ಹಾವೇರಿ (ಜು. 25) ಅಕ್ರಮವಾಗಿ ಬಳಸಲಾಗುತ್ತಿದ್ದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಛತ್ರ ಗ್ರಾಮದ ಬಳಿಯ ಕಲ್ಲಿನ ಕ್ವಾರಿ ಮೇಲೆ ದಾಳಿ ಮಾಡಲಾಗಿದೆ. ಐಜಿಪಿ ವಿಶೇಷ ತಂಡ ದಿಢೀರ್ ದಾಳಿ ನಡೆಸಿದೆ. ಹಳಲಗೇರಿ ಕಣಿವೆಯಲ್ಲಿ ಅನಧಿಕೃತವಾಗಿ ಬ್ಲಾಸ್ಟ್ ಮಾಡಲು ಬಳಲಾಗುತ್ತಿದ್ದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ನಾಲ್ಕು ಜನ ಆರೋಪಿಗಳು, ಹಿಟಾಚಿ, ಕಂಪ್ರಾಸರ್, 55 ಜಿಲೆಟಿನ್ ಜೆಲ್, 19 ಎಲೆಕ್ಟ್ರಾನಿಕ್ ಡಿಟೋನೆಟರ್ ವಶಕ್ಕೆ ಪಡೆಯಲಾಗಿದೆ. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಮತ್ತು ಚಾಮರಾಜನಗರದಲ್ಲಿ ಇಂಥ ಅಕ್ರಮ ಸ್ಫೋಟಕಗಳಿಂದ ಅನಾಹುತ ಸಂಭವಿಸಿತ್ತು . Gelatine sticks cause forblast in Haveri Four arrested ಹಾವೇರಿಯಲ್ಲಿಯೂ ಜಿಲೆಟಿನ್ ಸುಳಿವು, ಕ್ವಾರಿ ಮೇಲೆ ದಾಳಿ