ಅಶ್ಲೀಲ ಸಿನಿಮಾಗಳನ್ನು ವಿತರಣೆ ಮಾಡಲು ರಾಜ್ ಕುಂದ್ರಾ 'ಹಾಟ್‌ಶಾಟ್ಸ್' ಎಂಬ ಆ್ಯಪ್ ಮಾಡಿಕೊಂಡಿದ್ದರು.
ಆ ಆ್ಯಪ್‌ನಿಂದ ಅವರು ಬರೀ ಐದು ತಿಂಗಳಿಗೆ ಕುಂದ್ರಾ ಬರೋಬ್ಬರಿ 1.17 ಕೋಟಿ ರೂ. ಹಣ ಮಾಡಿಕೊಂಡಿದ್ದರು ಎನ್ನುವುದು ಅಂಕಿ ಅಂಶಗಳು ತೆರೆದಿಟ್ಟ ವಿಚಾರ.
ನ್ಯಾಯಾಂಗ ಬಂಧನದಲ್ಲಿರುವ ಕುಂದ್ರಾ ವಿಚಾರಣೆ ಎದುರಿಸುತ್ತಿದ್ದಾರೆ.
ಕಳೆದ ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ 'ಹಾಟ್‌ಶಾಟ್ಸ್' ಆ್ಯಪ್‌ನಿಂದಲೇ ರಾಜ್ ಕುಂದ್ರಾ 1.17 ಕೋಟಿ ರೂ. ಆದಾಯ ಪಡೆದುಕೊಂಡಿದ್ದಾರೆ ಎಂದು ಪೊಲೀಸರು ಕೋರ್ಟ್ ಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜುಲೈ 19ರಂದು ಪೊಲೀಸರಿಂದ ಬಂಧನಕ್ಕೊಳಪಟ್ಟಿದ್ದ ರಾಜ್ ಕುಂದ್ರಾರನ್ನು ಜುಲೈ 27ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಇದೀಗ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಪ್ರಕರಣ ಸಂಬಂಧ ಶಿಲ್ಪಾ ಶೆಟ್ಟಿ ಅವರನ್ನು ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದರು.
ಎಲ್ಲ ಕೋನಗಳಿಂದ ಪ್ರಕರಣದ ತನಿಖೆ ನಡೆಯುತ್ತಿದೆ.ಇದಕ್ಕೆ ಸಂಬಂಧಿಸಿ ಇನ್ನಷ್ಟು ಜನರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.