ಸೆಲ್ಫಿ ನಿಮ್ಮ ಬ್ಯಾಂಕ್ ಖಾತೆ ಖಾಲಿ ಮಾಡುತ್ತದೆ ಎಚ್ಚರ! ಹ್ಯಾಕರ್‌ಗಳ ಹೊಸ ತಂತ್ರ ತಿಳಿಯಿರಿ

First Published | Sep 23, 2024, 3:36 PM IST

 Cyber scam: ತಂತ್ರಜ್ಞಾನ ಬೆಳೆದಂತೆ ಅದರ ದುರುಪಯೋಗವೂ ಹೆಚ್ಚಾಗುತ್ತಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಸೈಬರ್ ಅಪರಾಧಿಗಳು  ವಿನೂತನ ಪ್ರಯೋಗಕ್ಕಿಳಿದಿದ್ದಾರೆ. ಇಷ್ಟು ದಿನ ಒಟಿಪಿಯಿಂದ ಸೈಬರ್ ಕ್ರೈಂ ಬಗ್ಗೆ ಕೇಳಿದ್ದೀರಿ. ಇದೀಗ ಹ್ಯಾಕರ್ ಗಳು ನಿಮ್ಮ ಸೆಲ್ಫಿ ಫೊಟೊ ಬಳಸಿಕೊಂಡು ನಿಮ್ಮ ಬ್ಯಾಂಕ್ ಖಾತೆ ಸಂಪೂರ್ಣ ಖಾಲಿ ಮಾಡುವಷ್ಟು ಮುಂದುವರಿದಿದ್ದಾರೆ.

ಸೈಬರ್ ಅಪರಾಧಿಗಳು ಸೆಲ್ಫಿಗಳನ್ನು ಬಳಸಿಕೊಂಡು ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಬ್ಯಾಂಕ್ ಖಾತೆಯ ಮಾಹಿತಿಯನ್ನು ಕದಿಯಬಹುದು. ನಿಮ್ಮ ಬ್ಯಾಂಕ್ ಖಾತೆಯ ಮೇಲೆ ಸೈಬರ್ ದಾಳಿಯನ್ನು ನಡೆಸಲು ಮತ್ತು ಅದನ್ನು ಬ್ಯಾಂಕ್ ಖಾತೆ ಖಾಲಿ ಮಾಡಲು ಅವರಿಗೆ ನಿಮ್ಮ ಒಂದು ಸೆಲ್ಫಿ ಸಾಕು!
 

 ಸೈಬರ್ ವಂಚನೆಯ ಹೊಸ ಪ್ರಕರಣಗಳು ಪ್ರತಿದಿನ ಬೆಳಕಿಗೆ ಬರುತ್ತಿವೆ. ಒಟಿಪಿ, ಕ್ಯೂಆರ್ ಕೋಡ್ ಬಳಸಿಕೊಂಡು ಸಾಮಾನ್ಯ ಜನರ ಜೀವಮಾನದ ಸಂಪಾದನೆಯನ್ನೂ ಲೂಟಿ ಮಾಡಲಾಗುತ್ತಿದೆ. ತಂತ್ರಜ್ಞಾನಗಳು ಎಷ್ಟೇ ಭದ್ರತೆ ಒದಗಿಸಿದರೂ ಸೈಬರ್ ಅಪರಾಧಿಗಳು ಪ್ರತಿಯಾಗಿ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇದೀಗ ಹೊಸ ತಂತ್ರ ಮಾಡಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಲೈಕ್ ಕಾಮೆಂಟ್‌ಗಳಿಗೋಸ್ಕರ  ದಿನನಿತ್ಯ ಜನರು ವಿವಿಧ ಭಂಗಿಯ ಸೆಲ್ಪಿ ಶೇರ್ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಅಪರಾಧಿಗಳು. ಸೆಲ್ಫಿ ಬಳಸಿಕೊಂಡ ನಿಮ್ಮ ಬ್ಯಾಂಕ್ ಮಾಹಿತಿ ಕದಿಯಲು ಮುಂದಾಗಿದ್ದಾರೆ.  

Latest Videos


ಪ್ರತಿಯೊಬ್ಬರೂ ತಮ್ಮ ಸುಂದರ ಫೋಟೊ ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ಈ ಅಭ್ಯಾಸವೇ ನಿಮ್ಮನ್ನು ದೊಡ್ಡ ಸಂಕಷ್ಟಕ್ಕೆ ಸಿಲುಕಿಸಬಹುದೆಂಬುದು ತಿಳಿದಿರಲಿ. ವಾಸ್ತವವಾಗಿ ಸೈಬರ್ ಅಪರಾಧಿಗಳು ನಿಮ್ಮ ವೈಯಕ್ತಿಕ ಅದರಲ್ಲೂ ಬ್ಯಾಂಕ್ ಮಾಹಿತಿ ಕದಿಯಲು ಸೆಲ್ಫಿ ಫೋಟೊ ಬಳಕೆ ಮಾಡುತ್ತಾರೆ. ಬಳಿಕ ಬ್ಯಾಂಕ್ ಖಾತೆ ಕ್ಷಣಾರ್ಧದಲ್ಲಿ ಖಾಲಿ ಮಾಡಬಹುದು.

ಹಲವು ಆಪ್‌ಗಳು ಮತ್ತು ವೆಬ್‌ಸೈಟ್‌ಗಳು ನಿಮ್ಮ ಗುರುತನ್ನು ದೃಢೀಕರಿಸಲು ಸೆಲ್ಫಿ ತೆಗೆದುಕೊಳ್ಳಲು ನಿಮ್ಮನ್ನ ಕೇಳುತ್ತವೆ ಎಂಬುದು ಗಮನಿಸಿರಬೇಕು. ನೀವು ಅಕೆಪ್ಟ್ ಮಾಡಿ ಸೆಲ್ಫಿ ತೆಗೆದುಕೊಳ್ಳುತ್ತೀರಿ. ಇದನ್ನ ಸೆಲ್ಫಿ ದೃಢೀರಣ ಎನ್ನಲಾಗುತ್ತದೆ. ಹೆಚ್ಚಾಗಿ. ನೀವು ಯಾರು ಎಂಬ ಗುರುತು ಸಾಬೀತುಪಡಿಸಲು ಬಳಸುವ ತಂತ್ರಜ್ಞಾನವಾಗಿದೆ. ಉದಾಹರಣ ಇತ್ತೀಚೆಗೆ ಬ್ಯಾಂಕ್‌ಗಳು, ಕಂಪನಿಗಳು ಸೆಲ್ಫಿಗಳ ಮೂಲಕ ಜನರನ್ನು ಪರಿಶೀಲನೆ ನಡೆಸುತ್ತವೆ. ಆದರೆ ಇದೇ ತಂತ್ರಜ್ಞಾನವನ್ನು ಬಂಡಾವಳ ಮಾಡಿಕೊಂಡಿರುವ ಸೈಬರ್ ಅಪರಾಧಿಗಳು ಅದರ ಲಾಭವನ್ನು ಪಡೆಯುವ ಸಾಧ್ಯತೆಯಿದೆ.

ಹೇಗೆ ವಂಚಿಸಲಾಗುತ್ತೆ?: ಸೈಬರ್ ಅಪರಾಧಿಗಳು ನಿಮ್ಮ ಬ್ಯಾಂಕ್ ಖಾತೆ ಒಳನುಸಳಲು ಮತ್ತು ನಿಮ್ಮ ಬ್ಯಾಂಕ್ ಖಾತೆ ಹಣವನ್ನು ದೋಚಲು ನಿಮ್ಮದೆ ಸೆಲ್ಫಿ ಬಳಸಬಹುದು.

ಸಾಲ ವಂಚನೆ : ಹ್ಯಾಕರ್‌ಗಳು ನಿಮ್ಮ ಸೆಲ್ಫಿ ಬಳಸಿ ನಿಮಗೆ ತಿಳಿಯದಂತೆ ಆನ್‌ಲೈನ್ ಬ್ಯಾಂಕಿಂಗ್ ಮೂಲಕ ನಿಮ್ಮ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ತೆಗೆದುಕೊಂಡು ವಂಚಿಸಬಹುದು.

ಸಿಮ್ ಕಾರ್ಡ್‌ನ ಕ್ಲೋನಿಂಗ್ : ನಿಮ್ಮ ಸೆಲ್ಫಿಯ ಸಹಾಯದಿಂದ, ಸೈಬರ್ ಅಪರಾಧಿಗಳು ನಿಮ್ಮ ಸಿಮ್ ಕಾರ್ಡ್ ಅನ್ನು ಕ್ಲೋನ್ ಮಾಡಬಹುದು, ಇದರಿಂದ ಅವರು ನಿಮ್ಮ ಮೊಬೈಲ್ ಸಂಖ್ಯೆಗೆ ಸ್ವೀಕರಿಸಿದ OTP ಅವರೂ ಬಳಕೆ ಮಾಡಬಹುದು.

ಸೈಬರ್‌ ವಂಚನೆಯಿಂದ ರಕ್ಷಣೆ ಹೇಗೆ?

ಅಪರಿಚಿತ ಲಿಂಕ್‌ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ. ಅನುಮಾನಾಸ್ಪದ ಕರೆಗಳನ್ನು ಸ್ವೀಕರಿಸಬೇಡಿ.
ನಿಮ್ಮ ಬ್ಯಾಂಕ್ ಖಾತೆಗೆ ಕಠಿಣವಾದ ಪಾಸ್ವರ್ಡ್ ಬಳಸಿ.
ಬ್ಯಾಂಕ್, ಸೋಷಿಯಲ್ ಮೀಡಿಯಾ, ಎಲ್ಲದಕ್ಕೂ ಬಲವಾದ ಪಾಸ್ವವರ್ಡ್ ಇರಲಿ.
ಸೆಲ್ಫಿ ತೆಗೆದುಕೊಳ್ಳುವುದು ಅದನ್ನು ಶೇರ್ ಮಾಡಿಕೊಳ್ಳುವುದು ಸುರಕ್ಷಿತವಲ್ಲ.
ಭದ್ರತೆ ಹೆಚ್ಚಿಸಲು ಎರಡು ಹಂತದ ದೃಢಿಕರಣ(two step verification) ಪಡೆಯಿರಿ.
 ಉತ್ತಮ ಆಂಟಿವೈರಸ್ ಸಾಫ್ಟ್‌ವೇರ್‌ ಬಳಸುವ ಮೂಲಕ ನಿಮ್ಮ ಫೋನ್ ಅನ್ನು ಮಾಲ್‌ವೇರ್‌ನಿಂದ ರಕ್ಷಿಸಿ.
ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ.
ಕೊನೆಯದಾಗಿ, ನೀವು ಸೈಬರ್ ವಂಚನೆಗೆ ಬಲಿಯಾಗಿದ್ದೀರಿ ಎಂದು ತಿಳಿದ ತಕ್ಷಣ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ.

click me!