ಕೊರೋನಾ ವೈರಸ್‌ನಿಂದಾಗಿ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಲಾಕ್‌ಡೌನ್ ಹೇರಲಾಗಿದೆ. ಇನ್ನು ರಸ್ತೆಗಿಳಿದರೆ ಕೊರೋನಾ ಕಾಡುವ ಸಂಕಷ್ಟದಿಂದ ಪಾರಾಗಲು ಜನರು ಮನೆಯಲ್ಲೇ ಉಳಿದುಕೊಳ್ಳಲಾರಂಭಿಸಿದ್ದಾರೆ. ಆದರೆ ಈ ನಡುವೆ ಅನೇಕ ಮಂದಿ ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಳ್ಳಲಾರಂಭಿಸಿದ್ದಾರೆ. ಲಾಕ್‌ಡೌನ್‌ನಲ್ಲಿ ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚಾಗಿವೆ. ಇತ್ತೀಚೆಗಷ್ಟೇ ರಷ್ಯಾದಲ್ಲಿ ಶಾಕಿಂಗ್ ಘಟನೆ ನಡೆದಿದ್ದು, ಇದನ್ನು ಪ್ರತ್ಯಕ್ಷವಾಗಿ ಕಂಡವರು ಬೆಚ್ಚಿ ಬಿದ್ದಿದ್ದಾರೆ. ಇಲ್ಲೊಬ್ಬ ವ್ಯಕ್ತಿ ಕ್ಷುಲ್ಲಕ ಕಾರಣಕ್ಕೆ, ಪ್ರೇಯಸಿಯೊಂದಿಗೆ ಜಗಳವಾಡಿ ಆಕೆಯನ್ನು ಕೊಂದಿದ್ದಾನೆ. ಇದಾದ ಬಳಿಕ ಸುಮಾರು ಒಂದು ಗಂಟೆ ಆಕೆಯ ಹೆಣವನ್ನು ಟ್ರೋಲಿಯಲ್ಲಿ ಹಾಕಿ ರಸ್ತೆಯಲ್ಲಿ ತಿರುಗಾಡಿದ್ದಾನೆ.