ಲಾಕ್‌ಡೌನ್ ನಡುವೆ ಸೆಕ್ಸ್ ರಾಕೆಟ್, ಇಬ್ಬರು ಮಹಿಳೆಯರು ಸೇರಿ 6 ಮಂದಿ ಅರೆಸ್ಟ್!

First Published | May 28, 2020, 5:51 PM IST

ಲಾಕ್‌ಡೌನ್ ನಡುವೆ ಗ್ರೇಟರ್ ನೊಯ್ಡಾದ ಗೆಸ್ಟ್ ಹೌಸ್ ಒಂದರಲ್ಲಿ ನಡೆಯುತ್ತಿದ್ದ ಸೆಕ್ಸ್ ರಾಕೆಟ್ ದಂಧೆ ಬಯಲಾಗಿದೆ. ಇಲ್ಲಿ ದಾಳಿ ನಡೆಸಿದ ಪೊಲೀಸರು ಇಬ್ಬರು ಮಹಿಳೆಯಡು ಸೇರಿ ಒಟ್ಟು ಆರು ಮಂದಿಯನ್ನು ಬಂಧಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಪೊಲಿಸರಿಗೆ ಬಾರೀ ಪ್ರಮಾಣದಲ್ಲಿ ಕಾಂಡೋಮ ಹಾಗೂ ಗರ್ಭ ನಿರೋಧಕ ಮಾತ್ರೆಗಳು ಸಿಕ್ಕಿವೆ. 

ಗ್ರೇಟರ್ ನೊಯ್ಡಾದ ಹಿರಿಯ ಪೊಲೀಸ್ ಅಧಿಕಾರಿ ರಾಜೇಶ್ ಕುಮಾರ್ ಸಿಂಗ್ ಈ ಸಂಬಂಧ ಪ್ರತಿಕ್ರಿಯಿಸಿದ್ದು, ಅಕ್ರಮವಾಗಿ ನಡೆಯುತ್ತಿದ್ದ ಈ ದಂಧೆ ಕುರಿತು ಗೌಪ್ಯ ಮೂಲಗಳಿಂದ ಮಾಹಿತಿ ಲಭಿಸಿತ್ತು.
ಹೀಗಿರುವಾಗ ಬೀಟಾ ದೋ ಪೊಲೀಸ್ ಠಾಣಾ ಕ್ಷೇತ್ರದಲ್ಲಿದ್ದ ಗೆಸ್ಟ್ ಹೌಸ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಸಿಕ್ಕ ಮಾಹಿತಿ ನಿಜವೆಂದು ತಿಳಿದು ಬಂದಿದ್ದು, ಈ ದಂಧೆಯಲ್ಲಿ ತೊಡಗಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.
Tap to resize

ಇನ್ನು ಗೆಸ್ಟ್‌ ಹೌಸ್‌ನ ಕೋಣೆಗಳಿಂದ ಸುಮಾರು 12,600 ರೂಪಾಯಿ ನಗದು ಣ, ಮೊಬೈಲ್, ಮೇಕಪ್ ಸಾಮಾಗ್ರಿ, ಕಾಂಡೋಂ ಹಾಗೂ ಗರ್ಭ ನಿರೋಧಕ ಮಾತ್ರೆಗಳು ಸಿಕ್ಕಿವೆ ಎಂದಿದ್ದಾರೆ.
ಇನ್ನು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಗೆಸ್ಟ್ ಹೌಸ್ ಪ್ರಬಂಧಕ ಹಾಗೂ ಮಾಲಿಕ ಕೂಡಾ ಇದ್ದಾರೆ.
ಇನ್ನು ಕಳೆದ ವರ್ಷ ಸಪ್ಟೆಂಬರ್‌ನಲ್ಲಿ ನೊಯ್ಡಾ ಪೊಲೀಸರು ಸಲಿಂಗಿ ಸೆಕ್ಸ್ ರಾಕೆಟ್ ದಂಧೆ ಬಯಲು ಮಾಡಿದ್ದರು. ಈ ಪ್ರಕರಣದಡಿ ಇಬ್ಬರು ಯುವಕರನ್ನು ಬಂಧಿಸಲಾಗಿತ್ತು.
ಇಷ್ಟೇ ಅಲ್ಲದೇ ಇಲ್ಲಿ ಹಣದವಿಚಾರವಾಗಿ ಬಹುದೊಡ್ಡ ಜಗಳವೇ ನಡೆದಿತ್ತು ಎಂದು ಕೇಳಿ ಬಂದಿತ್ತು.

Latest Videos

click me!