ಬೆಂಗಳೂರಲ್ಲಿ ಸರಣಿ ಅಪಘಾತ: ಎರಡು ಟ್ರಕ್ಕರ್- ಟಿಟಿ ನಡುವೆ ಡಿಕ್ಕಿ: ಫುಲ್‌ ಟ್ರಾಫಿಕ್‌ ಜಾಮ್

First Published | Jul 6, 2022, 10:35 PM IST

Bengaluru Serial Accident: ಬೆಂಗಳೂರಿನಲ್ಲಿ ಎರಡು ಟ್ರಕ್ಕರ್ ಹಾಗೂ ಟಿಟಿ ನಡುವೆ ಡಿಕ್ಕಿ ಸಂಭವಿಸಿದ್ದು ಸರಣಿ ಅಪಘಾತವಾಗಿದೆ.
 

ಬೆಂಗಳೂರಿನಲ್ಲಿ (Bengaluru)ಎರಡು ಟ್ರಕ್ಕರ್ ಹಾಗೂ ಟಿಟಿ ನಡುವೆ ಡಿಕ್ಕಿ ಸಂಭವಿಸಿದ್ದು ಸರಣಿ ಅಪಘಾತವಾಗಿದೆ.  ನಗರದ ಹೊಸೂರು (Hosuru) ರಸ್ತೆಯ ಗಾರ್ವೆಬಾವಿ  ಪಾಳ್ಯದಲ್ಲಿ ಈ ಘಟನೆ ನಡೆದಿದೆ. 

ಡಿಕ್ಕಿ‌ ಹಿನ್ನೆಲೆ, ಹೊಸೂರು ರಸ್ತೆಯಲ್ಲಿ ಫುಲ್‌ ಟ್ರಾಫಿಕ್‌ ಜಾಮ್ ಉಂಟಾಗಿದೆ.  ಹುಳಿಮಾವು ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ‌ ಹುಳಿಮಾವು ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. 

Tap to resize

ಇನ್ನು ಅಪಘಾತ ಬೆನ್ನಲ್ಲೇ ರಸ್ತೆಯುದ್ದಕ್ಕೂ ವಾಹನಗಳು ನಿಂತಿದ್ದು ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಅಪಘಾತದಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು  ಟ್ರಾಫಿಕ್ ಜಾಮ್‌ ಉಂಟಾದ ಪರಿಣಾಮ ವಾಹನ ಸವಾರರು ಓಡಾಡಲು ಪರದಾಡಿದ್ದಾರೆ. ‌

ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ಮುಗಿಸಿ ತೆರಳುವಾಗ ನಿಡಸೋಸಿ ಮಠದ ಸ್ವಾಮೀಜಿ ಕಾರು ಅಪಘಾತ

Latest Videos

click me!