ಹೆಜ್ಜೆ ಹೆಜ್ಜೆಯಲ್ಲೂ ಸಿಕ್ಕಿಬಿದ್ದ 'ಗಜ'ಪತಿ, ಗರ್ವಭಂಗಕ್ಕೆ ಸಾಕಾ ಇಷ್ಟು ಚಿತ್ರಗಳು!

First Published | Sep 9, 2024, 6:07 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳು ಕೃತ್ಯ ಎಸಗಿ ಪರಾರಿಯಾಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಚಿತ್ರದುರ್ಗದ ಬಾಲಾಜಿ ಬಾರ್, ಭಾರತ್ ಪೆಟ್ರೋಲ್ ಬಂಕ್, ದುರ್ಗಾ ಬಾರ್, ನೆಲಮಂಗಲ ಟೋಲ್ ಸೇರಿದಂತೆ ಹಲವು ಕಡೆಗಳ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೃತ ರೇಣಕಾಸ್ವಾಮಿಯ ಕಿಡ್ನಾಪ್‌ ದಿನದ ಚಿತ್ರಗಳು: ಚಿತ್ರದುರ್ಗದ ಬಾಲಾಜಿ ಬಾರ್‌ ಮುಂಭಾಗ ಪಾಸ್‌ ಆಗಿರುವ ಚಿತ್ರ ಬಾರ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುತ್ತದೆ.

ಮೃತ ರೇಣುಕಾಸ್ವಾಮಿಯನ್ನು ಆರೋಪಿಗಳಾದ ರಾಘವೇಂದ್ರ, ಜಗದೀಶ್‌ ಹಾಗೂ ಅನು ಆಟೋರಿಕ್ಷಾದಲ್ಲಿ ಹಿಂಬಾಲಿಸುತ್ತಿರುವುದು ಬಾಲಾಜಿ ಬಾರ್‌ನ ಮುಂಭಾಗದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Tap to resize

ಆರೋಪಿಗಳಾದ ರಾಘವೇಂದ್ರ, ಜಗದೀಶ್‌ ಹಾಗೂ ಅನು ಮೃತ ರೇಣುಕಾಸ್ವಾಮಿಯನ್ನು ಹಿಂಬಾಲಿಸಿಕೊಂಡು ಹೋಗುವಾಗ ತೆಗೆದಿರುವ ಫೋಟೋ ಇದಾಗಿದೆ. ಈ ಫೋಟೋ ಪ್ರಕರಣದಲ್ಲಿ ಎ10 ಆರೋಪಿಯಾಗಿರುವ ವಿನಯ್‌ನ ಮೊಬೈಲ್‌ನಲ್ಲಿ ಸಿಕ್ಕಿದೆ.

ಆರೋಪಿಗಳಾದ ರಾಘವೇಂದ್ರ, ಜಗದೀಶ್‌ ಹಾಗೂ ಅನು ಆಟೋರಿಕ್ಷಾವನ್ನು ಬಿಟ್ಟು ಪ್ರಕರಣದಲ್ಲಿ ಎ8 ಆರೋಪಿಯಾಗಿರುವ ರವಿಯ ಕಾರ್‌ಅನ್ನು ಕರೆಸಿಕೊಳ್ಳುತ್ತಿರುವುದು. ಇದು ಚಿತ್ರದುರ್ಗದ ಭಾರತ್‌ ಪೆಟ್ರೋಲ್‌ ಬಂಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಆರೋಪಿಗಳಾದ ರಾಘವೇಂದ್ರ, ಜಗದೀಶ್‌ ಹಾಗೂ ಅನು, ಮೃತ ರೇಣುಕಾಸ್ವಾಮಿಯನ್ನು ಕಿಡ್ನಾಪ್‌ ಮಾಡಿಕೊಂಡು ಬರುವಾಗ ದುರ್ಗಾ ಬಾರ್‌ನಲ್ಲಿ ಮದ್ಯವನ್ನು ಖರೀದಿ ಮಾಡಿದ್ದಾರೆ. ಮದ್ಯ ಖರೀದಿ ಮಾಡಿದ್ದಲ್ಲೇ ರೇಣುಕಾಸ್ವಾಮಿಯಿಂದಲೇ ಹಣ ಕೊಡಿಸಿರುವುದು ದುರ್ಗಾ ಬಾರ್‌ನ ಸಿಸಿಟಿವಿಯಲ್ಲಿ ದಾಖಲಾಗಿದೆ. ಕಾರ್‌ನಲ್ಲಿದ್ದಾಗ ರೇಣುಕಾಸ್ವಾಮಿ ಬಳಿ ಇದ್ದ ಚಿನ್ನದ ಚೈನು, ಉಂಗುರ, ವಾಚ್‌ ಹಾಗೂ ಬೆಳ್ಳಿಯ ಕರಡಿಗೆಯನ್ನೂ ಬೆದರಿಸಿ ಪಡೆದುಕೊಂಡಿದ್ದಾರೆ.

ಮೃತ ರೇಣುಕಾಸ್ವಾಮಿಯನ್ನು ಅಪಹರಣ ಮಾಡಿಕೊಂಡು ಬರುವಾಗ ಸೆರೆಯಾದ ಇಟಿಯೋಸ್‌ ಕಾರ್‌ನ ಚಿತ್ರ. ಇದರಲ್ಲಿ ಎ8 ಆರೋಪಿ ರವಿಯ ವಿವರ ಕೂಡ ದಾಖಲಾಗಿದೆ. ನೆಲಮಂಗಲದ ಟೋಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

ಈಗಾಗಲೇ ಮಾಧ್ಯಮಗಳಲ್ಲಿ ವೈರಲ್‌ ಆಗಿರುವ ರೇಣುಕಾಸ್ವಾಮಿಯ ಚಿತ್ರ. ಪಟ್ಟಣಗೆರೆ ಶೆಡ್‌ನಲ್ಲಿ ರೇಣಕಾಸ್ವಾಮಿ ಬಿದ್ದ ಚಿತ್ರ ಇದಾಗಿದ್ದು, ಈ ಸಮಯದಲ್ಲಿ ರೇಣುಕಾಸ್ವಾಮಿ ಜೀವಂತವಾಗಿದ್ದ. ಎ10 ಆರೋಪಿ ವಿನಯ್‌ ಮೊಬೈಲ್‌ನಿಂದ ಈ ಚಿತ್ರ ಸಿಕ್ಕಿದೆ.

ಮಾಧ್ಯಮಗಳಲ್ಲಿ ವೈರಲ್‌ ಆಗಿರುವ ಇನ್ನೊಂದು ಚಿತ್ರ. ಇದೂ ಕೂಡ ಪಟ್ಟಣಗೆರೆ ಶೆಡ್‌ನದ್ದಾಗಿದ್ದು, ಆರೋಪಿಗಳ ಬಳಿ ತಮ್ಮನ್ನು ಬಿಟ್ಟುಬಿಡುವಂತೆ ಬೇಡಿಕೊಳ್ಳುತ್ತಿರುವ ಚಿತ್ರ ಕೂಡ ವಿನಯ್‌ ಮೊಬೈಲ್‌ನಿಂದ ಸಿಕ್ಕಿದೆ.

ಕೃತ್ಯ ನಡೆದಿರುವ ಸ್ಥಳವಾದ ಪಟ್ಟಣಗೆರೆಯ ಇನ್‌ಟ್ಯಾಕ್ಸ್‌ ಆಟೋಪಾರ್ಕ್‌ ಶೆಡ್‌ನಿಂದ ತೆಗೆದ ಸಾಕ್ಷ್ಯಗಳು. ಮರದ ಲಾಠಿ, ನೈಲಾನ್‌ ಹಗ್ಗ, ಮರದ ಕೊಂಬೆಗಳು ಹಾಗೂ ತುಂಡಾಗಿರುವ ಮರದ ಲಾಠಿಯ ಚಿತ್ರಗಳನ್ನು ಚಾರ್ಜ್‌ಶೀಟ್‌ನಲ್ಲಿ ದಾಖಲಿಸಲಾಗಿದೆ.

ಆರೋಪಿಗಳು ರೇಣುಕಾಸ್ವಾಮಿಗೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಉಪಯೋಗಿಸಿದ್ದ ವಸ್ತುಗಳ ಪೈಕಿ, ಎಲೆಕ್ಟ್ರಿಕ್‌ ಶಾಕ್‌ ಟಾರ್ಚ್‌ ಪ್ರಮುಖವಾಗಿದೆ. ಪ್ರಕರಣದ ಎ9 ಆರೋಪಿ ಧನರಾಜ್‌ರಿಂದ ಆತನ ಮನೆಯಿಂದ ಇದನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದ ಎ2 ಆರೋಪಿಯಾಗಿರುವ ದರ್ಶನ್‌ ಜೂನ್‌ 8 ರ ಮಧ್ಯಾಹ್ನ 12.27ಕ್ಕೆ ಸ್ಟೋನಿಬ್ರೂಕ್‌ ರೆಸ್ಟೋಬಾರ್‌ಗೆ ತೆರಳುವ ಮುನ್ನ ಅಭಿಮಾನಿಗಳನ್ನು ಭೇಟಿ ಮಾಡುತ್ತಿರುವುದು. ಇದು ದರ್ಶನ್‌ ಮನೆಯ ಸಿಸಿಟಿಯಲ್ಲಿ ದಾಖಲಾಗಿದೆ.

ಪ್ರಕರಣದ ಎ1 ಆರೋಪಿ ಪವಿತ್ರಾಗೌಡರನ್ನು ಮನೆಯಿಂದ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯ. ಇಲ್ಲಿ ಪವಿತ್ರಾಗೌಡ ಅವರ ಪಕ್ಕದ ಮನೆಯವರಾದ ಮಧುಸೂಧನ್‌ ಅವರ ಮನೆಯ ಸಿಸಿಟಿವಿಯಿಂದ ಈ ದೃಶ್ಯ ಪಡೆಯಲಾಗಿದೆ.

ದರ್ಶನ್‌ ಹಾಗೂ ಪವಿತ್ರಾ ಗೌಡ ಕಾರ್‌ನಲ್ಲಿ ಪಟ್ಟಣಗೆರೆ ಶೆಡ್‌ಗೆ ಬರುತ್ತಿರುವ ಚಿತ್ರ. ವಿನಯ್‌ ಹಾಗೂ ಪ್ರದೋಶ್‌ ಕೂಡ ಈ ಹಂತದಲ್ಲಿ ಕಾರ್‌ನಲ್ಲಿಯೇ ಇದ್ದರು. ಪಟ್ಟಣಗೆರೆ ಶೆಡ್‌ ಬಳಿ ನಿವಾಸಿ ತಿಪ್ಪೇಸ್ವಾಮಿ ಅವರ ಮನೆಯ ಸಿಸಿಟಿವಿಯಿಂದ ಸೆರೆಯಾಗಿದೆ.

ಎ1 ಪವಿತ್ರಾ ಗೌಡ ಹಾಗೂ ಪ್ರಕರಣದಲ್ಲಿ ಸಾಕ್ಷಿಯಾಗಿರುವ ಪುನೀತ್‌ ಜೊತೆಯಲ್ಲಿ ಶೆಡ್‌ನಿಂದ ಕಾರಿನಲ್ಲಿ ಹೋಗುತ್ತಿರುವ ದೃಶ್ಯ. ಇದು ಪಟ್ಟಣಗೆರೆಯ ತಿಪ್ಪೇಸ್ವಾಮಿ ಅವರ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುತ್ತದೆ.

ರೇಣುಕಾಸ್ವಾಮಿಯ ಮೃತದೇಹವನ್ನು ಸುಮ್ಮನಹಳ್ಳಿ ಬ್ರಿಜ್‌ ಬಳಿಯ ಮೋರಿ ಬಳಿ ಬಿಸಾಡಿ ಹೋಗುತ್ತಿರುವುದು. ಸತ್ವ ಅಪಾರ್ಟ್‌ಮೆಂಟ್‌ನ ಸಿಸಿಟಿವಿಯಲ್ಲಿ ಇದು ದಾಖಲಾಗಿದೆ.

ಇನ್ನು ರೇಣುಕಾಸ್ವಾಮಿಯ ಶವವನ್ನು ಬಿಸಾಡಿದ ಬಳಿಕ ಜೂನ್‌ 10 ರಂದು ಎ4 ರಾಘವೇಂದ್ರ, ಎ15 ಕೇಶವಮೂರ್ತಿ ಹಾಗೂ ಎ17 ನಿಖಿಲ್‌ ನಾಯ್ಕ್‌ ಕಾಮಾಕ್ಷಿ ಪಾಳ್ಯ ಪೊಲೀಸ್‌ ಠಾಣೆಗೆ ಶರಣಾಗಲು ಬರುತ್ತಿರುವ ದೃಶ್ಯ. ಇದು ಪೊಲೀಸ್‌ ಠಾಣೆ ಬಳಿಯ ಶಂಕರ ಟಿಂಬರ್ಸ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ.

ರಾಘವೇಂದ್ರ, ಕೇಶವಮೂರ್ತಿ ಹಾಗೂ ನಿಖಿಲ್‌ ನಾಯ್ಕ್‌ ಪೊಲೀಸ್‌ ಠಾಣೆಗೆ ಶರಣಾದ ಬಳಿಕ ಪ್ರಕರಣದಲ್ಲಿ ಎ14 ಪ್ರದೂಶ್‌, ನಾಗರಾಜ್‌, ಲಕ್ಷ್ಮಣ್‌ ಹಾಗೂ ದೀಪಕ್‌  ಸ್ಕಾರ್ಪಿಯೋ ಕಾರ್‌ನಲ್ಲಿ ತೆರಳುತ್ತಿರುವ ದೃಶ್ಯ ಶಂಕರ್‌ ಟಿಂಬರ್ಸ್‌ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆರೋಪಿ ದರ್ಶನ್‌ ಕೃತ್ಯದ ವೇಳೆ ಬಳಸಿದ್ದ ಶೂಗಳನ್ನು ಪ್ರೆಸ್ಟೀಜ್‌ ಸೌತ್‌ ರಿಟ್ಜ್‌ ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ರೂಮ್‌ನಲ್ಲಿ ನಡೆದ ಪಂಚನಾಮೆಯ ವೇಳೆ ವಶಪಡಿಸಿಕೊಂಡ ಪೊಲೀಸರು.

ದರ್ಶನ್‌ನನ್ನು ಆರೋಪಿಗಳಾದ ವಿನಯ್‌, ನಾಗರಾಜ್‌ ಹಾಗೂ ಪ್ರದೂಶ್‌ ಮೈಸೂರಿನ ರಾಡಿಸನ್‌ ಬ್ಲ್ಯೂ ಹೋಟೆಲ್‌ನಲ್ಲಿ ಭೇಟಿ ಮಾಡಲು ಬರುತ್ತಿರುವುದು.ಈ ದೃಶ್ಯಗಳು ಹೋಟೆಲ್‌ನ ಸಿಸಿಟಿವಿಯಲ್ಲಿ ದಾಖಲಾಗಿದೆ.

ಕೃತ್ಯದ ವೇಳೆ ದರ್ಶನ್‌ ಹಾಗೂ ಪವಿತ್ರಾ ಗೌಡ ಧರಿಸಿದ್ದ ಶೂಗಳು ಹಾಗೂ ಚಪ್ಪಲಿಗಳು. ಚಪ್ಪಲಿಗೆ ಹಿಡಿದಿದ್ದ ಮಣ್ಣಿನ ಮಾದರಿಯ ರಿಪೋರ್ಟ್‌ ಕುಡ ಚಾರ್ಜ್‌ಶೀಟ್‌ನಲ್ಲಿದೆ. ರೇಣುಕಾಸ್ವಾಮಿಗೆ ಹೊಡೆದ ಚಪ್ಪಲಿಯ ವಿವರಗಳೂ ಇವೆ.

ದರ್ಶನ್‌ ಹಾಗೂ ಪವಿತ್ರಾ ಗೌಡರನ್ನು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎ1 ಹಾಗೂ ಎ2 ಆರೋಪಿಗಳಾಗಿ ಗುರುತಿಸಿದ ಬಳಿಕ ಠಾಣೆಯಲ್ಲಿ ತೆಗೆದಿರುವ ಅವರ ಚಿತ್ರಗಳು.

Latest Videos

click me!