ಸೀರೆ ಕೊಡಿಸಲು ಒಪ್ಪದ ಗಂಡ; ಕುಕ್ಕರ್‌ನಿಂದ ಹೊಡೆದು ಕತ್ತು ಹಿಸುಕಿ ಕೊಂದ ಪತ್ನಿ ಅರೆಸ್ಟ್

Published : Jul 23, 2026, 12:05 PM IST

ಸೀರೆ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಪತ್ನಿಯೇ ಪತಿಯನ್ನು ಕೊಲೆ ಮಾಡಿದ್ದಾಳೆ. ಜಗಳದ ವೇಳೆ ಕುಕ್ಕರ್‌ನಿಂದ ಹೊಡೆದು, ನಂತರ ಕತ್ತು ಹಿಸುಕಿ ಹತ್ಯೆ ಮಾಡಿದ್ದು, ಪೊಲೀಸರು ಆರೋಪಿ ಪತ್ನಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

PREV
15
ಸೀರೆಗಾಗಿ ನಡೆದ ಕೊಲೆ

ಮುಂಬೈ: ಸೀರೆ ಕೊಡಿಸದ ಪತಿಯನ್ನು ಪತ್ನಿಯೇ ಕೊಲೆ ಮಾಡಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಬದ್ಲಾಪುರದಲ್ಲಿ ನಡೆದಿದೆ. ಹರಿರಾಮ್ ಸಿಂಗ್ ಪತ್ನಿ ಸುನಿತಾ ದೇವಿಯಿಂದ ಕೊಲೆಯಾದ ಗಂಡ. ಸದ್ಯ ಪೊಲೀಸರು ಮಹಿಳೆಯನ್ನು ಬಂಧಿಸಿ ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.

25
ಸೀರೆಗಾಗಿ ದಂಪತಿ ನಡುವೆ ಜಗಳ

ಹರಿರಾಮ್ ಸಿಂಗ್ ಬದ್ಲಾಪುರ ಭಾಗದ ನಿವಾಸಿಯಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಗಂಡ-ಹೆಂಡತಿ ನಡುವೆ ಸೀರೆ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಸೀರೆ ಖರೀದಿಸುವಂತೆ ಗಂಡನ ಮೇಲೆ ಸುನಿತಾ ದೇವಿ ಒತ್ತಡ ಹಾಕುತ್ತಿದ್ದಳು. ಇದೇ ವಿಷಯ ಸಂಬಂಧ ಭಾನುವಾರವೂ ಸುನಿತಾ ಮತ್ತು ಹರಿರಾಮ್ ಸಿಂಗ್ ನಡುವೆ ಜೋರು ಗಲಾಟೆ ನಡೆದಿದೆ.

35
ಗಂಡನ ಕತ್ತು ಹಿಸುಕಿ ಕೊಲೆ

ಪೊಲೀಸರ ಪ್ರಕಾರ, ಜಗಳದ ಸಂದರ್ಭದಲ್ಲಿ ಸುನಿತಾ ದೇವಿ ಕುಕ್ಕರ್‌ನಿಂದ ಗಂಡನ ತಲೆಗೆ ಹೊಡೆದಿದ್ದಾಳೆ. ನಂತರ ಗಂಡನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಇದೆಲ್ಲವನ್ನು ನೋಡಿದ ದಂಪತಿಯ ಏಳು ವರ್ಷದ ಮಗ ಮನೆಯಿಂದ ಹೊರೆಗೆ ಹೋಗಿ ನೆರೆಹೊರೆಯವರಿಗೆ ವಿಷಯ ತಿಳಿಸಿದ್ದಾನೆ. ವಿಷಯ ತಿಳಿದು ಜನರು ಬರೋವಷ್ಟರಲ್ಲಿ ಹರಿರಾಮ್ ಸಿಂಗ್ ಪ್ರಾಣಪಕ್ಷಿ ಹಾರಿ ಹೋಗಿದ್ದರು.

45
ಸಾವು ದೃಢಪಡಿಸಿರೋ ವೈದ್ಯರು

ಸ್ಥಳೀಯರು ಹರಿರಾಮ್ ಸಿಂಗ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರಿಶೀಲನೆ ನಡೆಸಿದ ವೈದ್ಯರು ಹರಿರಾಮ್ ಸಿಂಗ್ ಸತ್ತಿರೋದನ್ನು ದೃಢಪಡಿಸಿದ್ದಾರೆ. ಆರಂಭದಲ್ಲಿ ಸಹಜ ಸಾವು ಎಂದು ಬಿಂಬಿಸುವ ಪ್ರಯತ್ನಗಳು ನಡೆದಿದ್ದವು ಎಂಬ ಆರೋಪಗಳು ಕೇಳಿ ಬಂದಿವೆ. ಇದೇ ವೇಳೆ ಕೆಲವರು ಈ ವಿಷಯವನ್ನು ಪೊಲೀಸರಿಗೂ ಮಾಹಿತಿ ನೀಡಿದ್ದರು.

55
ಮರಣೋತ್ತರ ಶವಪರೀಕ್ಷೆ ವರದಿಯಲ್ಲಿ ಬಯಲಾದ ಸತ್ಯ

ಮರಣೋತ್ತರ ಶವಪರೀಕ್ಷೆ ವರದಿಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರೋದು ಧೃಢಪಟ್ಟಿದ್ದು, ಸುನಿತಾ ದೇವಿಯನ್ನು ಬಂಧಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬದ್ಲಾಪುರ ಠಾಣೆಯ ಪೊಲೀಸರು, ಕುಟುಂಬಸ್ಥರು ಮತ್ತು ನೆರೆಹೊರೆಯವರಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಹರಿರಾಮ್ ಸಿಂಗ್ ಕೊಲೆಗೆ ಸೀರೆಯೇ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories