Dr Soundarya Suicide: ಶೋಕ ಸಾಗರದಲ್ಲಿ BSY ಕುಟುಂಬ, ನೀರವ ಮೌನ

First Published | Jan 28, 2022, 5:54 PM IST

ಬೆಂಗಳೂರು(ಜ.28):  ಕರ್ನಾಟಕ ಮಾಜಿ ಸಿಎಂ ಬಿ, ಎಸ್. ಯಡಿಯೂರಪ್ಪ (BS Yediyurappa) ಮೊಮ್ಮಗಳು  ಸೌಂದರ್ಯ ಆತ್ಮಹತ್ಯೆಗೆ (Suicide ) ಶರಣಾಗಿದ್ದಾರೆ.  ಪದ್ಮಾವತಿ ಪುತ್ರಿ  ವೈದ್ಯೆ ಸೌಂದರ್ಯ(30) ಆತ್ಮಹತ್ಯೆ (Suicide) ಮಾಡಿಕೊಂಡಿದ್ದು ಅಂತ್ಯಕ್ರಿಯೆ ನೆರವೇರಲಿದೆ.

ವೀರಶೈವ-ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರರ ಪರೀಕ್ಷೆ ನಡೆಸಲಾಗಿದೆ.  

ಮಾಜಿ ಸಿಎಂ ಬಿ. ಎಸ್‌. ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ!

ಸೋಲದೇವನಹಳ್ಳಿಯ ಅಬ್ಬಿಗೆರೆಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಶುಕ್ರವಾರ ಸೂರ್ಯಾಸ್ತದ ಮುನ್ನ ಅಂತ್ಯಕ್ರಿಯೆ ನೆರವೇರಲಿದ್ದು ಬಿಎಸ್‌ವೈ ಕುಟುಂಬ ಆಘಾತದಲ್ಲಿದೆ.

Tap to resize

ಕುಟುಂಬದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಮೂರು ತಿಂಗಳ ಹಿಂದಷ್ಟೆ ಮಗುವಿಗೆ  ನಾಮಕರಣ ಮಾಡಲಾಗಿತ್ತು. ತಾತ ಯಡಿಯೂರಪ್ಪ ಮನೆಯಲ್ಲಿಯೇ ಬಾಣಂತನಕ್ಕೆ ಸೌಂದರ್ಯ ಇದ್ದರು.

Dr Soundarya Suicide

ಕಳೆದ ಒಂಭತ್ತು ತಿಂಗಳ ಹಿಂದೆ ಸೌಂದರ್ಯ ಮಗುವಿಗೆ ಜನ್ಮ ನೀಡಿದ್ದರು. ಕೆಲಸದವರು ತಿಂಡಿ ಕೊಡಲು ಹೋದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.  ಸೌಂದರ್ಯ ಪತಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Latest Videos

click me!