ಅಬ್ಬಬ್ಬಾ 2 ದಿನಗಳ ಹಿಂದೆ ದೇಶದಲ್ಲಿ ಇಷ್ಟೆಲ್ಲಾ ಕ್ರೈಮ್ ಆಗಿತ್ತಾ?

First Published | Sep 20, 2024, 5:40 PM IST

ಭಾರತದಲ್ಲಿ ಸೆಪ್ಟೆಂಬರ್ ತಿಂಗಳು ಅಪರಾಧಗಳ ದೃಷ್ಟಿಯಿಂದ ತುಂಬಾ ಭಯಾನಕ ಮತ್ತು ಆತಂಕಕಾರಿಯಾಗಿತ್ತು. ಸೆಪ್ಟೆಂಬರ್ 17 ರಂದು ದೇಶಾದ್ಯಂತ ನಡೆದ ಹಲವಾರು ಘಟನೆಗಳು ಬೆಚ್ಚಿಬೀಳಿಸುವಂತೆ ಮಾಡಿವೆ. ಈ ಭಯಾನಕ ದಿನದಂದು ಸಂಭವಿಸಿದ 10 ಆಘಾತಕಾರಿ ಕ್ರೈಮ್ ಸುದ್ದಿಗಳಿವು.

ಗುನಾದಲ್ಲಿ 8 ವರ್ಷದ ಮಗಳ ಮೇಲೆಯೇ ತಂದೆ ಅತ್ಯಾಚಾರ, ಕೊಲೆ

ಮಧ್ಯಪ್ರದೇಶದ ಗುನಾದ ಚಾಚೌಡಾ ಗ್ರಾಮದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ಆಕೆಯ ತಂದೆಯೇ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೆ, ಆರೋಪಿ ತಂದೆ ಬಾಲಕಿಯನ್ನು ಕೊಲೆ ಮಾಡಿ ಬಾವಿಯಲ್ಲಿ ಎಸೆದಿದ್ದ. ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮಡದಿಯನ್ನೇ ಮಣಿಸಿದ ಪತಿ

ರಾಯಪುರದಲ್ಲಿ ಪತಿ ಬಾಣದಿಂದ ಹೆಂಡತಿಯನ್ನು ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಲೆಗೆ ನಿಖರ ಕಾರಣಗಳಿನ್ನೂ ಗೊತ್ತಾಗದೇ ಹೋದರೂ, ಸಾಮಾನ್ಯ ದಾಂಪತ್ಯ ಕಲಹವೇ ಕೃತ್ಯಕ್ಕೆ ಕಾರಣವೆನ್ನಲಾಗುತ್ತಿದೆ.

Tap to resize

ಸೈಬರ್ ಕ್ರೈಮ್

ಡಿಜಿಟಲ್ ಹಗರಣವೊಂದರಲ್ಲಿ ಲಕ್ನೋ ಮೂಲದ ವೈದ್ಯೆ ಡಾ. ರುಚಿಕಾ ಟಂಡನ್ 2.8 ಕೋಟಿ ಕಳೆದುಕೊಂಡರು. ಇವರಿಂದ 10 ದಿನಗಳಲ್ಲಿ ದುಷ್ಕರ್ಮಿಗಳು ಇಷ್ಟು ದೊಡ್ಡ ಮೊತ್ತದ ಹಣ ಸುಲಿಗೆ ಮಾಡಿದ್ದರು.

ಕೊಲ್ಕತ್ತಾ ವೈದ್ಯೆ ಬಲಾತ್ಕಾರ, ಕೊಲೆ

ಕೊಲ್ಕತ್ತಾದ ಆರ್ಜೆ ಕರ್ ಮೆಡಿಕಲ್ ಕಾಲೇಜಿನಲ್ಲಿ ಟ್ರೈನಿ ವೈದ್ಯೆ ಬಲಾತ್ಕಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ಮುಷ್ಕರ ನಡೆಸುತ್ತಿದ್ದು, ಸಿಎಂ ಮಮತಾ ಬ್ಯಾನರ್ಜಿ ಜೊತೆ ಮಾತುಕತೆ ನಡೆಯುತ್ತಲೇ ಇದೆ. ಆದರೆ, ವೈದ್ಯರು ಮಮತಾ ಮಾತಿಗೆ ಸೊಪ್ಪು ಹಾಕುತ್ತಿಲ್ಲ. 

ಪೋಸ್ಟ್ ಆಫೀಸಲ್ಲೂ ವಂಚನೆ

ಫೆಡೆಕ್ಸ್ ಕೊರಿಯರ್ ವಂಚನೆಯಂತೆಯೇ ಈಗ ಸೈಬರ್ ಕ್ರಿಮಿನಲ್‌ಗಳು ಇಂಡಿಯಾ ಪೋಸ್ಟಿನಲ್ಲಿಯೂ ಜನರನ್ನು ವಂಚಿಸುತ್ತಿದ್ದಾರೆ. ಪಶ್ಚಿಮ ಮರೇಡಪಲ್ಲಿಯಲ್ಲಿ ನೆಲೆಸಿರುವ 75 ವರ್ಷದ ಕೇಂದ್ರ ಸರ್ಕಾರಿ ನಿವೃತ್ತ ನೌಕರನೊಬ್ಬ ಮತ್ತೊಬ್ಬ ಕೇಂದ್ರ ಸರ್ಕಾರಿ ನೌಕರನಿಗೆ ವಂಚಿಸಿ ಆತನ ಖಾತೆಯಿಂದ 23.26 ಲಕ್ಷ ರೂ. ವಿಥ್ ಡ್ರಾ ಮಾಡಿಕೊಂಡಿದ್ದಾನೆ.

Latest Videos

click me!