ಎನ್ನಲಾಗಿದೆ!

25
10 ದಿನದಲ್ಲಿ 3 ಮನೆಗಳಿಗೆ ಕನ್ನ

ಮುಂಡಗೋಡ ಪಟ್ಟಣದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ ಎನ್ನಲಾಗಿದ್ದು, ಕೇವಲ ಹತ್ತು ದಿನಗಳ ಅವಧಿಯಲ್ಲಿ ಮೂರು ಮನೆಗಳನ್ನು ಕಳ್ಳರು ಗುರಿಯಾಗಿಸಿಕೊಂಡಿದ್ದಾರೆ. ಪಟ್ಟಣದ ಹಳೂರು ಮಾರಿಕಾಂಬಾ ನಗರದಲ್ಲಿ ರಾತ್ರಿ ವೇಳೆ ಸತತವಾಗಿ ಎರಡು ಮನೆಗಳಲ್ಲಿ ಕಳ್ಳತನಕ್ಕೆ ಯತ್ನ ನಡೆದಿದ್ದು, ಈ ಪೈಕಿ ಒಂದು ಮನೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

35
ಚಿನ್ನ, ಹಣದ ಜೊತೆಗೆ ಹುಂಡಿಗೂ ಕನ್ನ

ಮಾರಿಕಾಂಬಾ ನಗರದ ನಿವಾಸಿ ಬಾಷಾ ಮರಗಡಿ ಅವರ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು, ಮನೆಯಲ್ಲಿದ್ದ ಸುಮಾರು 2.5 ಗ್ರಾಂ ಚಿನ್ನ ಹಾಗೂ ₹3,000 ನಗದನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ. ಇಷ್ಟಕ್ಕೇ ಸುಮ್ಮನಾಗದ ಖದೀಮರು, ಮನೆಯಲ್ಲಿದ್ದ ಹುಂಡಿಯನ್ನೂ ಒಡೆದು ಅದರಲ್ಲಿದ್ದ ಹಣವನ್ನೂ ದೋಚಿದ್ದಾರೆ. ಇದೇ ವೇಳೆ ಶಂಕರ ಕುರುಬರ ಎಂಬುವವರ ಅಂಗಡಿಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಕೂಡ ವರದಿಯಾಗಿದೆ.

45
ಕಳ್ಳತನದ ಬಳಿಕ ಟೀ ಬ್ರೇಕ

ಈ ಕಳ್ಳತನ ಪ್ರಕರಣದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ವಿಚಾರವೆಂದರೆ ಕಳ್ಳರ ವಿಚಿತ್ರ ವರ್ತನೆ. ಕಳ್ಳತನ ಮಾಡಿದ ಮನೆಯೊಂದರಲ್ಲಿ ಖದೀಮರು ಸ್ವತಃ ಟೀ ಮಾಡಿಕೊಂಡು ಕುಡಿದಿದ್ದಾರೆ ಎನ್ನಲಾಗಿದೆ. ಅಂದರೆ, ಚಿನ್ನ, ಹಣ ದೋಚಿದ ಬಳಿಕ ಅವಸರದಲ್ಲಿ ಓಡಿಹೋಗುವ ಬದಲು ಮನೆಯಲ್ಲೇ ಟೀ ಮಾಡಿಕೊಂಡು ಕುಡಿದು, ಬಳಿಕ ಆರಾಮವಾಗಿ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.

55
ಸರಣಿ ಕಳ್ಳತನಕ್ಕೆ ಬೆಚ್ಚಿಬಿದ್ದ ಜನತೆ

ಪಟ್ಟಣದಲ್ಲಿ ಸರಣಿ ಕಳ್ಳತನದ ಘಟನೆಗಳು ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ಪ್ರಕರಣದ ಮಾಹಿತಿ ತಿಳಿಯುತ್ತಿದ್ದಂತೆ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಸುಳಿವು ಪತ್ತೆಹಚ್ಚಲು ಶ್ವಾನದಳದ ಮೂಲಕವೂ ಶೋಧ ಕಾರ್ಯ ನಡೆಸಲಾಗಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ. ಕಳ್ಳತನದ ಘಟನೆಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಜನರು ಎಚ್ಚರಿಕೆಯಿಂದ ಇರುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories