ಪ್ರೀತಿಸಿ ಮದುವೆಯಾದ್ರು: ಆದ್ರೆ ಸಂಸಾರಕ್ಕೆ ಕೊಳ್ಳಿ ಇಟ್ಟ ಪತ್ನಿಯ ಆ ವಿಡಿಯೋ!

Published : Jul 24, 2021, 04:22 PM IST

ಸೋಷಿಯಲ್ ಮೀಡಿಯಾದ ಯುಗದಲ್ಲಿ, ಒಂದಾಗಿ ಬಾಳುವ ಕನಸು ಕಂಡು ಸಪ್ತಪದಿ ತುಳಿದು ಏಳೇಳು ಜನ್ಮ ಒಟ್ಟಾಗಿ ಬಾಳುವ ಮಾತು ಕೊಟ್ಟು ಮದುವೆಯಾಗಿದ್ದ ನವದಂಪತಿ, ಕೆಲವೇ ಸಮಯದಲ್ಲಿ ಸಂಬಂಧವನ್ನು ಮುರಿದಿದ್ದಾರೆ. ಹೌದು ಉತ್ತರ ಪ್ರದೇಶದ ಕಾನ್ಪುರದಿಂದ ಬೆಳಕಿಗೆ ಬಂದಿದೆ, ಮದುವೆಯಾದ ಕೇವಲ 10 ತಿಂಗಳಲ್ಲೇ ಯುವತಿಯೊಬ್ಬಳು ತನ್ನ ಗಂಡನ ಜೊತೆಗಿನ ಎಲ್ಲಾ ಸಂಬಂಧ ಕಡಿದುಕೊಂಡು, ಸದ್ದಿಲ್ಲದೆ ಇನ್ನೊಬ್ಬನನ್ನು ಮದುವೆಯಾಗಿದ್ದಾಳೆ. ಪ್ರೀತಿಸಿದ ಹುಡುಗನನ್ನೇ ಮದುವೆಯಾಗಿದ್ದರೂ, ಸಂಬಂಧ ಕಡಿದು ಬೇರೊಬ್ಬನೊಂದಿಗೆ ಮದುವೆಯಾಗಿದ್ದಾಳೆ. ಪತಿ ತನ್ನ ಹೆಂಡತಿಯ ವಿವಾಹದ ಈ ವೀಡಿಯೋ ಕಂಡು ಹೌಹಾರಿದ್ದಾನೆ.   

PREV
16
ಪ್ರೀತಿಸಿ ಮದುವೆಯಾದ್ರು: ಆದ್ರೆ ಸಂಸಾರಕ್ಕೆ ಕೊಳ್ಳಿ ಇಟ್ಟ ಪತ್ನಿಯ ಆ ವಿಡಿಯೋ!
ವಾಸ್ತವವಾಗಿ, ಈ ಪ್ರಕರಣ ಕಾನ್ಪುರ ಜಿಲ್ಲೆಯ ಬಾಬುಪುರ್ವಾದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಅಮಿತ್ ಶರ್ಮಾ ಹಾಗೂ ಗೋವಿಂದ್ ನಗರ ನಿವಾಸಿ ರುಚಿ ವರ್ಮಾ ಜೊತೆ ಸಂಬಂಧವಿತ್ತು. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಲು ಬಯಸಿದ್ದರು. ಮಕ್ಕಳ ಸಂತೋಷಕ್ಕಾಗಿ, ಎರಡೂ ಕುಟುಂಬಗಳ ಈ ಮದುವೆಗೆ ಒಪ್ಪಿದ್ದವು. 2020 ರ ಜೂನ್ 4 ರಂದು ಆರ್ಯಸಮಾಜ್ ದೇವಸ್ಥಾನದಲ್ಲಿ ಇವರ ವಿವಾಹವಾತ್ಯ ಕೊರೋನಾ ಕಾಲದಿಂದಾಗಿ, ಈ ಮದುವೆ ದೇವಾಲಯದಲ್ಲಿ ನಡೆಯಿತು. ಅಲ್ಲಿ ಆರ್ಯ ಸಮಾಜ ಸಂಸ್ಥೆಯಿಂದ ಮದುವೆ ಪ್ರಮಾಣಪತ್ರವನ್ನೂ ನೀಡಲಾಯಿತು.

26
ಪ್ರೇಮಿಗಳಾಗಿದ್ದವರು ಗಂಡ ಮತ್ತು ಹೆಂಡತಿಯಾಗಿ ಬಹಳ ಆರಾಮ ಜೀವನವನ್ನು ನಡೆಸುತ್ತಿದ್ದರು. ಆದರೆ ಮದುವೆಯಾದ ನಾಲ್ಕು ತಿಂಗಳ ನಂತರ, ಅಂದರೆ ಸೆಪ್ಟೆಂಬರ್‌ನಲ್ಲಿ, ಇದ್ದಕ್ಕಿದ್ದಂತೆ ಅದೇನಾಯ್ತೋ?, ಸಂಬಂಧಿಕರ ಮನೆಯಲ್ಲಿ ಮದುವೆ ಎಂದು ಹೆಂಡತಿ ಚಿನ್ನಾಭರಣ ಪಡೆದು ತಾಯಿಯೊಂದಿಗೆ ಮನೆಯಿಂದ ಹೋಗಿದ್ದಳು. ಕೆಲವು ದಿನಗಳ ನಂತರ ಗಂಡ ಹೆಂಡತಿಯನ್ನು ಕರೆಯಲು ಕರೆ ಮಾಡಿದ್ದಾನೆ. ಮೊಬೈಲ್ ಸ್ವಿಚ್ ಆಫ್ ಎಂದು ಬಂದಿದೆ. ಹೀಗಾಗಿ ಗಂಡ ತನ್ನ ಹೆಂಡತಿಯನ್ನು ಕರೆದೊಯ್ಯಲು ಅತ್ತೆ ಮನೆಗೆ ಹೋಗಿದ್ದಾನೆ. ಆದರೆ ಈ ವೇಳೆ ಆಕೆ ಗಂಡನ ಜೊತೆ ಹೋಗಲು ನಿರಾಕರಿಸಿದ್ದಾಳೆ.

36
ಅಲ್ಲಿಂದ ವಾಪಾಸಾದ ಗಂಡ ಹೆಂಡತಿಗೆ ಅದೇನೋ ಕೋಪ ಇರಬಹಹುದು, ಆಕೆ ಮರಳಬಹುದೆಂದು ಒಂದೆರಡು ತಿಂಗಳು ಕಾದಿದ್ದಾನೆ. ಆದರೆ ಹೆಂಡತಿ ಮಾತ್ರ ಮರಳಿ ಬಂದಿಲ್ಲ. ಇದಾದ ಬಳಿಕ ಏನಾಗಿದೆ ಎಂದು ತಿಳಿದುಕೊಳ್ಳಲು ಆತ ತನಿಖೆ ಆರಂಭಿಸಿದ್ದು, ಈ ವೇಳೆ ಕಂಡುಕೊಂಡ ಸತ್ಯ ಆತನನ್ನು ಬೆಚ್ಚಿ ಬೀಳಿಸಿದೆ. ಹೌದು ಆತನಿಗೆ ತನ್ನ ಹೆಂಡತಿ ಮತ್ತೊಂದು ಮದುವೆಯಾದ ವಿಡಿಯೋ ಸಿಕ್ಕಿದ್ದು, ಇದನ್ನು ಕಂಡು ದಂಗಾಗಿದ್ದಾನೆ.

46
ಈಗ ಸಂತ್ರಸ್ತೆ ಅಮಿತ್ ತನ್ನ ದೂರು ಮತ್ತು ಹೆಂಡತಿಯ ಎರಡನೇ ಮದುವೆಯ ವಿಡಿಯೋ ಜೊತೆ ಪೊಲೀಸ್ ಠಾಣೆಯನ್ನು ತಲುಪಿದ್ದು, ಅಲ್ಲಿ ಅಧಿಕಾರಿಗಳ ಮುಂದೆ ನ್ಯಾಯಕ್ಕಾಗಿ ಮನವಿ ಮಾಡಿದ್ದಾನೆ. ಯಾವುದೇ ವಿವರಗಳನ್ನು ನೀಡದೆ ಮತ್ತು ಹೇಳದೆ ಪತ್ನಿ ಮತ್ತೆ ಮದುವೆಯಾಗಿದ್ದಾಳೆ ಎಂದು ಯುವಕ ದೂರಿದ್ದಾನೆ. ಇದು ಕಾನೂನಿನ ಅನ್ವಯ ಅಪರಾಧ. ಅವರು ತಮ್ಮ ಕುಟುಂಬದೊಂದಿಗೆ ನನಗೆ ಮತ್ತು ನನ್ನ ಕುಟುಂಬಕ್ಕೆ ದ್ರೋಹ ಮಾಡಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

56
ಆಶ್ಚರ್ಯಕರ ಸಂಗತಿಯೆಂದರೆ, ಮಹಿಳೆ ತನ್ನ ಎರಡನೇ ಮದುವೆಯನ್ನು ಆರ್ಯಸಮಾಜ್ ದೇವಸ್ಥಾನದಲ್ಲಿಯೇ ಮಾಡಿದ್ದಾರೆ. ಅಲ್ಲಿ ಅವರು ಜುಲೈ 2 ರಂದು ಇನ್ನೊಬ್ಬ ವ್ಯಕ್ತಿಯೊಂದಿಗೆ ಸಪ್ತಪದಿ ತುಳಿದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇನ್ನು ತನ್ನ ಹೆಂಡತಿ ಮೂರು ಮದುವೆಯಾಗಿದ್ದಾಳೆ ಎಂದು ಪತಿ ಆರಂಭಿಸಿದ್ದಾರೆ.

66
ಕಾನ್ಪುರ ಪೊಲೀಸ್ ಠಾಣೆಯಲ್ಲಿ ಪತ್ನಿ ವಿರುದ್ಧ ಪತಿ ಅಮಿತ್ ಶರ್ಮಾ ನೀಡಿರುವ ದೂರಿನ ಪ್ರತಿ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories