ಸಾವಿನಲ್ಲಿ ಒಂದಾದ ಪ್ರೇಮಿಗಳು, ಪ್ರೀಯಕರನ ಸಮಾಧಿ ಪಕ್ಕದಲ್ಲಿ ಯುವತಿಯ ಅಂತ್ಯಕ್ರಿಯೆ

Published : May 15, 2022, 01:54 PM IST

ವರದಿ : ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು ಪ್ರೇಮಿಗಳು ಸಾವಿನಲ್ಲಿ ಒಂದಾಗಿದ್ದಾರೆ. ಮೃತ ಸುಷ್ಮಾ ಹಾಗೂ ಮಸ್ಕಲ್ ಗ್ರಾಮದ ಧನುಷ್ ಇಬ್ಬರು ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು, ಇವರ ಪ್ರೀತಿಗೆ ಮನೆಯವರು ಕೂಡ ಸಮ್ಮತಿಯ ಮುದ್ರೆ ಒತ್ತಿದ್ರು.  ಮನಮೆಚ್ಚಿದ ಹುಡುಗ, ಮನೆಯವರ ಒಪ್ಪಿಗೆಯಿಂದ ಖುಷಿಯಾಗಿದ್ದ ಜೋಡಿಗಳು ಇದೀಗ ವಿಧಿಯ ಆಟದ ಮುಂದೆ ಸೋತು ಹೋಗಿದ್ದಾರೆ. ಯುವಕನ ಸಮಾಧಿ ಪಕ್ಕ ಸುಷ್ಮಾ ಅಂತ್ಯಸಂಸ್ಕಾರಕ್ಕೆ ಪೋಷಕರು ಮುಂದಾಗಿದ್ದಾರೆ.

PREV
111
ಸಾವಿನಲ್ಲಿ ಒಂದಾದ ಪ್ರೇಮಿಗಳು, ಪ್ರೀಯಕರನ ಸಮಾಧಿ ಪಕ್ಕದಲ್ಲಿ ಯುವತಿಯ ಅಂತ್ಯಕ್ರಿಯೆ

ಪ್ರೀಯಕರ ಅಪಘಾತದಲ್ಲಿ ಸಾವನಪ್ಪಿದ ನೋವು ತಾಳಲಾರದೆ ಯುವತಿ ಕೂಡ ಆತ್ಮಹತ್ಯೆ ಮಾಡಿಕೊಂಡು, ಪ್ರೇಮಿಗಳಿಬ್ಬರು ಸಾವಿನಲ್ಲಿ ಒಂದಾಗಿದ್ದಾರೆ

211

ಪ್ರೀಯಕರ ಅಪಘಾತದಲ್ಲಿ ಸಾವನಪ್ಪಿದ ನೋವು ತಾಳಲಾರದೆ ಯುವತಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತುಮಕೂರು ತಾಲ್ಲೂಕಿನ ಅರೆಹಳ್ಳಿಯಲ್ಲಿ ಈ ಘಟನೆ ನಡೆದಿದೆ. 22 ವರ್ಷದ ಸುಷ್ಮಾ ಮೃತ ದುರ್ದೈವಿ.‌  

311

ಮೃತ ಸುಷ್ಮಾ ಹಾಗೂ ಮಸ್ಕಲ್ ಗ್ರಾಮದ ಧನುಷ್ ಇಬ್ಬರು ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು, ಇವರ ಪ್ರೀತಿಗೆ ಮನೆಯವರು ಕೂಡ ಸಮ್ಮತಿಯ ಮುದ್ರೆ ಒತ್ತಿದ್ರು.  ಮನಮೆಚ್ಚಿದ ಹುಡುಗ, ಮನೆಯವರ ಒಪ್ಪಿಗೆಯಿಂದ ಖುಷಿಯಾಗಿದ್ದ ಜೋಡಿಗಳು ಇದೀಗ ವಿಧಿಯ ಆಟದ ಮುಂದೆ ಸೋತು ಹೋಗಿದ್ದಾರೆ. 

411

ಮಸ್ಕಲ್ ಮೂಲದ ಧನುಷ್,  ಬೆಂಗಳೂರಿನಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ, ಗ್ರಾಮದಲ್ಲಿ ಜಾತ್ರೆ ಪ್ರಯುಕ್ತ, ಧನುಷ್  ಕಳೆದ ಮೇ 11ನೇ ತಾರೀಕು ಬೈಕ್ ನಲ್ಲಿ ಗ್ರಾಮಕ್ಕೆ ಬರುತ್ತಿದ್ದ ವೇಳೆ ದಾಬಸ್ಪೇಟೆ ಸಮೀಪದ ಕುಲುವನಹಳ್ಳಿ ಬಳಿ ಅಪಘಾತವಾಗಿ ಸಾವನಪ್ಪಿದ್ದಾನೆ.‌  

511

ಪ್ರೀಯಕರ ಸಾವಿನಿಂದ ಆಘಾತಕ್ಕೊಳಗಾದ ಯುವತಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾಳೆ. ನಿನ್ನೆ(ಶನಿವಾರ) ರಾತ್ರಿ 8 ಗಂಟೆಯ ಸಮಯದಲ್ಲಿ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾಳೆ. 

611

ಸುಷ್ಮಾ  ವಿಷ ಸೇವಿಸಿರುವುದು ಗೊತ್ತಾಗುತ್ತಿದ್ದಂತೆ ಮನೆಯವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಬದುಕಿಸುವ ಪ್ರಯತ್ನ ಮಾಡಿದ್ದಾರೆ. ಆ ವೇಳೆಗಾಗಲೇ ವಿಷ ಸಂಪೂರ್ಣ ದೇಹದಲ್ಲಿ ಬೆರೆತು ಇಹಲೋಕ ತ್ಯಜಿಸಿದ್ದಾಳೆ. ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

711

ತುಮಕೂರು ವಿವಿಯಲ್ಲಿ ಎಂಎಸ್ಸಿ ಓದುತ್ತಿದ್ದ ಸುಷ್ಮಾ, ಕಳೆದ ಎರಡು ವರ್ಷದಿಂದ ಮಸ್ಕಲ್ ಗ್ರಾಮದ ಧನುಷ್ ಅನ್ನು ಪ್ರೀತಿಸುತ್ತಿದ್ದರು, ಪ್ರೇಮಿಗಳಿಬ್ಬರು ದೂರದ ಸಂಬಂಧಿಕರಾಗಿದ್ದರಿಂದ ಸಹಜವಾಗಿಯೇ ಇಬ್ಬರ ಪರಿಚಯವಾಗಿತ್ತು. 

811

ಈ ಪರಿಚಯ ಪ್ರೀತಿಗೆ ತಿರುಗಿತ್ತು, ಇಬ್ಬರು ಒಂದೇ ಜಾತಿ ಹಾಗೂ ಸಂಬಂಧಿಕರಾಗಿದ್ದರಿಂದ ಎರಡು ಮನೆಯವರು ಇಬ್ಬರ ಪ್ರೀತಿಗೆ ಒಪ್ಪಿಗೆ ನೀಡಿ ಮದುವೆ ಮಾಡುವ ಸಿದ್ದತೆಯಲ್ಲಿದ್ದರು, ಇದೀಗ ವಿಧಿಯ ಅಟ್ಟಹಾಸದ ಮುಂದೆ ಎಲ್ಲಾರ ಆಟ ಮುಕ್ತಾಯವಾಗಿದೆ.

911

ಇದೀಗ  ಯುವತಿ ಸ್ವಗ್ರಾಮ  ಅರೆಹಳ್ಳಿಯಲ್ಲಿ  ಸಮಾಧಿ ಮಾಡದೆ ಯುವಕನ ಸಮಾಧಿ ಪಕ್ಕ ಸುಷ್ಮಾಳ ಅಂತ್ಯಸಂಸ್ಕಾರ ಮಾಡಲು ಮೃತರ ಪೋಷಕರು ಮುಂದಾಗಿದ್ದಾರೆ.

1011

ಪ್ರಿಯಕರ ಧನುಷ್ ಸಮಾಧಿ ಪಕ್ಕದಲ್ಲಿ ಪ್ರಿಯತಮೆ ಸುಷ್ಮಾ ಸಮಾಧಿ ಮಾಡಲು ತಯಾರಿ ನಡೆದಿದ್ದು, ಯುವಕನ  ಜಮೀನಿನಲ್ಲೇ ಯುವತಿಯ ಅಂತ್ಯಸಂಸ್ಕಾರ.

1111

ಇನ್ನೇನು ಒಬ್ಬರನ್ನೊಬ್ಬರು ಪ್ರೀತಿಸಿ ಆಯ್ತು..ಮದುವೆ ಮಾಡಿಕೊಳ್ಳಬೇಕೆನ್ನುವಷ್ಟರಲ್ಲೇ ಈ ದುರ್ಘಟನೆ ನಡೆದಿದ್ದು, ಯುವಕನ ಗ್ರಾಮವಾದ ಮಸ್ಕಲ್ ಗ್ರಾಮದಲ್ಲಿ ಧನುಷ್ ಸಮಾಧಿ ಪಕ್ಕದಲ್ಲಿ ಯುವತಿ ಸುಷ್ಮಾ ಸಮಾಧಿ......

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories