Ketan Murder ಬೆಚ್ಚಿಬೀಳೋ ರಹಸ್ಯ ಬಯಲು ​: ಸಿಯಾಗೆ ಮದ್ವೆಯಾಗಿ 4 ತಿಂಗಳು? ಹನಿಮೂನ್‌ ಹಂತಕಿ ಸೋನಂ ಈಕೆ ಗುರು

Published : Jul 07, 2026, 08:46 PM IST

ಭಾವಿ ಪತಿಯನ್ನು ಕೊಲೆ ಮಾಡಿದ ಆರೋಪ ಹೊತ್ತಿರುವ ಸಿಯಾ ಗೋಯಲ್, ತನ್ನ ಲವರ್‌ನನ್ನು ಮೊದಲೇ ಮದುವೆಯಾಗಿದ್ದಳು. ಕೊಲೆ ಮಾಡಿ ಸಿಕ್ಕಿಬಿದ್ದರೆ ತಪ್ಪಿಸಿಕೊಳ್ಳುವುದು ಹೇಗೆಂದು ತಿಳಿಯಲು, ಈಕೆ ಗೂಗಲ್‌ನಲ್ಲಿ 'ಹನಿಮೂನ್‌ ಹಂತಕಿ' ಸೋನಂ ರಘುವಂಶಿ ಕುರಿತು ಅಧ್ಯಯನ ಮಾಡಿದ್ದಳು ಎಂಬುದು ತನಿಖೆಯಿಂದ ಬಯಲಾಗಿದೆ.

PREV
16
ಸಿಯಾ ಶಾಕಿಂಗ್‌ ಹಿನ್ನೆಲೆ

ಮದುವೆ ಇಷ್ಟವಿಲ್ಲವೆಂದು ಲವರ್‌ ಜೊತೆಗೂಡಿ ಭಾವಿ ಪತಿಯನ್ನೇ ಕೊಲೆ ಮಾಡಿರುವ ಆರೋಪ ಹೊತ್ತಿರುವ ಸಿಯಾ ಗೋಯಲ್‌ ಕುರಿತಾದ ಒಂದೊಂದೇ ಶಾಕಿಂಗ್‌ ಮಾಹಿತಿಗಳು ಹೊರಬರುತ್ತಲೇ ಇವೆ. ಇದಾಗಲೇ ತಮ್ಮ ಮಗಳು ತಪ್ಪಿತಸ್ಥಳಾಗಿದ್ದರೆ ಅದೇ ಸ್ಥಳದಿಂದ ತಳ್ಳಿ ಸಾಯಿಸಿ ಎಂದಿದ್ದರು ತಂದೆ, ಆಕೆ ಕೊಲೆಗಾತಿ ಎಂದು ಸಾಬೀತಾದರೆ ಗಲ್ಲು ಶಿಕ್ಷೆ ನೀಡಿ ಎಂದಿದ್ದರು ತಾಯಿ.

26
ಲವರ್‌ ಜೊತೆ ಮೊದ್ಲೇ ಮದುವೆ?

ಇವೆಲ್ಲವುಗಳ ನಡುವೆ, ಸಿಯಾ ಇದಾಗಲೇ ನಾಲ್ಕು ತಿಂಗಳ ಹಿಂದೆ ಲವರ್‌ ಚೇತನ್‌ ಜೊತೆ ಮದುವೆಯಾಗಿರುವುದಾಗಿ ಪೊಲೀಸರ ತನಿಖೆಯಿಂದ ಬಯಲಾಗಿದೆ! ಚೇತನ್‌ ಜೊತೆ ಮದ್ವೆಯಾಗಿದ್ದನ್ನು ಎಲ್ಲಿಯೂ ಹೇಳಿಕೊಳ್ಳದೇ ಇನ್ನೊಂದು ಮದ್ವೆಗೆ ಸಿದ್ಧಳಾಗಿ ಕೊಲೆ ಮಾಡುವ ಹಂತಕ್ಕೆ ಹೋಗಿದ್ದಾರೆ ಸಿಯಾ.

36
ಗೂಗಲ್‌ನಲ್ಲಿ ಏನೇನು ಅಧ್ಯಯನ ಮಾಡಿದ್ಲು ನೋಡಿ

ಅಷ್ಟಕ್ಕೂ ತಾನು ಕೊಲೆ ಮಾಡಿ ಸಿಕ್ಕಿಹಾಕಿಕೊಂಡಿದ್ರೆ, ಹೇಗೆ ತಪ್ಪಿಸಿಕೊಳ್ಳಬಹುದು ಎಂದು ಮೊದಲೇ ಯೋಚನೆ ಮಾಡಿದ್ದ ಈ ಹಂತಕಿ, ಗೂಗಲ್‌ನಲ್ಲಿ ಹನಿಮೂನ್‌ ಹಂತಕಿ ಸೋನಂ ರಘುವಂಶಿ ಕುರಿತು ಅಧ್ಯಯನ ಮಾಡಿದ್ದಳು. ನಮ್ಮ ಕಾನೂನು ವ್ಯವಸ್ಥೆಯ ಅಡಿಯಲ್ಲಿ ಪತಿಯನ್ನೇ ಕೊಲೆ ಮಾಡಿರುವ ಆರೋಪ ಹೊತ್ತ ಸೋನಂ ಹೇಗೆ ಸುಲಭದಲ್ಲಿ ಜಾಮೀನು ಪಡೆದುಕೊಂಡಿದ್ದಳು ಎನ್ನುವ ಬಗ್ಗೆ ಈಕೆ ಗೂಗಲ್‌ನಲ್ಲಿ ಸರ್ಚ್ ಮಾಡಿರುವುದು ಬಯಲಾಗಿದೆ.

46
ಹನಿಮೂನ್‌ ಹಂತಕಿಯೇ ಸಿಯಾ ಗುರು

ಹೆಣ್ಣುಮಕ್ಕಳನ್ನು ಪೊಲೀಸ್ ಠಾಣೆಯಲ್ಲಿ ಹೊಡೆಯುತ್ತಾರೆಯೇ, ಸಿಕ್ಕಿ ಹಾಕಿಕೊಂಡರೆ ಪೊಲೀಸ್‌ ಸ್ಟೇಷನ್‌ನಲ್ಲಿ ಹೆಣ್ಣುಮಕ್ಕಳಿಗೆ ಟ್ರೀಟ್‌ಮೆಂಟ್‌ ಹೇಗಿರುತ್ತದೆ ಎಂದೆಲ್ಲಾ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದ ಸಿಯಾ, ಸೋನಂ ರಘುವಂಶಿ ಸುಲಭದಲ್ಲಿ ಜಾಮೀನು ಪಡೆದುಕೊಂಡದ್ದು ಹೇಗೆ, ಅವಳು ಹೇಗೆ ಸಿಕ್ಕಿಬಿದ್ದಿದ್ದಳು ಎನ್ನೋದನ್ನೆಲ್ಲಾ ಡೀಪ್‌ ಸ್ಟಡಿ ಮಾಡಿದ್ದಳು ಎನ್ನುವುದು ತಿಳಿದುಬಂದಿದೆ! ಕೊಲೆ ಮಾಡುವಾಗ ಸೋನಂ ಮಾಡಿದ ತಪ್ಪೇನು ಎನ್ನುವ ಬಗ್ಗೆಯೂ ಇವಳು ಅಧ್ಯಯನ ಮಾಡಿದ್ದಳು ಎನ್ನುವುದು ಪೊಲೀಸ್​ ತನಿಖೆ ವೇಳೆ ತಿಳಿದುಬಂದಿದೆ!

56
ನೆಮ್ಮದಿಯಿಂದಿರೋ ಹನಿಮೂನ್ ಹಂತಕಿ

ಅಷ್ಟಕ್ಕೂ ಸೋನಂ ರಘುವಂಶಿಯ ಜಾಮೀನನ್ನು ರದ್ದು ಮಾಡಲು ಸುಪ್ರೀಂಕೋರ್ಟ್ ಕೂಡ ನಿರಾಕರಿಸಿರುವ ಹಿನ್ನೆಲೆಯಲ್ಲಿ, ತಮ್ಮ ಮಗನನ್ನು ಕಳೆದುಕೊಂಡಿರುವ ಅಪ್ಪ-ಅಮ್ಮನ ಕಣ್ಣೀರು ಒಂದೆಡೆಯಾದರೆ, ಇಂಥ ಕ್ರೌರ್ಯ ಎಸಗಿರುವ ಆರೋಪಿ ಜಾಮೀನಿನ ಮೇಲೆ ನೆಮ್ಮದಿಯಿಂದ ಜೀವನ ಮಾಡುತ್ತಿದ್ದಾಳೆ. ಇವೆಲ್ಲವೂ ಸಿಯಾಗೆ ವರದಾನ ಆಗಿರುವುದು ತಿಳಿದುಬಂದಿದೆ.

66
ಕಾನೂನು ವ್ಯವಸ್ಥೆ!

ಒಟ್ಟಿನಲ್ಲಿ ನಮ್ಮ ಕಾನೂನು ವ್ಯವಸ್ಥೆ ಹೇಗೆ ಇನ್ನೊಂದು ಕೊಲೆ ಮಾಡಲು ಪ್ರೇರೇಪಣೆ ನೀಡುತ್ತಿದೆ ಎನ್ನುವ ಶಾಕಿಂಗ್‌ ಸತ್ಯ ಈಕೆಯ ಗೂಗಲ್‌ ಸರ್ಚ್‌ನಿಂದ ತಿಳಿದುಬರುತ್ತಿದೆ. ಕೊಲೆ ಮಾಡಿ ಹೋದ್ರೂ ಸುಲಭದಲ್ಲಿ ಹೇಗೆ ಜಾಮೀನು ಪಡೆದುಕೊಳ್ಳಬಹುದು ಎನ್ನೋದನ್ನು ಮೊದಲೇ ಪ್ಲ್ಯಾನ್‌ ಮಾಡಿದ್ದಳು ಎಂದ ಮೇಲೆ ಯಾವ ರೀತಿಯಲ್ಲಿ ಈಕೆ ತಲೆ ಉಪಯೋಗಿಸರಬಹುದು ಲೆಕ್ಕ ಹಾಕಿ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories